ಸೆನ್ಸೆಕ್ಸ್‌ 75000: ಮೋದಿ ಪ್ರಧಾನಿಯಾದ ಬಳಿಕ 50,000 ಏರಿಕೆ!

KannadaprabhaNewsNetwork |  
Published : Apr 11, 2024, 12:48 AM ISTUpdated : Apr 11, 2024, 05:51 AM IST
Sensex All time high

ಸಾರಾಂಶ

ಬಾಂಬೆ ಷೇರುಪೇಟೆ ಸೂಚ್ಯಂಕ ಬುಧವಾರ ಸಾರ್ವಕಾಲಿಕ ದಾಖಲೆ ಬರೆದಿದ್ದು, ಇದೇ ಮೊದಲ ಬಾರಿ 75,000 ಅಂಕಗಳನ್ನು ತಲುಪಿದೆ. ಒಂದೇ ದಿನ 354 ಅಂಕಗಳಷ್ಟು ಏರಿದ ಸಂವೇದಿ ಸೂಚ್ಯಂಕ 75,038ರಲ್ಲಿ ಕೊನೆಗೊಂಡಿದೆ.

 ಮುಂಬೈ :  ಬಾಂಬೆ ಷೇರುಪೇಟೆ ಸೂಚ್ಯಂಕ ಬುಧವಾರ ಸಾರ್ವಕಾಲಿಕ ದಾಖಲೆ ಬರೆದಿದ್ದು, ಇದೇ ಮೊದಲ ಬಾರಿ 75,000 ಅಂಕಗಳನ್ನು ತಲುಪಿದೆ. ಒಂದೇ ದಿನ 354 ಅಂಕಗಳಷ್ಟು ಏರಿದ ಸಂವೇದಿ ಸೂಚ್ಯಂಕ 75,038ರಲ್ಲಿ ಕೊನೆಗೊಂಡಿದೆ. ಅದರೊಂದಿಗೆ, ಹೂಡಿಕೆದಾರರ ಸಂಪತ್ತು ಒಂದೇ ದಿನ 2 ಲಕ್ಷ ಕೋಟಿ ರು.ಗಳಷ್ಟು ಏರಿಕೆಯಾಗಿದೆ.

ವಿಶೇಷವೆಂದರೆ, ನರೇಂದ್ರ ಮೋದಿ ಪ್ರಧಾನಿಯಾದ 2014ರಲ್ಲಿ ಷೇರುಪೇಟೆ ಸೂಚ್ಯಂಕ 25,000 ಇತ್ತು. ಹತ್ತು ವರ್ಷಗಳಲ್ಲಿ ಅದು 50,000 ಏರಿಕೆಯಾಗಿ 75,000 ಅಂಕಗಳನ್ನು ತಲುಪಿದೆ.

ಇದೇ ವೇಳೆ, ನಿಫ್ಟಿ ಸೂಚ್ಯಂಕ ಕೂಡ ಸಾರ್ವಕಾಲಿಕ ದಾಖಲೆ ಬರೆದಿದೆ. ಬುಧವಾರ ಎನ್‌ಎಸ್‌ಇ 111 ಅಂಕ ಏರಿಕೆ ಕಂಡು, 22,753 ಅಂಕಗಳಲ್ಲಿ ಕೊನೆಗೊಂಡಿತು. ತ್ವರಿತವಾಗಿ ಮಾರಾಟವಾಗುವ ಎಫ್‌ಎಂಸಿಜಿ ಉತ್ಪನ್ನಗಳು, ಇಂಧನ ಹಾಗೂ ಲೋಹದ ಕಂಪನಿಗಳ ಷೇರಿನ ಬೆಲೆ ಭಾರಿ ಏರಿಕೆ ಕಂಡ ಪರಿಣಾಮ ಬುಧವಾರ ಷೇರು ಮಾರುಕಟ್ಟೆ ಹೊಸ ಎತ್ತರವನ್ನು ತಲುಪಿತು. ಐಟಿಸಿ, ಕೊಟಕ್‌ ಮಹಿಂದ್ರಾ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಎಸ್‌ಬಿಐ, ಏಷ್ಯನ್‌ ಪೇಂಟ್ಸ್‌, ಟೆಕ್‌ ಮಹಿಂದ್ರಾ, ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ನೆಸ್ಲೆ ಕಂಪನಿಗಳ ಷೇರುಗಳು ದೊಡ್ಡ ಮಟ್ಟದ ಏರಿಕೆ ಕಂಡವು.

10 ವರ್ಷದಲ್ಲಿ ಅಗಾಧ ಏರಿಕೆ:

2014ರಲ್ಲಿ ಬಾಂಬೆ ಷೇರುಪೇಟೆ ಸೂಚ್ಯಂಕ 25,000 ಇತ್ತು. ಬಳಿಕ ಎನ್‌ಡಿಎ ಸರ್ಕಾರ ಜಾರಿಗೊಳಿಸಿದ ಉದ್ಯಮಸ್ನೇಹಿ ನೀತಿಗಳಿಂದಾಗಿ ಷೇರುಪೇಟೆ ಭಾರೀ ಏರಿಕೆಯನ್ನು ದಾಖಲಿಸುತ್ತಾ ಸಾಗಿತು. ಅದು ಹತ್ತು ವರ್ಷಗಳಲ್ಲಿ 50,000ಗಳಷ್ಟು ಏರಿಕೆಯಾಗಿ, 75,000ವನ್ನು ತಲುಪಿತು. ಈ ಹತ್ತು ವರ್ಷಗಳಲ್ಲಿ ಬಿಎಸ್‌ಇಯಲ್ಲಿ ನೋಂದಾಯಿತವಾದ ಕಂಪನಿಗಳ ಮಾರುಕಟ್ಟೆ ಬಂಡವಾಳ ಐದು ಪಟ್ಟು ಏರಿಕೆಯಾಗಿದೆ.

ಸೆನ್ಸೆಕ್ಸ್‌ ಏರುಹಾದಿ

2014 - 25000

2018 - 35000

2019 - 40000

2019 - 50000

2021 - 60000

2023 - 70000

2024 - 75000

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ