5 ಪ್ರಥಮಗಳಿಗೆ ದೆಹಲಿಯ ಕರ್ತವ್ಯಪಥದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಸಾಕ್ಷಿ

ಸಾರಾಂಶ

ಭಾನುವಾರ ದೆಹಲಿಯ ಕರ್ತವ್ಯಪಥದಲ್ಲಿ ನಡೆದ 76ನೇ ಗಣರಾಜ್ಯ ದಿನದ ಕಾರ್ಯಕ್ರಮವು 5 ಪ್ರಥಮಗಳಿಗೆ ಸಾಕ್ಷಿಯಾಯಿತು. ‘ಪ್ರಳಯ್’ ಕ್ಷಿಪಣಿಯಿಂದ ಹಿಡಿದು ಸೇನೆಯ ಮೂರೂ ವಿಭಾಗಗಳ ಸಂಯೋಜಿತ ಸ್ತಬ್ಧಚಿತ್ರ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಜನ ಕಣ್ತುಂಬಿಕೊಂಡರು.

 5 ಪ್ರಥಮಗಳಿಗೆ ಗಣರಾಜ್ಯೋತ್ಸವ ಸಾಕ್ಷಿ

ಭಾನುವಾರ ದೆಹಲಿಯ ಕರ್ತವ್ಯಪಥದಲ್ಲಿ ನಡೆದ 76ನೇ ಗಣರಾಜ್ಯ ದಿನದ ಕಾರ್ಯಕ್ರಮವು 5 ಪ್ರಥಮಗಳಿಗೆ ಸಾಕ್ಷಿಯಾಯಿತು. ‘ಪ್ರಳಯ್’ ಕ್ಷಿಪಣಿಯಿಂದ ಹಿಡಿದು ಸೇನೆಯ ಮೂರೂ ವಿಭಾಗಗಳ ಸಂಯೋಜಿತ ಸ್ತಬ್ಧಚಿತ್ರ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಜನ ಕಣ್ತುಂಬಿಕೊಂಡರು.

1. ಸಶಸ್ತ್ರ ಪಡೆಗಳ ನಡುವಿನ ಒಗ್ಗಟ್ಟು ಬಿಂಬಿಸಲು ‘ಸಶಕ್ತ ಮತ್ತು ಸುರಕ್ಷಿತ ಭಾರತ’ ಥೀಮ್‌ನಲ್ಲಿ ಸೇನೆಯ ಎಲ್ಲ ಮೂರೂ ಪಡೆಗಳಿಂದ ಒಂದೇ ಸ್ತಬ್ಧಚಿತ್ರ ಪ್ರದರ್ಶನ

2. ಚಲಿಸುವ ಬೈಕ್‌ನಲ್ಲಿ 12 ಅಡಿ ಎತ್ತರದ ಏಣಿ ಮೇಲೆ ನಿಂತು ರಾಷ್ಟ್ರಪತಿಗೆ ಕ್ಯಾ.ಡಿಂಪಲ್‌ ಸಿಂಗ್‌ ಸೆಲ್ಯೂಟ್‌. ಹೀಗೆ ಸೆಲ್ಯೂಟ್ ಸಲ್ಲಿಸಿದ ಮೊದಲ ಮಹಿಳಾ ಸೇನಾ ಅಧಿಕಾರಿ ಎಂಬ ಖ್ಯಾತಿ

3. ಇದೇ ಮೊದಲ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ‘ಪ್ರಳಯ್‌’ ಕ್ಷಿಪಣಿ ಪ್ರದರ್ಶನ. 150 ಕಿ.ಮೀ.ಯಿಂದ 500 ಕಿ.ಮೀ. ದೂರದ ಗುರಿ ತಲುಪುವ. 1000 ಕೇಜಿ ಸಿಡಿತಲೆ ಒಯ್ಯುವ ಸಾಮರ್ಥ್ಯ.

4. ಯುದ್ಧಭೂಮಿಯ ಕಣ್ಗಾವಲು ವ್ಯವಸ್ಥೆ ‘ಸಂಜಯ್’ ಮೊದಲ ಬಾರಿ ಪ್ರದರ್ಶನ. ಭೂ-ವೈಮಾನಿಕ ಯುದ್ಧಭೂಮಿಯ ಎಲ್ಲ ಸೆನ್ಸಾರ್‌ ಹೊಂದಿರುವ ಇದರಿಂದ ವೈರಿಗಳ ಮೇಲೆ ಹದ್ದಿನ ಕಣ್ಣು

5. ಭಾರತದ ಗಣರಾಜ್ಯೋತ್ಸವದಲ್ಲಿ ಇದೇ ಮೊದಲ ಬಾರಿ 352 ಯೋಧರಿದ್ದ ಇಂಡೋನೇಷ್ಯಾದ ತುಕಡಿ ಭಾಗಿ. ಇದರ ಜತೆಗೆ ಮಿಲಿಟರಿ ಬ್ಯಾಂಡ್‌ ತುಕಡಿ ಕೂಡ ಮೊತ್ತಮೊದಲ ಬಾರಿ ದಿಲ್ಲಿಯಲ್ಲಿ ಪಥಸಂಚಲನ

Share this article