ಶಾಲಾ ಮಕ್ಕಳಿಗೆ ಕನ್ನಡ ಸೇರಿ 5 ಭಾಷೆಗಳಲ್ಲಿ ಟಿಟಿಡಿಯಿಂದ ಭಗವದ್ಗೀತೆ ವಿತರಣೆ

KannadaprabhaNewsNetwork |  
Published : Feb 05, 2024, 01:47 AM IST
ಭಗವದ್ಗೀತೆ | Kannada Prabha

ಸಾರಾಂಶ

ದೇಶಾದ್ಯಂತ 1 ಕೋಟಿ ಭಗವದ್ಗೀತೆ ಪ್ರತಿಗಳನ್ನು 5 ಭಾಷೆಗಳಲ್ಲಿ ಮುದ್ರಿಸಿ ಸನಾತನ ಧರ್ಮ ಪ್ರಚುರಪಡಿಸಲು ತಿರುಪತಿ ತಿರುಮಲ ದೇಗುಲ ಮಂಡಳಿ ನಿರ್ಧರಿಸಿದೆ.

ತಿರುಮಲ: ಕನ್ನಡವೂ ಸೇರಿ ಐದು ಭಾಷೆಗಳಲ್ಲಿ ಭಗವದ್ಗೀತೆಯನ್ನು ಸರಳ ಭಾಷೆಯಲ್ಲಿ ಅರ್ಥವಾಗುವಂತೆ ಮುದ್ರಿಸಿ 1 ಕೋಟಿ ಪ್ರತಿಗಳನ್ನು ದೇಶಾದ್ಯಂತ ಶಾಲಾ ಮಕ್ಕಳಿಗೆ ವಿತರಿಸಲು ತಿರುಪತಿ ತಿರುಮಲ ದೇಗುಲ ಟ್ರಸ್ಟ್‌ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿದ ಟಿಟಿಡಿ ಅಧ್ಯಕ್ಷರಾದ ಬಿ. ಕರುಣಾಕರ ರೆಡ್ಡಿ, ‘ಸನಾತನ ಧರ್ಮವನ್ನು ಪ್ರಚುರಪಡಿಸುವ ಅಂಗವಾಗಿ ಭಗವದ್ಗೀತೆಯನ್ನು ಸರಳವಾಗಿ ಅರ್ಥವಾಗುವಂತೆ ಅನುವಾದಿಸಿ 1 ಕೋಟಿ ಪ್ರತಿಗಳನ್ನು ಮುದ್ರಿಸಲು ತೀರ್ಮಾನಿಸಲಾಗಿದೆ. ಇದನ್ನು ಮೊದಲಿಗೆ ದೇಶಾದ್ಯಂತ ಶಾಲಾ ಮಕ್ಕಳಿಗೆ ವಿತರಿಸಲು ತೀರ್ಮಾನಿಸಲಾಗಿದೆ. ಈ ಪುಸ್ತಕವನ್ನು ತೆಲುಗು, ಕನ್ನಡ, ಇಂಗ್ಲಿಷ್‌, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಹೊರತರಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎಐ ಚಾಟ್‌ಬಾಟ್‌ ಬಳಸಿ ಉಗ್ರರಿಂದ ಬಾಂಬ್‌ ತಯಾರಿಕೆ!
ಬೆಂಗ್ಳೂರು ಸ್ಟಾರ್ಟಪ್‌ನಿಂದ ಮ್ಯಾಗ್ನೆಟ್‌ ಇಲ್ಲದ ಇವಿ ಮೋಟರ್‌ ಉತ್ಪಾದನೆ