ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ : ಭಕ್ತರ ಹರ್ಷೋದ್ಗಾರ

KannadaprabhaNewsNetwork |  
Published : Jan 15, 2026, 02:00 AM IST
Makara Jyothi

ಸಾರಾಂಶ

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕ ಯಾತ್ರೆ ಅಂಗವಾಗಿ ಬುಧವಾರ ಸಂಜೆ ಸಂಕ್ರಮಣ ಕಾಲದಲ್ಲಿ ಸಂಧ್ಯಾ ಆರತಿಯ ಕೆಲವು ನಿಮಿಷಗಳ ನಂತರ, ದೈವಿಕ ಬೆಳಕೆಂದು ಪರಿಗಣಿಸಲ್ಪಟ್ಟಿರುವ ಮಕರಜ್ಯೋತಿ ದರ್ಶನವಾಯಿತು. ಇದರೊಂದಿಗೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

 ಶಬರಿಮಲೆ :  ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕ ಯಾತ್ರೆ ಅಂಗವಾಗಿ ಬುಧವಾರ ಸಂಜೆ ಸಂಕ್ರಮಣ ಕಾಲದಲ್ಲಿ ಮಕರಜ್ಯೋತಿ ದರ್ಶನವಾಯಿತು. ಇದರೊಂದಿಗೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಸಂಧ್ಯಾಆರತಿಯ ಕೆಲವು ನಿಮಿಷಗಳ ನಂತರ ದರ್ಶನ

ಸಂಧ್ಯಾಆರತಿಯ ಕೆಲವು ನಿಮಿಷಗಳ ನಂತರ, ದೈವಿಕ ಬೆಳಕೆಂದು ಪರಿಗಣಿಸಲ್ಪಟ್ಟಿರುವ ‘ಮಕರ ಜ್ಯೋತಿ’ಯು, ದೇವಾಲಯದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಗುಡ್ಡದ ಮೇಲೆ ಪೂರ್ವ ದಿಕ್ಕಿನಲ್ಲಿ ಕಾಣಿಸಿತು. ಆಗ ಭಕ್ತರು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಕೂಗಿ ಭಕ್ತಿಯ ಪರಾಕಾಷ್ಠೆ ಮೆರೆದರು.

ಕಪ್ಪು ಉಡುಪನ್ನು ಧರಿಸಿ, ಸಾಂಪ್ರದಾಯಿಕ ‘ಇರುಮುಡಿ’ಯನ್ನು ತಲೆ ಮೇಲೆ ಹೊತ್ತ ಭಕ್ತರು ಅರಣ್ಯ ಮಾರ್ಗಗಳು ಮತ್ತು ದೇವಾಲಯದ ಆವರಣದಲ್ಲಿ ಗಂಟೆಗಟ್ಟಲೆ ಕಾಯುತ್ತಾ ದೇವರ ದರ್ಶನ ಪಡೆದರು. ಮಕರವಿಳಕ್ಕು ಹಬ್ಬವು ನಡೆಯುತ್ತದೆ, ಇದು ತೀರ್ಥಯಾತ್ರೆಯ ಋತುವಿನ ಅಂತ್ಯವನ್ನು ಸೂಚಿಸುತ್ತದೆ.ರಾಜ್ಯ ದೇವಸ್ವಂ ಸಚಿವ ವಿ.ಎನ್. ವಾಸವನ್, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳು ಇದ್ದರು.

ಶಬರಿಮಲೆ ಚಿನ್ನಕ್ಕೆ ಕನ್ನ: ಟಿಡಿಬಿ ಮಾಜಿ ಸದಸ್ಯನ ಬಂಧನ

ತಿರುವನಂತಪುರ: ಶಬರಿಮಲೆ ದ್ವಾರಪಾಲಕ ವಿಗ್ರಹ ಮತ್ತು ಗರ್ಭಗುಡಿಯ ಬಾಗಿಲುಗಳಲ್ಲಿನ ಚಿನ್ನ ಲೇಪಿತ ಬಾಗಿಲುಗಳ ಚಿನ್ನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಟಿಡಿಬಿಯ ಮಾಜಿ ಸದಸ್ಯ ಶಂಕರ್‌ ದಾಸ್‌ ಎಂಬುವರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿದೆ. ಮಂಗಳವಾರವಷ್ಟೇ ಪ್ರಕರಣದ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್‌ ಇನ್ನು ಶಂಕರ್‌ ದಾಸ್‌ ಅವರ ಬಂಧನ ಏಕಾಗಿಲ್ಲ ಎಂದು ಎಸ್‌ಐಟಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ ಬುಧವಾರ ಶಂಕರ್‌ ಆಸ್ಪತ್ರೆಯಲ್ಲಿರುವಾಗಲೇ ಅವರನ್ನು ಬಂಧಿಸಿದೆ. ಇದರಿಂದಾಗಿ ಒಟ್ಟು ಬಂಧಿತರ ಸಂಖ್ಯೆಯು 12ಕ್ಕೆ ಏರಿಕೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶೀಘ್ರ ಇರಾನ್‌ ತೊರೆಯಿರಿ : ಭಾರತೀಯರಿಗೆ ಸೂಚನೆ
ತಿರುಮಲ : ಚಪ್ಪಲಿ ಸಮಸ್ಯೆಗೆ ಕ್ಯು ಆರ್‌ ಕೋಡ್‌ ಪರಿಹಾರ!