ಸಿದ್ದುಗೆ ಸಲಹೆ ನೀಡಿದ್ದ ಜಾನ್‌ ವಿಜಯ್‌ಗೂ ಸಲಹೆಗಾರ

KannadaprabhaNewsNetwork |  
Published : May 05, 2026, 03:15 AM IST
Jhon

ಸಾರಾಂಶ

ಕರ್ನಾಟಕದಲ್ಲಿ ಸತತ 2 ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯನವರಿಗೆ 2018ರಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದ ಜಾನ್‌ ಆರೋಕ್ಯಸಾಮಿ ಎಂಬುವವರೇ ವಿಜಯ್‌ರ ಟಿವಿಕೆಯನ್ನು ಗೆಲುವಿನತ್ತ ಕೊಂಡೊಯ್ದಿರುವುದು. ಈ ಮೂಲಕ, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ಗೆ ಪರ್ಯಾಯವಾಗಿ ದಕ್ಷಿಣದಲ್ಲಿ ಇವರು ಹೆಸರು ಕೇಳಿಬರುತ್ತಿದೆ.

ಚೆನ್ನೈ: ಕರ್ನಾಟಕದಲ್ಲಿ ಸತತ 2 ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯನವರಿಗೆ 2018ರಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದ ಜಾನ್‌ ಆರೋಕ್ಯಸಾಮಿ ಎಂಬುವವರೇ ವಿಜಯ್‌ರ ಟಿವಿಕೆಯನ್ನು ಗೆಲುವಿನತ್ತ ಕೊಂಡೊಯ್ದಿರುವುದು.

ಪ್ರಶಾಂತ್‌ ಕಿಶೋರ್‌ಗೆ ಪರ್ಯಾಯ

 ಈ ಮೂಲಕ, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ಗೆ ಪರ್ಯಾಯವಾಗಿ ದಕ್ಷಿಣದಲ್ಲಿ ಇವರು ಹೆಸರು ಕೇಳಿಬರುತ್ತಿದೆ.

ರಾಜಕೀಯ ಶಕ್ತಿಯಾಗಿ ರೂಪಿಸುವಲ್ಲಿ ಆರೋಕ್ಯ ಸಾಮಿ ಪ್ರಮುಖ ಪಾತ್ರ

ನಟನಾಗಿದ್ದ ವಿಜಯ್‌ ಇದ್ದ ಅಭಿಮಾನಿಗಳ ಬಳಗವನ್ನೇ ಅವರ ರಾಜಕೀಯ ಶಕ್ತಿಯಾಗಿ ರೂಪಿಸುವಲ್ಲಿ ಆರೋಕ್ಯ ಸಾಮಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ತಂತ್ರದಿಂದಲೇ ಅಲ್ಪ ಸಮಯದಲ್ಲಿ ರಾಜಕೀಯವಾಗಿಯೂ ವಿಜಯ್‌ರ ಜನಪ್ರಿಯತೆ ಉತ್ತುಂಗಕ್ಕೇರಲು ಸಾಧ್ಯವಾಗಿದೆ. ವಿಜಯ್‌ರ ಭಾಷಣಗಳಿಂದ ಹಿಡಿದು, ಪ್ರಚಾರ, ಸಾಮಾಜಿಕ ಮಾಧ್ಯಮ ಬಳಕೆಯ ವಿಧಾನವನ್ನು ನಿರ್ಧರಿಸಿದವರೂ ಇವರೇ. ಜಾನ್‌ರ ಶ್ರಮದಿಂದಲೇ ಪೆರಂಬೂರು ಮತ್ತು ತಿರುಚಿರಾಪಳ್ಳಿಯಿಂದ(ಪೂರ್ವ) ಸ್ಪರ್ಧಿಸಿದ್ದ ವಿಜಯ್‌ ಗೆಲುವಿಗೆ ಮಾತ್ರವಲ್ಲ, ಸಿಎಂ ಕುರ್ಚಿಗೂ ಸಮೀಪ ಹೋಗಲು ಸಾಧ್ಯವಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೂಲತಃ ಆಂಧ್ರಪ್ರದೇಶದವರಾದ ಜಾನ್‌, ತಮಿಳುನಾಡಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಶಿವಸೇನೆ (ಯುಬಿಟಿ) ಸಲಹೆಗಾರರಾಗಿಯೂ ಇವರು ಕೆಲಸ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ: ಮಮತಾ
77 ವರ್ಷದ ಸಿದ್ದು ಇದೀಗಅತ್ಯಂತ ಹಿರಿಯ ಸಿಎಂ!- ಕೇರಳ ಸಿಎಂ ಸೋಲಿನ ಬಳಿಕ ಸಿದ್ದುಗೆ ಪಟ್ಟ- ಪಿಣರಾಯಿ ಸ್ಥಾನವೀಗ ಕರ್ನಾಟಕ ಸಿಎಂಗೆ