ದಂಗಲ್‌ ಚಿತ್ರದ ಖ್ಯಾತ ಬಾಲನಟಿ ಸುಹಾನಿಗೆ ಅಪರೂಪದ ಡರ್ಮಟೋಮಯೋಸೈಟಿಸ್‌

KannadaprabhaNewsNetwork |  
Published : Feb 19, 2024, 01:31 AM ISTUpdated : Feb 19, 2024, 08:38 AM IST
ಸುಹಾನಿ | Kannada Prabha

ಸಾರಾಂಶ

ಇತ್ತೀಚೆಗೆ ದಂಗಲ್‌ ಚಿತ್ರದಲ್ಲಿ ಖ್ಯಾತ ಬಾಲನಟಿಯಾಗಿದ್ದ ಸುಹಾನಿ ಅವರು ಡರ್ಮಟೋಮಯೋಸೈಟಿಸ್‌ ಎಂಬ ಅಪರೂಪದ ಖಾಯಿಲೆಯಿಂದಾಗಿ ಸಾವನ್ನಪ್ಪಿರುವುದಾಗಿ ಅವರ ಕುಟುಂಬ ತಿಳಿಸಿದೆ.

ಇತ್ತೀಚೆಗೆ ದಂಗಲ್‌ ಚಿತ್ರದಲ್ಲಿ ಖ್ಯಾತ ಬಾಲನಟಿಯಾಗಿದ್ದ ಸುಹಾನಿ ಅವರು ಡರ್ಮಟೋಮಯೋಸೈಟಿಸ್‌ ಎಂಬ ಅಪರೂಪದ ಖಾಯಿಲೆಯಿಂದಾಗಿ ಸಾವನ್ನಪ್ಪಿರುವುದಾಗಿ ಅವರ ಕುಟುಂಬ ತಿಳಿಸಿದೆ.

ಏನಿದು ಖಾಯಿಲೆ?
ಡರ್ಮಟೋಮಯೋಸೈಟಿಸ್‌ ಎಂಬುದು ಸ್ನಾಯು ಮತ್ತು ಚರ್ಮಗಳಲ್ಲಿ ಉರಿಯೂತ ಕಾಣಿಸಿಕೊಳ್ಳುವ ಅಪರೂಪದ ಖಾಯಿಲೆಯಾಗಿದೆ. ಈ ಖಾಯಿಲೆಯು ಪುರುಷರಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳನ್ನು ಬಾಧಿಸುತ್ತದೆ. 

ಕೆಲವೊಮ್ಮೆ ಅಂಗಾಂಶಗಳಲ್ಲಿ ತೊಡಕು ಕಾಣಿಸಿಕೊಂಡಾಗಲೂ ಈ ಖಾಯಿಲೆ ಬಾಧಿಸಲಿದ್ದು ಇದನ್ನು ಸಂಧಿವಾತ ಎಂದೂ ಸಹ ಕರೆಯಲಾಗುತ್ತದೆ.

ರೋಗದ ಲಕ್ಷಣಗಳೇನು?
ಪ್ರಮುಖವಾಗಿ ಅಸಹಜ ಜೀನ್‌ಗಳು ಬೆಳವಣಿಗೆಯಾದಾಗ ಮತ್ತು ವ್ಯಕ್ತಿಗೆ ಕ್ಯಾನ್ಸರ್‌ ಬಾಧಿಸಿದ್ದಾಗ ಈ ರೋಗ ಅಟಕಾಯಿಸಿಕೊಳ್ಳುತ್ತದೆ. ಜೊತೆಗೆ ಈ ರೋಗ ನಮ್ಮ ದೇಹವನ್ನು ಹೊಕ್ಕಾಗ ಪ್ರತಿರೋಧಕ ಅಂಶಗಳಿಂದಲೇ ಅಂಗಾಂಶಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. 

ಜೊತೆಗೆ ಬಿಸಿಲಿಗೆ ಮೈಒಡ್ಡಿದಾಗ ಹೆಚ್ಚಾಗಿ ಕಣ್ಣು ಮತ್ತು ಚರ್ಮ ಕೆಂಪಾಗಿ ನೋವು ಕಾಣಿಸಿಕೊಳ್ಳುತ್ತದೆ. ಹಾಗೆಯೇ ಒಣ ಚರ್ಮದ ಬೆಳವಣಿಗೆಯಿಂದಾಗಿ ಕೂದಲು ಸಹ ತೆಳ್ಳಗಾಗಿ ಉದುರುವಿಕೆಯ ಸಾಧ್ಯತೆ ಹೆಚ್ಚಿರುತ್ತದೆ. 

ಇದರ ಜೊತೆಗೆ ಕೆಲವೊಮ್ಮೆ ಆಹಾರ ನುಂಗುವಾಗ ಕಿರಿಕಿರಿಯುಂಟಾಗುವುದು ಮತ್ತು ನಮ್ಮ ಧ್ವನಿಯಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ.

ಚಿಕಿತ್ಸೆ: ಈ ರೋಗಕ್ಕೆ ನಿರ್ದಿಷ್ಟವಾದ ಔಷಧಿ ಇಲ್ಲದಿದ್ದರೂ, ಪ್ರತಿದಿನ ವ್ಯಾಯಾಮ ಮಾಡುವ ಮೂಲಕ ಈ ರೋಗವನ್ನು ಬರದಂತೆ ತಡೆಗಟ್ಟಬಹುದಾಗಿದೆ. ಅಲ್ಲದೆ ಮೊದಲ ಹಂತದಲ್ಲೇ ಚರ್ಮಕ್ಕೆ ಸೂಕ್ತ ಚಿಕಿತ್ಸೆ ಕೊಟ್ಟುಕೊಳ್ಳುವ ಮೂಲಕ ರೋಗದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ