ವಿಪಶ್ಶನದಿಂದ ಒತ್ತಡ ನಿವಾರಣೆ: ನರೇಂದ್ರ ಮೋದಿ

KannadaprabhaNewsNetwork |  
Published : Feb 05, 2024, 01:46 AM ISTUpdated : Feb 05, 2024, 08:44 AM IST
Narendra Modi

ಸಾರಾಂಶ

ವಿಪಶ್ಶನ ಆಚರಣೆಯಿಂದ ಯುವಜನರು ತಮ್ಮ ಒತ್ತಡ ನಿವಾರಿಸಿಕೊಂಡು ಉಲ್ಲಸಿತರಾಗಿರಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ಮುಂಬೈ: ವಿಪಶ್ಶನ ಆಚರಣೆಯಿಂದ ಯುವಜನರು ತಮ್ಮ ಒತ್ತಡ ನಿವಾರಿಸಿಕೊಂಡು ಉಲ್ಲಸಿತರಾಗಿರಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ವಿಪಶ್ಶನ ಪದ್ಧತಿಯ ಜನಕ ಗೋಯೆಂಕಾ ಅವರ ಜನ್ಮಶತಾಬ್ದಿಯಲ್ಲಿ ಭಾಗವಹಿಸಿ ಮಾತನಾಡುತ್ತಾ, ‘ವಿಪಶ್ಶನ ಮತ್ತು ಧ್ಯಾನ ಪದ್ಧತಿಯನ್ನು ಮುಂಚೆ ವೈರಾಗ್ಯದ ಸಂಕೇತವಾಗಿ ನೋಡಲಾಗುತ್ತಿತ್ತು. 

ಆದರೆ ಇಂದು ವಿಪಶ್ಶನವು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಕ್ರಿಯೆಯಾಗಿ ಬದಲಾಗಿದೆ. ವಿಪಶ್ಶನದಿಂದಾಗಿ ಎಲ್ಲ ರೀತಿಯ ಒತ್ತಡ ಮತ್ತು ನರಳಾಟಗಳು ದೂರವಾಗಲಿದ್ದು, ಯುವಜನರು ಇದನ್ನು ಅಭ್ಯಾಸ ಮಾಡಿ ಉಲ್ಲಸಿತರಾಗಿರಬೇಕು’ ಎಂದು ತಿಳಿಸಿದರು.

ಇದೇ ವೇಳೆ ಗೋಯೆಂಕಾ ಅವರೊಂದಿಗಿನ ಒಡನಾಟವನ್ನು ಪ್ರಧಾನಿ ಮೋದಿ ಸ್ಮರಿಸುತ್ತಾ, ‘ಭಗವಾನ್‌ ಬುದ್ಧ ತಿಳಿಸಿರುವಂತೆ ಎಲ್ಲರೂ ಗುಂಪಿನಲ್ಲಿ ಧ್ಯಾನಕ್ರಿಯೆಯಲ್ಲಿ ತೊಡಗಿದಾಗ ಅದರಿಂದ ಹೆಚ್ಚು ಲಾಭವನ್ನು ಪಡೆಯಬಹುದು. 

ಹೀಗಾಗಿ ಈ ರೀತಿಯ ಐಕ್ಯತಾ ಭಾವವೇ ವಿಕಸಿತ ಭಾರತದ ಪ್ರಮುಖ ಆಧಾರಸ್ತಂಭವಾಗಬೇಕು’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ