ತಿರುಪತಿ: ಜೂ.30ರ ವರೆಗೆ ವಿಐಪಿ ದರ್ಶನ ರದ್ದು

KannadaprabhaNewsNetwork |  
Published : May 26, 2024, 01:45 AM ISTUpdated : May 26, 2024, 04:51 AM IST
 ತಿರುಪತಿ | Kannada Prabha

ಸಾರಾಂಶ

ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವಿಐಪಿ ದರ್ಶನವನ್ನು ಜೂ.30ರ ವರೆಗೂ ರದ್ದು ಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಶನಿವಾರ ತಿಳಿಸಿದೆ.

ತಿರುಪತಿ: ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವಿಐಪಿ ದರ್ಶನವನ್ನು ಜೂ.30ರ ವರೆಗೂ ರದ್ದು ಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಶನಿವಾರ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಗಿದಿದ್ದು, ಬೇಸಿಗೆ ರಜೆ ಕಳೆಯಲು ಬರುತ್ತಾರೆ ಹಾಗೂ ಚುನಾವಣೆ ಕೂಡ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಬರುತ್ತಿರುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 

ಆದ್ದರಿಂದ ಪ್ರತಿ ವಾರ ಶುಕ್ರವಾರ, ಶನಿವಾರ ಹಾಗೂ ಭಾನುವಾರ ವಿಐಪಿ ದರ್ಶನವನ್ನು ರದ್ದು ಗೊಳಿಸಿ, ಉಚಿತ ದರ್ಶನಕ್ಕೆ ಅವಕಾಶ ಮಾಡಿಕೊಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟಿಟಿಡಿ ತಿಳಿಸಿದೆ.

ಈ ಅವಧಿಯಲ್ಲಿ ಭಕ್ತರ ದರ್ಶನ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತೀರ್ಮಾನಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗ್ರೋಕ್‌ಗೆ ಕೇಂದ್ರದ ಶಾಕ್‌: ಅಶ್ಲೀಲತೆ ಅಳಿಸಲು ಆದೇಶ
ಕ್ರಿಕೆಟ್ ಆಟಗಾರನ ಹೆಲ್ಮೆಟ್ ಮೇಲೆ ಪ್ತಾಲೆಸ್ತೀನಿ ಧ್ವಜ: ತನಿಖೆಗೆ ಆದೇಶ