ಉದ್ಯಮಿ ರತನ್ ಟಾಟಾ ಅವರ ಅಂತಿಮ ಯಾತ್ರೆಯಲ್ಲಿ 11 ವರ್ಷಗಳ ಹಿಂದೆ ಅವರೇ ರಕ್ಷಿಸಿ ಕರೆತಂದಿದ್ದ ‘ಗೋವಾ’ ಹೆಸರಿನ ನಾಯಿಯು ಸಹ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿತು.
ಮುಂಬೈ : ಉದ್ಯಮಿ ರತನ್ ಟಾಟಾ ಅವರ ಅಂತಿಮ ಯಾತ್ರೆಯಲ್ಲಿ 11 ವರ್ಷಗಳ ಹಿಂದೆ ಅವರೇ ರಕ್ಷಿಸಿ ಕರೆತಂದಿದ್ದ ‘ಗೋವಾ’ ಹೆಸರಿನ ನಾಯಿಯು ಸಹ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿತು.
2013ರಲ್ಲಿ ರತನ್ ಟಾಟಾ ಅವರು ಗೋವಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅಲ್ಲೊಂದು ನಾಯಿ ಮರಿ ಅನಾಥವಾಗಿದ್ದನ್ನು ಕಂಡ ಟಾಟಾ, ಅದನ್ನು ರಕ್ಷಿಸಿ, ತಮ್ಮೊಂದಿಗೆ ಮುಂಬೈಗೆ ಕರೆತಂದಿದ್ದರು. ಹೀಗಾಗಿ ಅದಕ್ಕೆ ‘ಗೋವಾ’ ಎಂದೇ ಹೆಸರಿಟ್ಟಿದ್ದರು. ಬಳಿಕ ಗೋವಾ ರತನ್ ಟಾಟಾರೊಂದಿಗೆ ಮುಂಬೈ ಆಫೀಸ್‌ನಲ್ಲಿ ಆಟ ಆಡುತ್ತ, ಕಾಳಜಿಯಲ್ಲಿ ಬೆಳೆಯಿತು.
ಬುಧವಾರ ನಿಧನರಾದ ರತನ್ ಟಾಟಾ ಅವರ ಅಂತಿಮ ಯಾತ್ರೆ ವೇಳೆ ಸಿಬ್ಬಂದಿಯು ನಾಯಿಯನ್ನು ಕರೆತಂದು ಅಂತಿಮ ದರ್ಶನ ಕೊಡಿಸಿದರು. ಇದರೊಂದಿಗೆ ರತನ್ ಟಾಟಾ ಅವರ ಇನ್ನಿತರ ನಾಯಿಗಳು ಸಹ ಇತ್ತು.