ನವದೆಹಲಿ: ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯ ಯುವಜನತೆಗೆ ಹೊಸ ಅವಕಾಶಗಳ ಸೃಷ್ಟಿಗೆ ಭಾರತ ವಿವಿಧ ರಾಷ್ಟ್ರಗಳ ಜತೆ ವ್ಯಾಪಾರ, ಚಲನಶೀಲತೆ ಒಪ್ಪಂದಗಳಿಗೆ ಪದಾರ್ಪಣೆ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
==
ರೀಲ್ಸ್‌ಗಾಗಿ ವಂದೇ ಭಾರತ್ತಡೆದು ದುಷ್ಕೃತ್ಯ: ಆಕ್ರೋಶ
ನವದೆಹಲಿ: ರೀಲ್ಸ್ ಹುಚ್ಚಿಗಾಗಿ ಯುವಕರ ಗುಂಪೊಂದು ವಂದೇ ಭಾರತ್ ಬರುವ ಹಳಿಯ ಮೇಲೆ ಮರದ ದಿಮ್ಮಿಯನ್ನಿಟ್ಟು ರೈಲನ್ನು ತಡೆದು ಆ ವಿಡಿಯೋವನ್ನು ಜಾಲತಾಣದಲ್ಲಿ ಹಾಕಿದ ಆಘಾತಕಾರಿ ಘಟನೆ ನಡೆದಿದೆ. ರೀಲ್ಸ್‌ನಲ್ಲಿ 5 ಯುವಕರು ಮರದ ದಿಮ್ಮಿಯನ್ನು ಹಳಿಗೆ ಅಡ್ಡಲಾಗಿ ಇಟ್ಟಿದ್ದನ್ನು ಕಾಣಬಹುದು. ಸ್ವಲ್ಪ ಹೊತ್ತಿನ ಬಳಿಕ ಆ ಮಾರ್ಗದಲ್ಲಿ ವೇಗವಾಗಿ ಬಂದ ವಂದೇ ಭಾರತ್ ರೈಲು ಅನಿವಾರ್ಯವಾಗಿ ನಿಲ್ಲುತ್ತದೆ. ಇದನ್ನು ಕಂಡು ‘ವಂದೇ ಭಾರತ್ ಅನ್ನು ನಿಲ್ಲಿಸಿಬಿಟ್ಟೆವು. ರೈಲು ಹತ್ತಲು ಅಲ್ಲ, ವಿಡಿಯೋಗಾಗಿ ಹೀಗೆ ಮಾಡಿದೆವು’ ಎಂದು ಯುವಕರು ಕೂಗುವುದು ಕೇಳುತ್ತದೆ. ಆದರೆ ಈ ಘಟನೆ ಎಲ್ಲಿ ನಡೆದದ್ದೆಲ್ಲೆಂದು ತಿಳಿದುಬಂದಿಲ್ಲ.ಆಕ್ರೋಶ: ನೂರಾರು ಜನ ಪ್ರಯಾಣಿಸುತ್ತಿರುವ ಹೈ-ಸ್ಪೇಡ್ ರೈಲನ್ನು ಈ ರೀತಿ ನಿಲ್ಲಿಸಿ ಅವರ ಜೀವವನ್ನು ಅಪಾಯಕ್ಕೆ ತಳ್ಳುವುದು ಉಗ್ರಕೃತ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ ಆ ಯುವಕರನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. 1989ರ ರೈಲ್ವೆ ಕಾಯ್ದೆಯ 150ನೇ ವಿಧಿಯ ಪ್ರಕಾರ ಹೀಗೆ ಮಾಡುವವರಿಗೆ ಜೀವಾವಧಿ ಅಥವಾ 10 ವರ್ಷ ಸೆರೆವಾಸದ ಶಿಕ್ಷೆ ವಿಧಿಸಲಾಗುವುದು.