ನವದೆಹಲಿ: ಇಂದಿನ ಯುವಜನತೆಯ ಮೇಲೆ ಸೋಷಿಯಲ್ ಮೀಡಿಯಾಗಳು ಬಹಳ ಪರಿಣಾಮ ಬೀರುತ್ತಿವೆ. ಇದನ್ನೇ ಅವಕಾಶವಾಗಿ ಕಂಡುಕೊಂಡಿರುವ ಕೆಲ ಇಸ್ಲಾಂ ಸಂಘಟನೆಗಳು, ಟಿಂಡರ್, ಟೆಲಿಗ್ರಾಂ, ಇನ್ಸ್‌ಟಾಗ್ರಾಂ, ಸಿಗ್ನಲ್‌ಗಳಂತಹ ಆ್ಯಪ್‌ಗಳ ಮೂಲಕ ಧಾರ್ಮಿಕ ಬೋಧನೆಗಳನ್ನು ಹರಡಿ ವಿದೇಶೀ ನೆರವಿನಿಂದ ಮತಾಂತರ ಮಾಡುತ್ತಿವೆ.
ಉತ್ತರಪ್ರದೇಶದಲ್ಲಿ ಮತಾಂತರಿ ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಛಂಗುರ್ ಬಾಬಾ (ಜಮಾಲುದ್ದೀನ್) ಬಂಧನದ ಬೆನ್ನಲ್ಲೇ ಈ ಬಗೆಗಿನ ನಿಗೂಢ ಮಾಹಿತಿಗಳು ಬೆಳಕಿಗೆ ಬಂದಿವೆ. ಸಾಮಾನ್ಯವಾಗಿ ಬಡವರು, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ ಹಣ, ಮದುವೆ, ಉದ್ಯೋಗದ ಯ ಆಮಿಷ ಒಡ್ಡಿ ಅಥವಾ ಬೆದರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ. ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಭಾರತದಲ್ಲಿ ಮುಸಲ್ಮಾನರ ಸಂಖ್ಯೆಯನ್ನು ವೃದ್ಧಿಸಿ, ಜನಸಂಖ್ಯಾ ಸಮತೋಲನವನ್ನು ಮರುರೂಪಿಸುವ ಉದ್ದೇಶದಿಂದ ಪಾಕ್ ಮೂಲದ ಬರೇಲ್ವಿ ಮತ್ತು ದಿಯೋಬಂದಿ ಜಾಲಗಳು 40 ವರ್ಷಗಳ ಹಿಂದೆ ರೂಪಿಸಿದ್ದ ಸೈದ್ಧಾಂತಿಕ ಯೋಜನೆ ಇನ್ನೂ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ.
ಹೇಗೆ ನಡೆಯುತ್ತೆ ಸಾಫ್ಟ್ ಜಿಹಾದ್:
ಸಾಮಾಜಿಕ ಮಾಧ್ಯಮಗಳು, ಡೇಟಿಂಗ್ ಆ್ಯಪ್‌ಗಳ ಮೂಲಕ 15-24 ವಯಸ್ಸಿನ ಕೆಳ ಮಧ್ಯಮ ವರ್ಗದ ಹಿಂದೂ ಹೆಣ್ಣುಮಕ್ಕಳ ಜತೆ ಪ್ರೀತಿ, ಮದುವೆ ಅಥವಾ ಉದ್ಯೋಗ ಭರವಸೆ ನೀಡಿ ಸಂಪರ್ಕ ಸಾಧಿಸಲಾಗುತ್ತದೆ. ಬಳಿಕ, ಇಸ್ಲಾಂ ಬೋಧನೆಗಳ ವಿಡಿಯೋಗಳನ್ನು ಕಳಿಸಿ, ಅದು ಅವರ ಮೇಲೆ ಪ್ರಭಾವ ಬೀರುವಂತೆ ಮಾಡಲಾಗುತ್ತದೆ. 6-12 ತಿಂಗಳ ನಂತರ ಅವರನ್ನೇ ಮತಾಂತರಿಗಳನ್ನಾಗಿ ಮಾಡಲಾಗುತ್ತದೆ.
ಧಾರ್ಮಿಕ ಸಂಸ್ಥೆಗಳತ್ತ ಸೆಳೆತ:
ಒಮ್ಮೆ ಹಿಂದೂ ಹೆಣ್ಣುಮಕ್ಕಳು ತಮ್ಮ ಜಾಲದಲ್ಲಿ ಸಿಲುಕಿರುವುದು ಖಚಿತವಾಗುತ್ತಿದ್ದಂತೆ, ಅವರನ್ನು ಕೇರಳ, ಹೈದರಾಬಾದ್‌ಗಳಲ್ಲಿರುವ ಧಾರ್ಮಿಕ ಸಂಸ್ಥೆಗಳಿಗೆ ಕರೆದೊಯ್ದು ಅಧಿಕೃತವಾಗಿ ಮತಾಂತರಿಸಲಾಗುತ್ತದೆ. ಬಳಿಕ, ಹಿಂದೂ ಹೆಸರಿಟ್ಟುಕೊಂಡ ಮುಸ್ಲಿಂ ಹುಡುಗರ ಜತೆ ಮದುವೆ ಮಾಡಿಸಲಾಗುತ್ತದೆ. 16ರಿಂದ 22 ವರ್ಷದ ಹುಡುಗರಿಗೆ ಇದರ ತರಬೇತಿ ನೀಡಲಾಗಿರುತ್ತದೆ. 2018-2024ರ ನಡುವೆ, ಭೋಪಾಲ್‌ನಲ್ಲಿರುವ ಸಂಸ್ಥೆಗೆ ದೋಹಾ ಮತ್ತು ಶಾರ್ಜಾದಿಂದ 18.5 ಕೋಟಿ ರು. ದೇಣಿಗೆ ಬಂದಿತ್ತು.
ಅಕ್ರಮ ದೇಣಿಗೆ:
ಈ ಮತಾಂತರಕ್ಕೆ ಹಣವನ್ನು ಝಕಾತ್(ದಾನ) ಹೆಸರಲ್ಲಿ ಹೊಂದಿಸಲಾಗುತ್ತದೆ. ಇದಕ್ಕಾಗಿಯೇ ಕೆಲ ನಕಲಿ ಎನ್‌ಜಿಒಗಳನ್ನು ಸೃಷ್ಟಿಸಲಾಗುತ್ತದೆ. ದೆಹಲಿ, ಆಗ್ರಾ ಮತ್ತು ಲಖನೌನಲ್ಲಿ ಇಂತಹ ಸಂಸ್ಥೆಗಳು ಪತ್ತೆಯಾಗಿವೆ. ಗಲ್ಫ್ ರಾಷ್ಟ್ರಗಳಿಂದ ಹವಾಲಾ ಮಾರ್ಗದಲ್ಲಿ ನೇಪಾಳ, ಬಾಂಗ್ಲಾ, ದುಬೈ ಮೂಲಕ, ಅನುಮಾನ ಬರದಂತೆ ಕಂತುಗಳಲ್ಲಿ ಹಣ ಹರಿದುಬರುತ್ತದೆ.
ಒಬಿಸಿಗೆ 12, ಬ್ರಾಹ್ಮಣರ ಮತಾಂತರಕ್ಕೆ ₹16 ಲಕ್ಷ ಪಡೀತಿದ್ದ ಛುಂಗುರ್ ಬಾಬಾ
ಲಖನೌ: ಜಮಾಲ್‌ಗೆ, ಒಬ್ಬ ಬ್ರಾಹ್ಮಣ, ಸಿಖ್ ಅಥವಾ ಕ್ಷತ್ರಿಯ ಸ್ತ್ರೀಯನ್ನು ಮತಾಂತರಿಸಿದರೆ 15ರಿಂದ 16 ಲಕ್ಷ ರು. ಸಿಗುತ್ತಿತ್ತು. ಅಂತೆಯೇ, ಒಬಿಸಿ ಮಹಿಳೆ ಮತಾಂತರಕ್ಕೆ 10-12 ಲಕ್ಷ ರು. ಮತ್ತು ಉಳಿದ ಜಾತಿಯವರ ಮತಾಂತರಕ್ಕೆ 8-10 ಲಕ್ಷ ರು. ನಿಗದಿಯಾಗಿತ್ತು ಎಂದು ತಿಳಿದುಬಂದಿದೆ. ಮತಾಂತರವನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದ ಛಂಗುರ್, ಅನೇಕ ಆಸ್ತಿಗಳನ್ನು ಮಾಡಿಕೊಂಡಿದ್ದ. ಜತೆಗೆ ಆತನ 40 ಬ್ಯಾಂಕ್ ಖಾತೆಗಳಿಗೆ ಇಸ್ಲಾಮಿಕ್ ದೇಶಗಳಿಂದ 106 ಕೋಟಿ ರು. ಹರಿದುಬಂದಿತ್ತು.