ಮುಸ್ಲಿಮರ ಸಂಖ್ಯೆ ಹೆಚ್ಚಳಕ್ಕೆ ಒಳ ನುಸುಳಿವಿಕೆ ಕಾರಣ : ಶಾ

KannadaprabhaNewsNetwork |  
Published : Oct 11, 2025, 12:02 AM IST
ಶಾ  | Kannada Prabha

ಸಾರಾಂಶ

ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳಕ್ಕೆ ಒಳನುಸುಳುವಿಕೆಯೇ ಕಾರಣ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದಕ್ಕೆಂದೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

 ನವದೆಹಲಿ :  ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳಕ್ಕೆ ಒಳನುಸುಳುವಿಕೆಯೇ ಕಾರಣ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದಕ್ಕೆಂದೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ದೈನಿಕ್‌ ಜಾಗರಣ್‌ ಏರ್ಪಡಿಸಿದ್ದ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಭಾರತದಲ್ಲಿ ಮುಸ್ಲಿಮರ ಹೆಚ್ಚಳಕ್ಕೆ ಒಳನುಸುಳುವಿಕೆ ಪ್ರಮುಖ. ಸ್ವಾತಂತ್ರ್ಯದ ನಂತರ ನಡೆದ ಜನಗಣತಿಯಲ್ಲಿ ಇದು ಕಂಡುಬರುತ್ತದೆ. 1951 ರಲ್ಲಿ, ಹಿಂದೂಗಳು ಶೇ. 84ರಷ್ಟಿದ್ದರೆ, ಮುಸ್ಲಿಮರು ಶೇ. 9.8ರಷ್ಟಿದ್ದರು. 1971 ರಲ್ಲಿ ಹಿಂದೂಗಳು 82% ಹಾಗೂ ಮುಸ್ಲಿಮರು ಶೇ.11ರಷ್ಟಿದ್ದರು.  

1991ರಲ್ಲಿ, ಹಿಂದೂಗಳ ಸಂಖ್ಯೆ ಶೇ.81ಕ್ಕೆ ಕುಸಿದರೆ, ಮುಸ್ಲಿಮರ ಸಂಖ್ಯೆ ಶೇ.12.21ಕ್ಕೇರಿತು. 2011ರಲ್ಲಿ ಹಿಂದುಗಳ ಸಂಖ್ಯೆ ಶೇ.79ಕ್ಕೆ ಇಳಿದು, ಮುಸ್ಲಿಮರ ಸಂಖ್ಯೆ ಶೇ.14.2ಕ್ಕೆ ಏರಿತು. 2011ರ ಜನಗಣತಿಯಲ್ಲಿ ಮುಸ್ಲಿಂ ಸಂಖ್ಯೆ ಏರಿಕೆ ಪ್ರಮಾಣ ಶೇ.24.6 ಇದ್ದರೆ ಹಿಂದುಗಳ ಜನಸಂಖ್ಯೆ ಏರಿಕೆ ಗತಿ ಶೇ.16.8ರಷ್ಟು ಇತ್ತು. ಅಸ್ಸಾಂ, ಬಂಗಾಳದಂಥ ಗಡಿಯಲ್ಲಿ ಮುಸ್ಲಿಂ ಸಖ್ಯೆ ಏರಿಕೆ ವಿಪರೀತವಾಗಿದೆ. ಒಳನುಸುಳುವಿಕೆ ಇಲ್ಲದೇ ಇದು ಸಾಧ್ಯವೇ ಇಲ್ಲ. ಇದಕ್ಕೆ ಕೆಲವು ಪಕ್ಷಗಳ ಮತಬ್ಯಾಂಕ್‌ ರಾಜಕೀಯ ಕಾರಣ’ ಎಂದರು. ಈ ಮೂಲಕ, ’ಒಳನುಸುಳುವಿಕೆಗೆ ಸರಿಯಾಗಿ ಗಡಿ ಕಾಯದ ಕೇಂದ್ರ ಸರ್ಕಾರದ ಅಡಿ ಬರುವ ಬಿಎಸ್‌ಎಫ್‌ ನಿರ್ಲಕ್ಷ್ಯ ಕಾರಣ’ ಎಂದ ಟಿಎಂಸಿ ನಾಯಕಿ ಮಮತಾ ಬ್ಯಾಣರ್ಜಿಗೆ ತಿರುಗೇಟು ನೀಡಿದರು.

‘ಮತಪಟ್ಟಿ ಪರಿಷ್ಕರಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಏಕೆಂದರೆ ಇದು ದೇಶ ಹಿತಕ್ಕೆ ಸೇರಿದ ಆಂದೋಲನ. ಅಕ್ರಮ ವಲಸಿಗರನ್ನು ಮತಪಟ್ಟಿಯಿಂದ ಹೊರಹಾಕಲಾಗುತ್ತದೆ. ಮಾತ್ರವಲ್ಲದೆ ದೇಶದಿಂದಲೇ ಗಡೀಪಾರು ಮಾಡಲಾಗುತ್ತದೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ