ಆಯೋಗದಿಂದ 3 ಮತದಾರ ಸ್ನೇಹಿ ಕ್ರಮ ಘೋಷಣೆ

KannadaprabhaNewsNetwork |  
Published : Oct 06, 2025, 01:00 AM ISTUpdated : Oct 06, 2025, 07:44 AM IST
ಚುನಾವಣೆ | Kannada Prabha

ಸಾರಾಂಶ

ಬಿಹಾರದಲ್ಲಿ ಮುಕ್ತಾಯಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆಯಿಂದ ರಾಜ್ಯದ ಮತಪಟ್ಟಿ 22 ವರ್ಷಗಳ ಬಳಿಕ ಪೂರ್ಣ ಶುದ್ಧವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್‌ ಕುಮಾರ್‌ ಹೇಳಿದ್ದಾರೆ. 

 ಪಟನಾ :  ಬಿಹಾರದಲ್ಲಿ ಮುಕ್ತಾಯಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆಯಿಂದ ರಾಜ್ಯದ ಮತಪಟ್ಟಿ 22 ವರ್ಷಗಳ ಬಳಿಕ ಪೂರ್ಣ ಶುದ್ಧವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್‌ ಕುಮಾರ್‌ ಹೇಳಿದ್ದಾರೆ. ಜತೆಗೆ, ಈ ಬಾರಿಯ ಬಿಹಾರ ಚುನಾವಣೆಯಲ್ಲಿ 3 ಹೊಸ ಉಪಕ್ರಮಗಳನ್ನು ಪರಿಚಯಿಸಲಾಗಿದ್ದು, ಅವನ್ನು ದೇಶವ್ಯಾಪಿಯೂ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.

ಅತಿಶೀಘ್ರ ನಡೆಯಲಿರುವ ವಿಧಾನಸಭೆ ಚುನಾವಣೆಗಳ ತಯಾರಿ ಪರಿಶೀಲನೆಯ ಭಾಗವಾಗಿ ಬಿಹಾರ ಯಾತ್ರೆ ಮುಗಿಸಿದ ಬಳಿಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜ್ಞಾನೇಶ್ ಆಯೋಗದ 3 ಹೊಸ ಕ್ರಮಗಳನ್ನು ವಿವರಿಸಿದರು.

ಹೊಸ ಉಪಕ್ರಮಗಳೇನು?:- ಬಿಹಾರದಲ್ಲಿ ಹೊಸ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ಜಾರಿಗೆ ತರಲಾಗಿದೆ. ಇದರಡಿಯಲ್ಲಿ, ನೋಂದಣಿಯ 15 ದಿನಗಳಲ್ಲಿ ಮತದಾರರಿಗೆ ಅವರ ಮತಚೀಟಿ(ಎಪಿಕ್‌ ಕಾರ್ಡ್‌) ದೊರಕಲಿದೆ.

- ಗೌಪ್ಯತೆ ಕಾಪಾಡುವ ಉದ್ದೇಶದಿಂದ ಮತದಾನದ ವೇಳೆ ಮೊಬೈಲ್‌ ಕೊಂಡೊಯ್ಯುವಂತಿಲ್ಲ. ಹೀಗಾಗಿ ಮತಗಟ್ಟೆಗಳಲ್ಲಿ ಮೊಬೈಲ್‌ಅನ್ನು ಸುರಕ್ಷಿತವಾಗಿಡಲು ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಮೊಬೈಲ್‌ ಸುರಕ್ಷತೆಯ ಭಯ ಇನ್ನು ನಿವಾರಣೆಯಾಗಲಿದೆ.- ಪ್ರಸ್ತುತ ಮತಯಂತ್ರದಲ್ಲಿ ಅಭ್ಯರ್ಥಿಗಳ ಫೋಟೋ ಕಪ್ಪು-ಬಿಳುಪಾಗಿ ಇರುತ್ತಿತ್ತು. ಇದರಿಂದ ಮತದಾರರಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಅವರ ಗುರುತು ಹಿಡಿಯಲು ಕಷ್ಟವಾಗುತ್ತಿತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು ದೇಶದಲ್ಲಿ ಮೊದಲ ಬಾರಿ ಬಿಹಾರ ಚುನಾವಣೆಯಲ್ಲಿ ಬಳಸಲಾಗುವ ಮತಯಂತ್ರಗಳ ಬ್ಯಾಲೆಟ್‌ ಪೇಪರ್‌ನಲ್ಲಿ ಅಭ್ಯರ್ಥಿಗಳ ಬಣ್ಣದ ಫೋಟೋ ಇರಲಿದೆ. ಜತೆಗೆ ಅಭ್ಯರ್ಥಿಗಳ ಸೀರಿಯಲ್ ನಂಬರ್‌ ಗಾತ್ರವನ್ನೂ ದೊಡ್ಡದಾಗಿ ಬರೆಯಲಾಗುವುದು.

- ಮುಂದಿನ ದಿನಗಳಲ್ಲಿ ಈ ಕ್ರಮಗಳು ಎಲ್ಲಾ ರಾಜ್ಯಗಳಿಗೆ ವ್ಯಾಪಿಸಲಿವೆ.

ಬಿಹಾರದಲ್ಲಿ ನ,22ರೊಳಗೆ ಚುನಾವಣೆ: ಚು. ಆಯುಕ್ತ

ಪಟನಾ: ‘ಬಿಹಾರದ ಎಲ್ಲಾ 243 ಕ್ಷೇತ್ರಗಳಲ್ಲಿ ಚುನಾವಣಾ ನೋಂದಣಿ ಅಧಿಕಾರಿಗಳಿದ್ದರು. ಮತಪಟ್ಟಿ ಪರಿಷ್ಕರಣೆಯಲ್ಲಿ ಅವರಿಗೆ 90,207 ಬೂತ್‌ ಮಟ್ಟದ ಅಧಿಕಾರಿಗಳು ನೆರವಾಗಿದ್ದರು. ಹೀಗೆ ಮತಪಟ್ಟಿಯ ಶುದ್ಧೀಕರಣ ಮುಗಿಸಿದೆವು’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಹೇಳಿದರು. ಜತೆಗೆ, ನ.22ರ ಒಳಗೆ ಚುನಾವಣೆ ಮುಗಿಸುವುದಾಗಿಯೂ ತಿಳಿಸಿದರು. ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ಜೂನ್‌ನಲ್ಲಿ ಅರಂಭವಾಗಿತ್ತು. ಕಳೆದಬಾರಿ 2003ರಲ್ಲಿ ನಡೆದಿತ್ತು.

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ:

ಬಿಹಾರದಲ್ಲಿ ಮತದಾರರ ಪಟ್ಟಿ ಅಂತಿಮವಾಗಿದೆಯಾದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ 10 ದಿನ ಮುಂಚಿನ ಸಮಯದವರೆಗೂ ಮತದಾರ ಪಟ್ಟಿಯಲ್ಲಿ ಬದಲಾವಣೆಗೆ ಅವಕಾಶವಿದೆ. ಆವರೆಗೂ ಹೆಸರು ಸೇರ್ಪಡೆ ಅಥವಾ ಅಳಿಸುವಿಕೆ- ಎರಡನ್ನೂ ಮಾಡಲು ಅವಕಾಶವಿದೆ ಎಂದೂ ಜ್ಞಾನೇಶ್‌ ಕುಮಾರ್‌ ಹೇಳಿದರು.

PREV
Read more Articles on

Recommended Stories

ಕಾಫ್‌ ಸಿರಪ್‌ ಬಗ್ಗೆ ರಾಜ್ಯದಲ್ಲೂ ಆತಂಕ
ದೋಷಪೂರಿತ ಕಾಫ್‌ ಸಿರಪ್‌ಗಳ ಮೇಲೆ ಕಠಿಣ ಕ್ರಮ : ಕೇಂದ್ರ ಸೂಚನೆ