ಮನ್‌ ಕೀ ಬಾತ್‌’ ರೇಡಿಯೋ ಭಾಷಣದ ವೇಳೆ ಕಲಬುರಗಿ ಖಡಕ್‌ ರೊಟ್ಟಿಗೆ ಮೋದಿ ಭೇಷ್‌!

KannadaprabhaNewsNetwork |  
Published : Jun 30, 2025, 01:47 AM ISTUpdated : Jun 30, 2025, 04:17 AM IST
ಮೋದಿ  | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದ ವೇಳೆ ಕರ್ನಾಟಕದ ಖಡಕ್ ರೊಟ್ಟಿ ಹಾಗೂ ಅದರಲ್ಲೂ ವಿಶೇಷವಾಗಿ ಕಲಬುರಗಿಯ ಮಹಿಳೆಯರು ತಯಾರಿಸುವ ರೊಟ್ಟಿಯನ್ನು ಹಾಡಿ ಹೊಗಳಿದ್ದಾರೆ.

 ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದ ವೇಳೆ ಕರ್ನಾಟಕದ ಖಡಕ್ ರೊಟ್ಟಿ ಹಾಗೂ ಅದರಲ್ಲೂ ವಿಶೇಷವಾಗಿ ಕಲಬುರಗಿಯ ಮಹಿಳೆಯರು ತಯಾರಿಸುವ ರೊಟ್ಟಿಯನ್ನು ಹಾಡಿ ಹೊಗಳಿದ್ದಾರೆ.

ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ಅವರು ವಿಶೇಷವಾಗಿ ‘ಮಹಿಳೆಯರ ನೇತೃತ್ವದ ಅಭಿವೃದ್ಧಿ ಉಪಕ್ರಮ’ಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೆ, ಮಹಿಳೆಯರ ಉದ್ಯಮಶೀಲತೆ, ಸ್ವಾವಲಂಬನೆ ಮತ್ತು ನಾವೀನ್ಯತೆಗಳ ಮೂಲಕ ಗಮನಾರ್ಹ ಸಾಧನೆಗಳು ಹೊಸದನ್ನು ರೂಪಿಸುತ್ತಿವೆ ಎಂದು ಕೊಂಡಾಡಿ ಅದಕ್ಕೆ ಕಲಬುರಗಿಯ ಮಹಿಳೆಯರು ರೊಟ್ಟಿ ತಟ್ಟಿ ಮಾಡಿದ ಸಾಧನೆಯನ್ನು ಉದಾಹರಿಸಿದರು.

‘ಸ್ನೇಹಿತರೇ, ಕರ್ನಾಟಕದ ಕಲಬುರ್ಗಿಯ ಮಹಿಳೆಯರ ಸಾಧನೆ ಕೂಡಾ ಬಹಳ ಉತ್ತಮವಾಗಿದೆ. ಇವರು ಜೋಳದ ರೊಟ್ಟಿಯನ್ನು ಒಂದು ಬ್ರ್ಯಾಂಡ್ ಆಗಿ ಮಾಡಿದ್ದಾರೆ. ಅವರು ರಚಿಸಿರುವ ಸಹಕಾರಿ ಸಂಘದಲ್ಲಿ ಪ್ರತಿದಿನ 3 ಸಾವಿರಕ್ಕೂ ಅಧಿಕ ರೊಟ್ಟಿಗಳನ್ನು ತಯಾರಿಸಲಾಗುತ್ತಿದೆ. ಈ ರೊಟ್ಟಿಗಳ ಸುವಾಸನೆ ಈಗ ಕೇವಲ ಹಳ್ಳಿಗಳಿಗೆ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದೆ. ಆನ್‌ಲೈನ್ ಆಹಾರ ವೇದಿಕೆಗಳ ಮೂಲಕ (Online Food Platforms) ಮೂಲಕ ಬೇಡಿಕೆಗಳು ಬರುತ್ತಿವೆ. ಕಲಬುರಗಿ ರೊಟ್ಟಿ ಈಗ ದೊಡ್ಡ ನಗರಗಳ ಅಡುಗೆ ಮನೆಯವರೆಗೂ ತಲುಪುತ್ತಿದೆ. ಇದು ಈ ಮಹಿಳೆಯರ ಮೇಲೆ ಉತ್ತಮ ಪರಿಣಾಮ ಬೀರಿದ್ದು, ಇವರ ವರಮಾನ ಕೂಡಾ ಹೆಚ್ಚಾಗುತ್ತಿದೆ’ ಎಂದು ಕೊಂಡಾಡಿದರು.ಮನ್‌ ಕೀ ಬಾತ್‌ ಕೇಳಿ ರೊಟ್ಟಿ

ತಯಾರಕ ಮಹಿಳೆ ಕಣ್ಣೀರು!

ಕಲಬುರಗಿ: ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ಕಲಬುರಗಿ ರೊಟ್ಟಿ ಉತ್ಪಾದಕರ ಸಂಘದ ಬಗ್ಗೆ ಪ್ರಸ್ತಾಪವಾಗುತ್ತಿದ್ದಂತೆ ಚಪ್ಪಾಳೆಯ ಸುರಿಮಳೆಯಾಯಿತು. ಇವರೆಲ್ಲಾ ಕಲಬುರಗಿ ಕೃಷಿ ಇಲಾಖೆ ಜೆಡಿ ಕಛೇರಿಯಲ್ಲಿ ಮೋದಿ ಮನ್ ಕಿ ಬಾತ್ ವೀಕ್ಷಿಸುತ್ತಿದ್ದರು. ಮೋದಿ ಬಾಯಲ್ಲಿ ಕಲಬುರಗಿ ರೊಟ್ಟಿ ವಿಚಾರ ಬರುತ್ತಿದ್ದಂತೆಯೇ ರೊಟ್ಟಿ ಉತ್ಪಾದಕಿ ಅಯ್ಯಮ್ಮ ಅವರ ಕಣ್ಣುಗಳಿಂದ ನೀರು ಸುರಿಯಿತು. ತಮ್ಮ ಕಡು ಕಷ್ಟದ ದಿನಗಳನ್ನು ನೆನೆದು ಅವರು ಭಾವುಕರಾದರು.ವಿವರ 6ಮೋದಿಗೆ ಮೋಡಿ ಮಾಡಿದ

ಕಲಬುರಗಿ ಜೋಳದ ರೊಟ್ಟಿ!

ಕಲಬುರಗಿ: ಕಲಬುರಗಿ ರೊಟ್ಟಿ ಉತ್ಪಾದಕರ ಸಂಘವು ಕಲಬುರಗಿ ಜಿಲ್ಲೆಯಲ್ಲಿ ರೊಟ್ಟಿ ತಯಾರಿಸುವ ಮಹಿಳಾ ಸ್ವ-ಸಹಾಯ ಗುಂಪು ಸಂಘಟಿಸಿ, ರೊಟ್ಟಿ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುವ ಒಂದು ಸಹಕಾರಿ ಸಂಘ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಈ ಯೋಜನೆ, ನೂರಾರು ಮಹಿಳೆಯರನ್ನು ಆತ್ಮವಿಶ್ವಾಸದ ಉದ್ಯಮಿಗಳನ್ನಾಗಿ ಮಾಡಿದೆ. ಅವರ ಜೀವನಕ್ಕೆ ಬೆನ್ನೆಲುಬಾಗಿ ನಿಂತಿದೆ.

PREV
Read more Articles on

Recommended Stories

- ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್‌.ಸಂತೋಷ್‌ ಬಗ್ಗೆ ಅವಹೇಳನ ಪ್ರಕರಣಬುರುಡೆ ಕೇಸ್‌ ತಿಮರೋರಿ ಅರೆಸ್ಟ್‌- ಪೊಲೀಸರ ಜತೆಗೆ ಬೆಂಬಲಿಗರ ತೀವ್ರ ವಾಗ್ವಾದ । ಉಜಿರೆಯ ಮನೆಯಲ್ಲಿ ಹೈಡ್ರಾಮಾ- ಎಎಸ್ಪಿ ಕಾರಿಗೆ ವಾಹನ ಡಿಕ್ಕಿ: 3 ಜನ ಬಂಧನ । ತಿಮರೋಡಿ 14 ದಿನ ನ್ಯಾಯಾಂಗ ವಶ
ಬಂಧನದಿಂದ ಯೂಟ್ಯೂಬರ್‌ಸಮೀರ್‌ ಸ್ವಲ್ಪದರಲ್ಲೇ ಪಾರು- ಎಐ ವಿಡಿಯೋ ಬಳಸಿ ಆಕ್ಷೇಪಾರ್ಹ ವರದಿ ಪ್ರಕರಣ- ಪೊಲೀಸರಿಂದ ತಲಾಶ್‌ । ಅಷ್ಟರಲ್ಲಿ ಕೋರ್ಟ್‌ ಬೇಲ್‌