ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ತ್ತೀಚೆಗೆ ದೆಹಲಿಯಲ್ಲಿ ನಡೆದ ‘ಸಂವಿಧಾನ ತಜ್ಞ ಎ.ಜಿ. ನೂರಾನಿ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ಹಿಂದು ಬಲಪಂಥೀಯ ಕೋಮುವಾದ ಮತ್ತು ಉಗ್ರವಾದ’ದ ಕುರಿತು ಪ್ರಸ್ತಾಪಿಸಿದ್ದು, ವಿವಾದ ಹಾಗೂ ಚರ್ಚೆಗೆ ನಾಂದಿ ಹಾಡಿದೆ.
ನವದೆಹಲಿ: ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಇತ್ತೀಚೆಗೆ ‘ಹಿಂದು ಬಲಪಂಥೀಯ ಕೋಮುವಾದ ಮತ್ತು ಉಗ್ರವಾದ’ದ ಕುರಿತು ಪ್ರಸ್ತಾಪಿಸಿದ್ದು, ವಿವಾದ ಹಾಗೂ ಚರ್ಚೆಗೆ ನಾಂದಿ ಹಾಡಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ‘ಸಂವಿಧಾನ ತಜ್ಞ ಎ.ಜಿ. ನೂರಾನಿ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ಸಾರಿ ಅವರು ನೂರಾನಿ ಅವರ ಪುಸ್ತಕದ ಸಾಲುಗಳನ್ನು ಉಲ್ಲೇಖಿಸಿದರು. ‘ಭಾರತದ ಮೊದಲ ಪ್ರಧಾನಿ ನೆಹರು ಅವರು ಒಮ್ಮೆ ಅಧಿಕಾರಿಗಳ ಸಭೆಯಲ್ಲಿ, ‘ಭಾರತಕ್ಕೆ ನಿಜವಾದ ಅಪಾಯ ಕಮ್ಯುನಿಸಂನಿಂದ ಅಲ್ಲ, ಬದಲಿಗೆ ಹಿಂದೂ ಬಲಪಂಥೀಯ ಕೋಮುವಾದದಿಂದ ಇದೆ’ ಎಂದಿದ್ದರು.
ಪ್ರಸ್ತುತ ದೇಶದಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ಬಹುಸಂಖ್ಯಾತರ ರಾಜಕಾರಣ ನಡೆಯುತ್ತಿದ್ದು, ಇದು ನಾಗರಿಕ ರಾಷ್ಟ್ರೀಯತೆಗೆ ಸವಾಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಖಂಡನೆ:
ಇದನ್ನು ಭಾರತೀಯ ಇಮಾಂ ಸಂಸ್ಥೆ ಮುಖ್ಯಸ್ಥ ಇಮಾಮ್ ಉಮೇರ್ ಅಹ್ಮದ್ ಇಲ್ಯಾಸಿ ಮತ್ತು ಮೌಲಾನಾ ಸಾಜಿದ್ ರಶೀದಿ ಖಂಡಿಸಿದ್ದಾರೆ. ‘ಅನ್ಸಾರಿ ಅಧಿಕಾರದಲ್ಲಿದ್ದಾಗ ಮುಸ್ಲಿಮರ ಪರವಾಗಿ ಮಾತನಾಡದೆ, ನಿವೃತ್ತಿ ನಂತರ ಮುಸ್ಲಿಂ ಸಮುದಾಯದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮತ್ತು ಸಮಾಜದಲ್ಲಿ ಶಾಂತಿ ಕದಡಲು ಇಂತಹ ಪ್ರಚೋದಕ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಬಿಜೆಪಿ ಹಾಗೂ ವಿಎಚ್‌ಪಿ ನಾಯಕರೂ ಅನ್ಸಾರಿ ಅವರ ಮಾತುಗಳನ್ನು ಖಂಡಿಸಿದ್ದು, ಇದು ಹಿಂದೂ ಸಂಸ್ಕೃತಿ ಮತ್ತು ದೇಶದ ಸಾರ್ವಭೌಮತೆಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.
- ನೆಹರೂ ಉಲ್ಲೇಖಿಸಿ ಹಿಂದೂ ಕೋಮುವಾದ ಪ್ರಸ್ತಾಪ
- ಮಾಜಿ ಉಪರಾಷ್ಟ್ರಪತಿಯ ಹೇಳಿಕೆಗೆ ಬಿಜೆಪಿ ಖಂಡನೆ
ದಿಲ್ಲಿಯ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭಾಗಿ
ಅಲ್ಲಿ ಹಿಂದೂ ಕೋಮುವಾದದಿಂದ ಅಪಾಯ ಎಂಬ ನೆಹರೂ ಮಾತು ಉಲ್ಲೇಖ
ದೇಶದಲ್ಲೀಗ ಸಾಂಸ್ಕೃತಿಕ ರಾಷ್ಟ್ರೀಯತೆ ಹೆಸ್ರಲ್ಲಿ ಬಹುಸಂಖ್ಯಾತರ ರಾಜಕಾರಣ
ಇದು ನಾಗರಿಕ ರಾಷ್ಟ್ರೀಯತೆಗೆ ಸವಾಲಾಗಿದೆ ಎಂದು ಅನ್ಸಾರಿ ತೀವ್ರ ಕಳವಳ
ಅಧಿಕಾರದಲ್ಲಿದ್ದಾಗ ಧ್ವನಿ ಎತ್ತದೆ ಈಗೇಕೆ ಎಂದು ಇಮಾಂಗಳ ಸಂಘ ಆಕ್ಷೇಪ
ಈ ಹೇಳಿಕೆ ಹಿಂದೂ ಸಂಸ್ಕೃತಿಗೆ ಮಾಡಿದ ಅವಮಾನ: ಬಿಜೆಪಿ, ವಿಎಚ್‌ಪಿ ಕಿಡಿ
