ಚುನಾವಣೆಗೆ ನಿಲ್ಲಲ್ಲ: ರಾಯ್‌ಬರೇಲಿ ಜನತೆಗೆ ಸೋನಿಯಾ ಸಂದೇಶ

KannadaprabhaNewsNetwork |  
Published : Feb 16, 2024, 01:47 AM ISTUpdated : Feb 16, 2024, 09:05 AM IST
sonia gandhi

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದಾಗಿ ರಾಯ್‌ಬರೇಲಿ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಕ್ಷೇತ್ರದ ಜನತೆಗೆ ಸೋನಿಯಾ ಗಾಂಧಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದಾಗಿ ರಾಯ್‌ಬರೇಲಿ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವುದಿಲ್ಲ. 

ಆದರೆ ನೀವು ಸದಾ ನನ್ನ ಮನದಲ್ಲಿರುತ್ತೀರಿ. ಮುಂದೆಯೂ ಗಾಂಧಿ ಕುಟುಂಬವನ್ನು ಹರಸಿ ಎಂದು ಕ್ಷೇತ್ರದ ಜನತೆಗೆ ಸೋನಿಯಾ ಗಾಂಧಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. 

ತಮ್ಮ ಕ್ಷೇತ್ರದ ಜನತೆಗೆ ರವಾನಿಸಿರುವ ಸಂದೇಶದಲ್ಲಿ ‘ನಾನು ಇಂದು ಈ ಸ್ಥಾನದಲ್ಲಿ ನಿಲ್ಲಲು ನೀವು ನನಗೆ ನೀಡಿದ ಪ್ರೋತ್ಸಾಹವೇ ಕಾರಣ. ಅದಕ್ಕಾಗಿ ನಾನು ನಿಮಗೆ ಸದಾ ಋಣಿಯಾಗಿರುತ್ತೇನೆ. 

ಫಿರೋಜ್‌ ಗಾಂಧಿಯ ಕಾಲದಿಂದಲೂ ನೀವು ನಮ್ಮ ಕುಟುಂಬಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಿ. 

ನನಗೂ ಸಹ ನನ್ನ ಗಂಡ ಕಾಲವಾದ ಬಳಿಕ ನಿಮ್ಮ ಮುಂದೆ ಬಂದು ನಿಂತಾಗ ನನ್ನ ಕೈ ಹಿಡಿದು ನಡೆಸಿದ್ದೀರಿ. 

ಅದೇ ರೀತಿ ಮುಂದೆಯೂ ಸಹ ನಮ್ಮ ಕುಟುಂಬಕ್ಕೆ ಸದಾ ಪ್ರೋತ್ಸಾಹಕರಾಗಿರಿ’ ಎಂದು ತಿಳಿಸಿದ್ದಾರೆ. 

ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ಅವರ ಮಗಳಾಗಿರುವ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಬಹುದು ಎಂಬ ಸುಳಿವು ನೀಡಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ