ನ್ಯೂಯಾರ್ಕ್: ನ್ಯೂಯಾರ್ಕ್‌ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆರ್‌ಎಸ್‌ಎಸ್ ಮೋಹನ್ ಭಾಗವತ್ ಅವರು ಭಾಗಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವತ್ ವಿರುದ್ಧ ಖಲಿಸ್ತಾನಿ ಉಗ್ರರು ಪ್ರತಿಭಟನೆ ನಡೆಸಿದ್ದಾರೆ, ‘ಒಂದು ಜಗತ್ತು: ಒಂದು ಮಾನವೀಯತೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶನಿವಾರ ಭಾಗವತ್ ಮಾತನಾಡಿದ್ದರು.
ಈ ಸಂದರ್ಭದಲ್ಲಿ ಹೊರಗಡೆ ಖಲಿಸ್ತಾನಿ ಪರ ಹೋರಾಟಗಾರರು ‘ಆರ್‌ಎಸ್‌ಎಸ್ ಹಿಂದೂ ಪ್ರಾಬಲ್ಯ ಮತ್ತು ಅಲ್ಪಸಂಖ್ಯಾತರನ್ನು ಹೊರಗಿಡುವಲ್ಲಿ ಉತ್ತೇಜಿಸುತ್ತಿದೆ’ ಎಂದು ಆರೋಪಿಸಿ ಪ್ರತಿಭಟಿಸಿದರು. ಈ ವೇಳೆ ಖಲಿಸ್ತಾನಿ ಧ್ವಜಗಳನ್ನು ಪ್ರದರ್ಶಿಸಿ, ಅವರ ಪರ ಘೋಷಣೆಗಳನ್ನು ಕೂಗಿದರು. ಭಾರತದ ರಾಷ್ಟ್ರಧ್ವಜ, ಭಾಗವತ್ ಫೋಟೋಗಳನ್ನು ನೆಲಕ್ಕೆ ಹಾಕಿ ಕಾಲಿನಿಂದ ತುಳಿದು ದೇಶವಿರೋಧಿ ಕೃತ್ಯ ಎಸಗಿದರು.
ಟೆಹ್ರಾನ್: ಮಧ್ಯಪ್ರಾಚ್ಯ ಯುದ್ಧ ಆರಂಭವಾಗಿ 6 ತಿಂಗಳು ಕಳೆದಿರುವ ಸಂದರ್ಭದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮುಸ್ಲಿಂ ದೇಶಗಳಿಗೆ ಲಿಖಿತ ಸಂದೇಶ ನೀಡಿದ್ದು, ‘ ಅಮೆರಿಕ, ಇಸ್ರೇಲ್ ವಿರುದ್ಧ ಎಲ್ಲಾ ಇಸ್ಲಾಮಿಕ್ ದೇಶಗಳು ಒಗ್ಗೂಡಬೇಕು. ನಿಮ್ಮ ನಿಜವಾದ ಶತ್ರುಗಳು ಯಾರೆಂದು ಗುರುತಿಸಿ’ ಎಂದು ಕರೆ ನೀಡಿದ್ದಾರೆ.ಆಯತೊಲ್ಲಾ ಖಮೇನಿ ಹತ್ಯೆ ನಂತರ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲಿಯೂ ಬಹಿರಂಗವಾಗಿ ಮೊಜ್ತಬಾ ಕಾಣಿಸಿಕೊಂಡಿಲ್ಲ.
ಹೀಗಿರುವಾಗಲೇ ಪತ್ರ ಬರೆದಿದ್ದಾರೆ. ಅದರಲ್ಲಿ ಅವರು, ‘ಯಾರಾದರೂ, ಯಾವುದೇ ಸ್ಥಾನದಲ್ಲಿದ್ದರೂ, ಮುಸ್ಲಿಮರ ವಿಭಜನೆ, ಸಂಘರ್ಷವನ್ನು ತಿಳಿದೋ ಅಥವಾ ತಿಳಿದೆಯೋ ಮಾಡಿದರೆ ಅವರು ಇಸ್ಲಾಂ ಶತ್ರುಗಳ ಉದ್ದೇಶ ಈಡೇರಿಸಿದಂತಾಗುತ್ತದೆ. ನಿಮ್ಮ ನಿಜವಾದ ಶತ್ರುಗಳನ್ನು ಗುರುತಿಸಿ, ಅವರ ಯೋಜನೆಯನ್ನು ಅರ್ಥ ಮಾಡಿಕೊಳ್ಳಿ ಮತ್ತು ಅವರನ್ನು ಎದುರಿಸಿ. ಯಾವುದೇ ರೀತಿಯಲ್ಲಿ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಉಂಟಾಗಲು ಅವಕಾಶ ನೀಡಬಾರದು ’ ಎನ್ನುವ ಸಂದೇಶ ನೀಡಿದರು.