ಅಂತರಿಕ್ಷದಲ್ಲಿ ಶುಕ್ಲಾ ನಡೆಸಿದ ಎಲ್ಲ 7 ಪ್ರಯೋಗ ಯಶಸ್ವಿ: ಇಸ್ರೋ

KannadaprabhaNewsNetwork |  
Published : Jul 15, 2025, 11:45 PM ISTUpdated : Jul 16, 2025, 04:20 AM IST
ಶುಕ್ಲಾ | Kannada Prabha

ಸಾರಾಂಶ

ಆಕ್ಸಿಯೋಂ-4 ಮಿಷನ್‌ನ್ನು ಯಶಸ್ವಿಯಾಗಿರುವ ಮುಗಿಸಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷದಲ್ಲಿ ಧಾರವಾಡದ ಹೆಸರು ಮತ್ತು ಮೆಂತ್ಯೆ ಬೆಳೆದಿರುವುದು ಸೇರಿದಂತೆ ಎಲ್ಲ ಏಳು ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಇಸ್ರೋ ಹೇಳಿದೆ.

 ನವದೆಹಲಿ: ಆಕ್ಸಿಯೋಂ-4 ಮಿಷನ್‌ನ್ನು ಯಶಸ್ವಿಯಾಗಿರುವ ಮುಗಿಸಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷದಲ್ಲಿ ಧಾರವಾಡದ ಹೆಸರು ಮತ್ತು ಮೆಂತ್ಯೆ ಬೆಳೆದಿರುವುದು ಸೇರಿದಂತೆ ಎಲ್ಲ ಏಳು ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಇಸ್ರೋ ಹೇಳಿದೆ. 

ಈ ಬಗ್ಗೆ ಇಸ್ರೋ ಮಾಹಿತಿ ನೀಡಿದ್ದು, ‘ಶುಕ್ಲಾ ಸೂಕ್ಷ್ಮ ಗುರುತ್ವಾಕರ್ಷಣೆಯ ಸ್ಥಳದಲ್ಲಿ ಎಲ್ಲ 7 ಪ್ರಯೋಗಳನ್ನು ಯಶಸ್ವಿಯಾಗಿ ಮಾಡುವ ಮೂಲಕ ಆಕ್ಸಿಯೋಂ-4 ಮಿಷನ್‌ ಪೂರ್ಣಗೊಳಿಸಿದ್ದಾರೆ’ ಎಂದಿದೆ. 

ಐಎಸ್‌ಎಸ್‌ನಲ್ಲಿ ಶುಕ್ಲಾ ನೀರು ಕರಡಿ (ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ), ಮಯೋಜೆನೆಸಿಸ್ (ಬೆಂಗಳೂರಿನ ಬ್ರಿಕ್ ಇನ್ ಸ್ಟೆಮ್ ಸಂಸ್ಥೆ), ಹೆಸರು ಮತ್ತು ಮೆಂತ್ಯೆ ಮೊಳಕೆ( ಧಾರವಾಡ ಕೃಷಿ ವಿವಿ), ಸೈನೋ ಬ್ಯಾಕ್ಟಿರೀಯಾ, ಸೂಕ್ಷ್ಮ ಪಾಚಿಗಳ ಅಧ್ಯಯನ, ಆಹಾರ ಬೆಳೆಗಳ ಅಧ್ಯಯನ ಮತ್ತು ವಾಯೇಜರ್‌ ಡಿಸ್‌ಪ್ಲೇ (ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ) ಅಧ್ಯಯನಗಳನ್ನು ಯೋಜನೆ ಹಾಕಿಕೊಂಡಂತೆ ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಇಸ್ರೋ ಹೇಳಿದೆ.

ಅಂತರಿಕ್ಷದಲ್ಲಿ ಹೇರ್‌ ಕಟ್‌ ಮಾಡಿಸಿಕೊಂಡ ಮೊದಲ ಭಾರತೀಯ ಶುಕ್ಲಾ

ನವದೆಹಲಿ: 18 ದಿನಗಳ ಅಂತರಿಕ್ಷ ಯಾನ ಕೈಗೊಂಡು ಭೂಮಿಗೆ ಮರಳಿರುವ ಭಾರತೀಯ ಗಗನಯಾತ್ರಿ ಶುಕ್ಲಾ ಮತ್ತೊಂದು ದಾಖಲೆ ಬರೆದಿದ್ದು, ಬಾಹ್ಯಾಕಾಶ ನಿಲ್ದಾಣದಲ್ಲಿ ಕೇಶ ವಿನ್ಯಾಸ ಮಾಡಿಕೊಂಡ ಭಾರತದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಶುಕ್ಲಾ ತಂಡದಲ್ಲಿರುವ ಅಮೆರಿಕದ ಗಗನಯಾತ್ರಿ ನಿಕೋಲ್ ಅರ್ಯಸ್‌ ಶುಭಾಂಶುವಿಗೆ ಅಪರೂಪದ ಕೇಶ ವಿನ್ಯಾಸ ಮಾಡಿದ್ದಾರೆ. ಈ ಕುರಿತ ಅವರು ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಕ್ಷೌರ ಮಾಡಿಸಿಕೊಂಡಿರುವ ಶುಭಾಂಶು ಶುಕ್ಲಾ ಹಾಗೂ ಸಹ-ಗಗನಯಾನಿಗಳ ಫೋಟೋಗಳು ವೈರಲ್ ಆಗಿದೆ.

ಭಾರತದ ಕನಸಿನ ಅಂತರಿಕ್ಷ ಯೋಜನೆಗಳತ್ತ ಮಹತ್ವದ ಹೆಜ್ಜೆ

ನವದೆಹಲಿ: ಮೊದಲ ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿ ಬರುವ ಮೂಲಕ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾರತದ ಕನಸಿನ ಬಾಹ್ಯಾಕಾಶ ಕೇಂದ್ರ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ. ಜತೆಗೆ, 2027ಕ್ಕೆ ಸ್ವದೇಶಿ ರಾಕೆಟ್‌ನಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳಿಸುವ ಗಗನಯಾನ ಸಾಕಾರಕ್ಕೂ ಇದು ಸಹಕಾರಿಯಾಗಲಿದೆ.2028ಕ್ಕೆ ಶುರು ಮಾಡಿ, 2035ರ ಹೊತ್ತಿಗೆ ಭಾರತೀಯ ಅಂತರಿಕ್ಷ ಕೇಂದ್ರವನ್ನು ಸ್ಥಾಪಿಸುವ ಗುರಿಯಿದೆ. ಇದಕ್ಕೆ ಶುಕ್ಲಾ ಅವರ ಐಎಸ್‌ಎಸ್‌ ಯಾನದ ಅನುಭವ ಮತ್ತು ಅಲ್ಲಿ ಕೈಗೊಂಡ ಪ್ರಯೋಗಗಳು ಉಪಯೋಗಕ್ಕೆ ಬರಲಿವೆ. ಶುಕ್ಲಾ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಸ್ರೋ ಈ ಯೋಜನೆಗಳು ನಡೆಯುವ ಸಾಧ್ಯತೆಯಿದೆ.

PREV
Read more Articles on

Latest Stories

ನಿಮಿಷಪ್ರಿಯಾಗೆ ಕ್ಷಮಾದಾನ ಬೇಡ, ಗಲ್ಲಾಗಲಿ
ಅಕ್ಬರ್‌ ಕ್ರೂರ, ಆದರೆ ಸಹಿಷ್ಣು, ಬಾಬರ್‌ ನಿರ್ದಯಿ: ಕೇಂದ್ರೀಯ ಪಠ್ಯ
ದೇಶದಲ್ಲಿ 9 ಲಕ್ಷ ಮಕ್ಕಳು ಒಂದೂ ಲಸಿಕೆ ಪಡೆದಿಲ್ಲ: ವರದಿ