ಮುಂಬೈ: ಮಾರ್ಚ್.1 ರಿಂದ ತನ್ನೆಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಎಲ್ಲ ಪೇಟಿಎಂ ಖಾತೆದಾರರಿಗೆ ತಾನು ನೆರವಾಗಲು ಸಿದ್ಧ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಘೋಷಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ‘ನಾವು ನೇರವಾಗಿ ಪೇಟಿಎಂ ರಕ್ಷಣೆಗೆ ಹೋಗುವ ಯಾವುದೇ ಯೋಜನೆಗಳನ್ನು ಹೊಂದಿಲ್ಲ.
ಒಂದು ವೇಳೆ ಆರ್‌ಬಿಐ ಪೇಟಿಎಂ ಬ್ಯಾಂಕ್ ಪರವಾನಗಿಯನ್ನು ರದ್ದುಗೊಳಿಸಿದರೆ ಅದರ ಖಾತೆದಾರರ ಹಾಗೂ ಸಂಸ್ಥೆಯ ಸಹಾಯಕ್ಕೆ ನಾವು ಸಿದ್ಧವಾಗಿದ್ದೇವೆ’ ಎಂದಿದ್ದಾರೆ.