ಬೆಂಗಳೂರಿನಲ್ಲಿ ಆ.9 ‘ತುಳುನಾಡ ಆಟಿ’ ಸಂಭ್ರಮ

KannadaprabhaNewsNetwork |  
Published : Aug 06, 2026, 02:00 AM IST
Tulunadu

ಸಾರಾಂಶ

ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳನ್ನು ರಾಜಧಾನಿ ಬೆಂಗಳೂರಿನಲ್ಲಿ ಬಿಂಬಿಸುವ ಹಾಗೂ ತುಳು ಸಂಸ್ಕೃತಿಯ ಪರಿಚಯವನ್ನು ಜನಮಾನಸಕ್ಕೆ ತಲುಪಿಸುವ ಸದುದ್ದೇಶದಿಂದ ‘ಜೈ ತುಳುನಾಡ್ ಬೆಂಗಳೂರು (ರಿ.)’ ವತಿಯಿಂದ ಬರುವ ಆಗಸ್ಟ್ 9, ರಂದು ಭವ್ಯ ‘ತುಳುನಾಡ ಆಟಿ’ ಕಾರ್ಯಕ್ರಮವು ಆಯೋಜಿಸಿದೆ.

ಬೆಂಗಳೂರು: ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳನ್ನು ರಾಜಧಾನಿ ಬೆಂಗಳೂರಿನಲ್ಲಿ ಬಿಂಬಿಸುವ ಹಾಗೂ ತುಳು ಸಂಸ್ಕೃತಿಯ ಪರಿಚಯವನ್ನು ಜನಮಾನಸಕ್ಕೆ ತಲುಪಿಸುವ ಸದುದ್ದೇಶದಿಂದ ‘ಜೈ ತುಳುನಾಡ್ ಬೆಂಗಳೂರು (ರಿ.)’ ವತಿಯಿಂದ ಬರುವ ಆಗಸ್ಟ್ 9, ರಂದು ಭವ್ಯ ‘ತುಳುನಾಡ ಆಟಿ’ ಕಾರ್ಯಕ್ರಮವು ಆಯೋಜಿಸಿದೆ. 

ಮುಲ್ಕಿ ಸುಂದರ್ ರಾಮ ಶೆಟ್ಟಿ ಸಭಾಂಗಣದಲ್ಲಿ ಸಾಂಸ್ಕೃತಿಕ ಉತ್ಸವ

ಬೆಂಗಳೂರಿನ ಬಿಳೇಕಹಳ್ಳಿ ವಿಜಯ ಬ್ಯಾಂಕ್ ಕಾಲೋನಿಯ ಮುಲ್ಕಿ ಸುಂದರ್ ರಾಮ ಶೆಟ್ಟಿ ಸಭಾಂಗಣದಲ್ಲಿ ಸಾಂಸ್ಕೃತಿಕ ಉತ್ಸವವು ಜರುಗಲಿದ್ದು, ಸುಮಾರು 10,000ಕ್ಕೂ ಅಧಿಕ ತುಳುನಾಡು ಹಾಗೂ ಕರಾವಳಿ ಸಂಸ್ಕೃತಿ ಪ್ರೇಮಿಗಳು ಒಂದೇ ವೇದಿಕೆಯಲ್ಲಿ ಸೇರುವ ನಿರೀಕ್ಷೆಯಿದೆ. 

ಕರಾವಳಿ ಸಂಸ್ಕೃತಿ ಪಸರಿಸುವ ಯಕ್ಷಗಾನ ಮತ್ತು ಆಟಿ ಕಳಂಜ, ಕುಣಿತ ಭಜನೆ

ಕಾರ್ಯಕ್ರಮದಲ್ಲಿಕರಾವಳಿ ಸಂಸ್ಕೃತಿ ಪಸರಿಸುವ ಯಕ್ಷಗಾನ ಮತ್ತು ಆಟಿ ಕಳಂಜ, ಕುಣಿತ ಭಜನೆ ಹಾಗೂ ಸಾಂಪ್ರದಾಯಿಕ ಆಟಗಳು, ತುಳು ಭಾಷೆ ಮತ್ತು ಲಿಪಿ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಯು.ಟಿ. ಖಾದರ್‌, ಶಾಸಕ ಅಶೋಕ್‌ ರೈ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಮಾಜಿ ಸಚಿವ ಅರವಿಂದ್‌ ಲಿಂಬಾವಳಿ, ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಬಿ. ಗುಣರಂಜನ್ ಶೆಟ್ಟಿ ಸೇರಿ ಹಲವರು ಭಾಗಿಯಾಗಲಿದ್ದಾರೆ, 

ನವೀನ್ ಭಂಡಾರಿ (ಸಮಾಜ ಸೇವೆ) ಮುಕ್ತ ಯು. ಶೆಟ್ಟಿ (ಕ್ರೀಡಾ ಕ್ಷೇತ್ರ), ನಿಧಿಶ್ ಶೆಟ್ಟಿ (ತುಳು ಲಿಪಿ ಮತ್ತು ತುಳು ಭಾಷೆ)ಅವರ ಸಾಧನೆ ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ನಡುರಾತ್ರಿ ವಿಡಿಯೋ ಮಾಡಿದ್ದು, ಭಾಗವತ್‌ ಚರ್ಚೆಗೆ ಬಂದಿದ್ದ ನಮ್ಮಿಂದ: ದೀಪ್ಕೆ
ತುಂಬಿ ತುಳುಕುತ್ತಿವೆ ದೇಶದ ಜೈಲುಗಳು : 2024ರಲ್ಲಿ ಪ್ರತಿ ಸೆರೆಮನೆ 112.7% ಭರ್ತಿ