ಗೋಡ್ಸೆ ಬಗ್ಗೆ ಹೆಮ್ಮೆ ಇದೆ: ಎಂದ ಕೇರಳ ಎನ್‌ಐಟಿ ಪ್ರೊಫೆಸರ್‌ ವಿರುದ್ಧ ಕೇಸ್‌

KannadaprabhaNewsNetwork | Updated : Feb 05 2024, 08:11 AM IST

ಸಾರಾಂಶ

ಮಹಾತ್ಮಾ ಗಾಂಧಿಯನ್ನು ಕೊಂದ ನಾಥುರಾಮ್‌ ಗೋಡ್ಸೆ ಪರ ಫೇಸ್‌ಬುಕ್‌ನಲ್ಲಿ ಕಮೆಂಟ್‌ ಹಾಕಿದ್ದ ಕಲ್ಲಿಕೋಟೆಯ ಎನ್‌ಐಟಿ ಉಪನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಲ್ಲಿಕೋಟೆ: ಮಹಾತ್ಮಾ ಗಾಂಧಿಯನ್ನು ಕೊಂದ ನಾಥುರಾಮ್‌ ಗೋಡ್ಸೆ ಪರ ಫೇಸ್‌ಬುಕ್‌ನಲ್ಲಿ ಕಮೆಂಟ್‌ ಹಾಕಿದ್ದ ಕಲ್ಲಿಕೋಟೆಯ ಎನ್‌ಐಟಿ ಉಪನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಎ.ಶೈಜಾ ಎಂಬ ಉಪನ್ಯಾಸಕರು ಫೇಸ್ಬುಕ್‌ನಲ್ಲಿ ಪೋಸ್ಟ್‌ವೊಂದಕ್ಕೆ ‘ನಾಥುರಾಮ್‌ ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿ ಭಾರತವನ್ನು ಉಳಿಸಿದ್ದರು. ಗೋಡ್ಸೆ ಬಗ್ಗೆ ಹೆಮ್ಮೆ ಇದೆ’ ಎಂದು ಕಮೆಂಟ್‌ ಹಾಕಿದ್ದರು.

ಇದನ್ನು ವಿರೋಧಿಸಿ ಎಸ್‌ಎಫ್‌ಐ, ಕೆಎಸ್‌ಯು ಸೇರಿ ಮುಂತಾದ ವಿದ್ಯಾರ್ಥಿ ಸಂಘಟನೆಗಳು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದೇ ಎನ್‌ಐಟಿಯಲ್ಲಿ ಕಳೆದ ತಿಂಗಳು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು.

Share this article