ಕೃಷ್ಣಾನಗರದಲ್ಲಿ ಮಹುವಾಗೆ ರಾಜಮಾತೆ ಅಮೃತಾ ಸವಾಲು

KannadaprabhaNewsNetwork |  
Published : Mar 26, 2024, 01:03 AM ISTUpdated : Mar 26, 2024, 09:20 AM IST
ಮಹುವಾ | Kannada Prabha

ಸಾರಾಂಶ

ತಮ್ಮ ವಿರುದ್ಧ ಕಣಕ್ಕಿಳಿಸಲು ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ ಎಂದು ಟೀಕಿಸುತ್ತಿದ್ದ ಕೃಷ್ಣಾನಗರದ ಉಚ್ಛಾಟಿತ ಸಂಸದೆ ಮಹುವಾ ಮೊಯಿತ್ರಾಗೆ ಬಿಜೆಪಿ ಬಲವಾದ ತಿರುಗೇಟು ನೀಡಿದ್ದು, ಸ್ಥಳೀಯ ನಾಡಿಯಾ ಮನೆತನದ ರಾಜಮಾತೆ ಅಮೃತಾ ರಾಯ್‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ನವದೆಹಲಿ: ತಮ್ಮ ವಿರುದ್ಧ ಕಣಕ್ಕಿಳಿಸಲು ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ ಎಂದು ಟೀಕಿಸುತ್ತಿದ್ದ ಕೃಷ್ಣಾನಗರದ ಉಚ್ಛಾಟಿತ ಸಂಸದೆ ಮಹುವಾ ಮೊಯಿತ್ರಾಗೆ ಬಿಜೆಪಿ ಬಲವಾದ ತಿರುಗೇಟು ನೀಡಿದ್ದು, ಸ್ಥಳೀಯ ನಾಡಿಯಾ ಮನೆತನದ ರಾಜಮಾತೆ ಅಮೃತಾ ರಾಯ್‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. 

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕಲ್ಯಾಣ್‌ ಚೌಬೆ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ ಮಹುವಾ ಮೊಯಿತ್ರಾ ಸದನದ ಒಳಗೆ ಮತ್ತು ಹೊರಗೆ ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದ್ದರು. 

ತಮ್ಮ ಹರಿತ ಪ್ರಶ್ನೆಗಳ ಮೂಲಕ ಬಿಜೆಪಿಯ ಮೇಲೆ ಆರೋಪಗಳನ್ನು ಹೊರಿಸುತ್ತಾ ಭಾರೀ ಮುಜುಗರ ಸೃಷ್ಟಿಸುತ್ತಿದ್ದರು. ಆದರೆ ಕಳೆದ ವರ್ಷ ಬಿಜೆಪಿಯ ನಿಶಿಕಾಂತ್‌ ದುಬೆ ಎಂಬ ಸಂಸದ ಮಹುವಾ ಅವರ ಮೇಲೆ ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಉದ್ಯಮಿಯಿಂದ ಲಂಚ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ ಬಳಿಕ ಅವರ ಚರಿಷ್ಮಾ ಕುಸಿದು ಸಂಸದೆಯಾಗಿ ಅನರ್ಹಗೊಂಡಿದ್ದರು. 

ಇದೀಗ ಟಿಎಂಸಿಯು ಮಹುವಾ ಅವರ ವಿಷಯದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ ಎನ್ನುತ್ತಾ ಪ್ರಚಾರ ಕೈಗೊಳ್ಳುತ್ತಿದ್ದರೆ ಬಿಜೆಪಿಯು ರಾಜಮಾತೆಯನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಅಖಾಡವನ್ನು ಮತ್ತಷ್ಟು ರಂಗೇರಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ
ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ