ತೆಲಂಗಾಣ ರಾಜ್ಯಪಾಲೆ ತಮಿಳ್‌ಸಾಯ್‌ ರಾಜೀನಾಮೆ: ಲೋಕಸಭೆಗೆ ಸ್ಪರ್ಧೆ ಸಂಭವ

KannadaprabhaNewsNetwork |  
Published : Mar 19, 2024, 12:47 AM IST
ತೆಲಂಗಾಣದ ರಾಜ್ಯಪಾಲೆ ತಮಿಳ್‌ಸಾಯ್‌ ಸೌಂದರ್‌ರಾಜನ್‌  | Kannada Prabha

ಸಾರಾಂಶ

ತೆಲಂಗಾಣದ ರಾಜ್ಯಪಾಲೆ ತಮಿಳ್‌ಸಾಯ್‌ ಸೌಂದರ್‌ರಾಜನ್‌ ರಾಜ್ಯಪಾಲ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ.

ಹೈದರಾಬಾದ್‌: ತೆಲಂಗಾಣದ ರಾಜ್ಯಪಾಲೆ ತಮಿಳ್‌ಸಾಯ್‌ ಸೌಂದರ್‌ರಾಜನ್‌ ರಾಜ್ಯಪಾಲ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ತೆಲಂಗಾಣದ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿರುವ ತಮಿಳ್‌ಸಾಯ್‌ ಸೌಂದರ್ ರಾಜನ್‌ ಅವರು ರಾಜೀನಾಮೆ ನೀಡಿದ್ದಾರೆ. ಈ ಕುರಿತ ಪತ್ರವನ್ನು ಅವರು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ರಾಜ್ಯಪಾಲರ ಕಚೇರಿ ತಿಳಿಸಿದೆ.

ರಾಜೀನಾಮೆ ನೀಡಿರುವ ತಮಿಳ್‌ಸಾಯ್‌ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. 2019ರಲ್ಲಿ ಕೂಡಾ ತಮಿಳ್‌ಸಾಯ್‌ ತೂತ್ತುಕುಡಿಯಲ್ಲಿ ಡಿಎಂಕೆಯ ಕನಿಮೋಳಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಶಾನ್ಯದ ಮೊದಲ ತುರ್ತು ಭೂಸ್ಪರ್ಶ ನೆಲೆಗೆ ಚಾಲನೆಹೇವೇಲಿ ಮೋದಿ ಪ್ಲೇನ್‌ ಲ್ಯಾಡಿಂಗ್‌
ಪನ್ನು ಹತ್ಯೆಗೆ ಸಂಚು: ನಿಖಿಲ್‌ ಗುಪ್ತಾ ದಿಢೀರ್‌ ತಪ್ಪೊಪ್ಪಿಗೆ