ಸೀರೆ ಇಲ್ಲದ ಸರಸ್ವತಿ ಮೂರ್ತಿ ಕೆತ್ತನೆ: ತ್ರಿಪುರಾದಲ್ಲಿ ವಿವಾದ

KannadaprabhaNewsNetwork |  
Published : Feb 16, 2024, 01:46 AM ISTUpdated : Feb 16, 2024, 08:43 AM IST
goddess

ಸಾರಾಂಶ

ವಸಂತ ಪಂಚಮಿಗೆ ತಯಾರಿಸಲಾಗಿದ್ದ ಸರಸ್ವತಿ ದೇವಿಯ ಮೂರ್ತಿಯನ್ನು ಹಿಂದೂ ಸಂಸ್ಕೃತಿಯ ವಿರುದ್ಧವಾಗಿ ಕೆತ್ತಿರುವುದನ್ನು ಎಬಿವಿಪಿ ಖಂಡಿಸಿದೆ

ಅಗರ್ತಲಾ: ತ್ರಿಪುರಾ ರಾಜಧಾನಿ ಅಗರ್ತಲಾದ ಲಲಿತಕಲಾ ಕಾಲೇಜಿನಲ್ಲಿ ವಸಂತ ಪಂಚಮಿಯಂದು ಪೂಜಿಸಲು ಕೆತ್ತನೆ ಮಾಡಲಾಗಿದ್ದ ಸರಸ್ವತಿ ದೇವಿಯ ವಿಗ್ರಹಕ್ಕೆ ಸೀರೆಯೇ ಇರಲಿಲ್ಲ ಎಂಬುದ ವಿವಾದಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿ ಎಬಿವಿಪಿ ಮತ್ತು ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಈ ಕುರಿತು ಮಾತನಾಡಿದ ತ್ರಿಪುರಾ ಎಬಿವಿಪಿ ಕಾರ್ಯದರ್ಶಿ ದಿಬಾಕರ್‌, ‘ಸರಸ್ವತಿ ದೇವಿಯ ವಿಗ್ರಹವನ್ನು ಅಶ್ಲೀಲವಾಗಿ ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟಿರದ ರೀತಿಯಲ್ಲಿ ಕೆತ್ತನೆ ಮಾಡಲಾಗಿದೆ. 

ಈ ಹಿನ್ನೆಲೆಯಲ್ಲಿ ಕಾಲೇಜಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.ಬಳಿಕ ಕಾಲೇಜು ಆಡಳಿತ ಮಂಡಳಿ ಸರಸ್ವತಿ ದೇವಿಯ ವಿಗ್ರಹವನ್ನು ತೆರವು ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹೋರ್ಮುಜ್‌ ಮೂಲಕ ನಿತ್ಯ 15 ನೌಕೆಗೆ ಇರಾನ್ ಅಸ್ತು
ಯುದ್ಧ ವಿರಾಮಕ್ಕೆಒಪ್ಪದಿದ್ರೆ ಇರಾನಿಗೆಮತ್ತೆ ದಾಳಿ : ಟ್ರಂಪ್‌