ಪುರಿ ರಥಯಾತ್ರೆ ವೇಳೆ /ನೂಕುನುಗ್ಗಲು : ಓರ್ವ ಸಾವು, 200 ಭಕ್ತರು ಅಸ್ವಸ್ಥ

KannadaprabhaNewsNetwork |  
Published : Jul 17, 2026, 03:00 AM IST
Puri

ಸಾರಾಂಶ

ಗುರುವಾರದಿಂದ ಆರಂಭವಾಗಿರುವ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಜನದಂದಣಿ ಏರ್ಪಟ್ಟು ನೂಕುನುಗ್ಗಲು ಉಂಟಾಗಿದೆ. ಘಟನೆಯಲ್ಲಿ ಓರ್ವ ಭಕ್ತ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, 200 ಮಂದಿ ಅಸ್ವಸ್ಥರಾಗಿದ್ದಾರೆ.

ಭುವನೇಶ್ವರ: ಗುರುವಾರದಿಂದ ಆರಂಭವಾಗಿರುವ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಜನದಂದಣಿ ಏರ್ಪಟ್ಟು ನೂಕುನುಗ್ಗಲು ಉಂಟಾಗಿದೆ. ಘಟನೆಯಲ್ಲಿ ಓರ್ವ ಭಕ್ತ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, 200 ಮಂದಿ ಅಸ್ವಸ್ಥರಾಗಿದ್ದಾರೆ.

ಪಹಂಡಿ ಆಚರಣೆಯ ಸಂದರ್ಭದಲ್ಲಿ ಅವಘಢ

ಪ್ರಾಥಮಿಕ ಮಾಹಿತಿ ಪ್ರಕಾರ ಪಹಂಡಿ ಆಚರಣೆಯ ಸಂದರ್ಭದಲ್ಲಿ ಹೊರ ಭದ್ರತಾ ವಲಯದ 500 ಮೀ.ದೂರದಲ್ಲಿಯೇ ಅವಘಢ ಸಂಭವಿಸಿದೆ. ಭಾರೀ ಜನಸಂದಣಿ ಏಕಾಏಕಿ ಉಂಟಾದ ಪರಿಣಾಮ ಸುಮಾರು 200 ಭಕ್ತರಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು,ಆಗ ಒಬ್ಬ ಭಕ್ತ ಹೃದಯಾಘಾತ ಉಂಟಾಗಿ ಅಸುನೀಗಿದ್ದಾನೆ.  

ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಉಳಿದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಳೆದ ವರ್ಷವೂ ರಥಯಾತ್ರೆಯ ಸಂದರ್ಭದಲ್ಲಿ ಇಂತಹದ್ದೇ ಅನಾಹುತ ನಡೆದಿತ್ತು. ಗುಂಡಿಚಾ ದೇವಸ್ಥಾನದ ಬಳಿ ಕಾಲ್ತುಳಿತ ಸಂಭವಿಸಿ ಮೂವರು ಭಕ್ತರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜೀವ ಅಮೂಲ್ಯ : ಸೋನಂ ಜೀವ ರಕ್ಷಣೆಗೆ ದಿಲ್ಲಿ ಹೈಕೋರ್ಟ್‌ ಸೂಚನೆ
9,911 ಹೊಸ ಎಂಬಿಬಿಎಸ್‌ ಸೀಟು ಘೋಷಣೆ