ಉಚಿತ ಕೊಡುಗೆಗಳು ಆರ್ಥಿಕತೆಗೆ ಕ್ಯಾನ್ಸರ್‌ ಇದ್ದಂತೆ: ಎಸ್‌ಜೆಎಂ

KannadaprabhaNewsNetwork |  
Published : Feb 05, 2024, 01:46 AM IST
ಅಶ್ವನಿ ಮಹಾಜನ್‌ | Kannada Prabha

ಸಾರಾಂಶ

ಉಚಿತ ಕೊಡುಗೆಗಳು ಆರ್ಥಿಕತೆಗೆ ಕ್ಯಾನ್ಸರ್‌ ರೀತಿ ಹಾನಿಕಾರಕಗಳಾಗಿವೆ ಸ್ವದೇಶಿ ಜಾಗರಣ ಮಂಚ್‌ನ ಉಪ ಸಂಚಾಲಕ ತಿಳಿಸಿದ್ದಾರೆ.

ನವದೆಹಲಿ: ವಿವಿಧ ರಾಜ್ಯಗಳು ತಮ್ಮ ನಾಗರಿಕರಿಗೆ ನೀಡುತ್ತಿರುವ ಉಚಿತ ಕೊಡುಗೆಗಳು ಭಾರತೀಯ ಆರ್ಥಿಕತೆಯನ್ನು ಕ್ಯಾನ್ಸರ್‌ ರೀತಿ ಆಪೋಷನ ತೆಗೆದುಕೊಳ್ಳುತ್ತವೆ ಎಂದು ಸ್ವದೇಶಿ ಜಾಗರಣ ಮಂಚ್‌ನ ಉಪ ಸಂಚಾಲಕ ಅಶ್ವನಿ ಮಹಾಜನ್‌ ಎಚ್ಚರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಮಹಾಜನ್‌, ‘ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ರೀತಿ ಆರ್ಥಿಕ ಶಿಸ್ತು ರೂಢಿಸಿಕೊಳ್ಳಬೇಕು.

ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಗೆಂದು ನೀಡಲಾಗುವ ಹಣವನ್ನು ಉಚಿತ ಯೋಜನೆಗಳಿಗೆ ವ್ಯಯ ಮಾಡಿ ದೇಶವನ್ನು ಸಾಲದ ಕೂಪಕ್ಕೆ ತಳ್ಳುತ್ತಿವೆ. ಇದು ದೇಶದ ಆರ್ಥಿಕತೆಗೆ ಕ್ಯಾನ್ಸರ್‌ನಂತೆ ಹಬ್ಬುವ ಅಪಾಯವಿದ್ದು, ಕೂಡಲೇ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಯುದ್ಧ 100 ದಿನ ಮುಂದುವರಿಯುವ ಸಾಧ್ಯತೆ!
ಕನ್ನಡತಿ ಕೃತಿ ಕಾರಂತ್‌ಗೆ ಜಾಗತಿಕ ಪ್ರಶಸ್ತಿ