ಆ್ಯಕ್ಸಿಸ್‌ ಬ್ಯಾಂಕ್‌ನಿಂದ 4000 ಕೋಟಿ ರು. ಅಕ್ರಮ: ಸ್ವಾಮಿ ಪಿಐಎಲ್‌

KannadaprabhaNewsNetwork |  
Published : Feb 16, 2024, 01:54 AM ISTUpdated : Feb 16, 2024, 08:45 AM IST
ಸುಬ್ರಮಣಿಯನ್‌ ಸ್ವಾಮಿ | Kannada Prabha

ಸಾರಾಂಶ

ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದ್ದು, ಅದರ ವಿಚಾರಣೆಗೆ ಸಮಿತಿ ರಚನೆ ಕೋರಿ ಸುಬ್ರಮಣಿಯನ್‌ ಸ್ವಾಮಿ ಪಿಐಎಲ್‌ ದಾಖಲಿಸಿದ್ದಾರೆ.

ನವದೆಹಲಿ: ಆ್ಯಕ್ಸಿಸ್‌ ಬ್ಯಾಂಕ್‌ 4 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಹಣಕಾಸು ಅಕ್ರಮ ಎಸಗಿದೆ.

ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಹಿರಿಯ ರಾಜಕಾರಣಿ ಸುಬ್ರಮಣಿಯನ್‌ ಸ್ವಾಮಿ ದಿಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್‌) ದಾಖಲಿಸಿದ್ದಾರೆ. 

ಆ್ಯಕ್ಸಿಸ್‌ ಬ್ಯಾಂಕ್‌ ಫೆಬ್ರವರಿ ಮತ್ತು ಮಾರ್ಚ್‌ 2021ರ ಅವಧಿಯಲ್ಲಿ ಮ್ಯಾಕ್ಸ್‌ ಲೈಫ್‌ ಇನ್ಶೂರೆನ್ಸ್‌ನಲ್ಲಿನ ತನ್ನ ಷೇರುಗಳನ್ನು ಹೆಚ್ಚಿನ ಹಣಕ್ಕೆ ಮಾರಿದ್ದು ಕೆಲವೇ ದಿನಗಳ ಬಳಿಕ ನಿಮಯ ಉಲ್ಲಂಘಿಸಿ ಮಾರುಕಟ್ಟೆ ಮೌಲ್ಯಕ್ಕಿಂತ ಬಹಳ ಕಡಿಮೆ ಹಣಕ್ಕೆ ಆ ಷೇರುಗಳನ್ನು ಮತ್ತೆ ಖರೀದಿಸಿದೆ.

ಈ ಮೂಲಕ 4 ಸಾವಿರ ಕೋಟಿ ರು. ಅಕ್ರಮ ಲಾಭ ಮಾಡಿಕೊಂಡಿದೆ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯವು ವಿಚಾರಣೆಯನ್ನು ಮಾ.13ಕ್ಕೆ ನಿಗದಿಪಡಿಸಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ