ಭಾರತದಲ್ಲಿ ಸ್ಥಾಪನೆ ಆಗುವ ವಿದೇಶಿ ವಿವಿಗಳಿಗೆ ಹಲವು ಷರತ್ತು

KannadaprabhaNewsNetwork |  
Published : Nov 09, 2023, 01:02 AM IST

ಸಾರಾಂಶ

ಭಾರತದಲ್ಲಿ ಕ್ಯಾಂಪಸ್‌ ಸ್ಥಾಪಿಸಲು ವಿದೇಶಿ ಶಿಕ್ಷಣ ಸಂಸ್ಥೆಗಳು ಹೊಂದಿರಬೇಕಾದ ಅರ್ಹತೆ ಮತ್ತು ಅನುಸರಿಸಬೇಕಾದ ಕಡ್ಡಾಯ ನಿಯಮಗಳನ್ನು ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಪ್ರಕಟಿಸಿದೆ

ವಿದೇಶಿ ವಿವಿ ಕ್ಯಾಂಪಸ್ ಸ್ಥಾಪನೆಗೆ ಯುಜಿಸಿ ಮಾನದಂಡ ಪ್ರಕಟ

ವಿಶ್ವದ ಟಾಪ್‌ 500ರಲ್ಲಿರುವ ವಿವಿಗಳಿಗೆ ಮಾತ್ರ ದೇಶದಲ್ಲಿ ಅನುಮತಿನವದೆಹಲಿ: ಭಾರತದಲ್ಲಿ ಕ್ಯಾಂಪಸ್‌ ಸ್ಥಾಪಿಸಲು ವಿದೇಶಿ ಶಿಕ್ಷಣ ಸಂಸ್ಥೆಗಳು ಹೊಂದಿರಬೇಕಾದ ಅರ್ಹತೆ ಮತ್ತು ಅನುಸರಿಸಬೇಕಾದ ಕಡ್ಡಾಯ ನಿಯಮಗಳನ್ನು ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಪ್ರಕಟಿಸಿದೆ. ವಿಶ್ವದ ಟಾಪ್‌ 500ರಲ್ಲಿರುವ ವಿವಿಗಳಿಗೆ ಮಾತ್ರ ದೇಶದಲ್ಲಿ ಅನುಮತಿ ನೀಡಲಾಗುತ್ತದೆ.ಕೆಲವು ತಿಂಗಳ ಹಿಂದೆ ವಿದೇಶಿ ವಿವಿ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿತ್ತು. ಇದಕ್ಕೆ ಈಗ ಯುಜಿಸಿ ಮಾನದಂಡ ಪ್ರಕಟಿಸಿದೆ.ವಿದೇಶಿ ವಿವಿಗಳು ಭಾರತದಲ್ಲಿ ಕ್ಯಾಂಪಸ್‌ ಸ್ಥಾಪಿಸಲು ವಿದೇಶಿ ಕೊಡುಗೆಗಳ ಸ್ವೀಕಾರ ಮತ್ತು ಬಳಸಿಕೊಳ್ಳಲು ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಅಡಿ ಹಾಗೂ ಯುಜಿಸಿಯ ಪೂರ್ವಾನುಮತಿ ಪಡೆಯಬೇಕು.ವಿದೇಶಿ ವಿವಿಗಳಿ ಯುಜಿಸಿಗೆ ಒಟ್ಟಿಗೇ ಶುಲ್ಕ ಪಾವತಿಸಿ ಪರವಾನಗಿ ಪಡೆದುಕೊಳ್ಳಬೇಕು. ಬಳಿಕ ಯುಜಿಸಿಗೆ ಸಂಸ್ಥೆಯು ಯಾವುದೇ ವಾರ್ಷಿಕ ಶುಲ್ಕ ಪಾವತಿಸುವಂತಿಲ್ಲ. ಆಯಾ ಸಂಸ್ಥೆಯು ತನ್ನದೇ ಆದ ಭೂಮಿ, ಮೌಲ ಸೌಕರ್ಯ, ಸಿಬ್ಬಂದಿ ಸೇರಿದಂತೆ ಉಳಿದ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು.

ಭಾರತಕ್ಕೆ ಪ್ರವೇಶಿಸಲು ಬಯಸುವ ವಿವಿ, ಜಾಗತಿಕ ಶೈಕ್ಷಣಿಕ ಸಂಸ್ಥೆಗಳ ರ್‍ಯಾಂಕಿಂಗ್‌ ಪಟ್ಟಿಯ ಮೊದಲ 500 ಸಂಸ್ಥೆಗಳಲ್ಲಿ ಸ್ಥಾನ ಪಡೆದಿರಬೇಕು.

ಭಾರತದಲ್ಲಿ ನಿರ್ವಹಿಸಲ್ಪಡುವ ಸಂಸ್ಥೆಗಳು, ಇಲ್ಲಿ ಯಾವುದೇ ಕಲಿಕಾ ಕೇಂದ್ರ, ಅಧ್ಯಯನ ಕೇಂದ್ರ ಅಥವಾ ಇತರ ಘಟಕಗಳನ್ನು ಸ್ಥಾಪಿಸುವಂತಿಲ್ಲ. ಆನ್‌ಲೈನ್‌ ತರಗತಿ ಹಾಗೂ ದೂರ ಶಿಕ್ಷಣ ಉಪಕ್ರಮಗಳನ್ನು ನಡೆಸುವಂತಿಲ್ಲ. ವಿದೇಶಿ ಕ್ಯಾಂಪಸ್‌ಗಳು ತಮ್ಮ ನೇಮಕಾತಿ ಮಾನದಂಡಗಳ ಪ್ರಕಾರ ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸ್ವಾಯತ್ತೆ ಹೊಂದಿರುತ್ತವೆ. ಸಂಸ್ಥೆಗಳು ಭಾರತದಲ್ಲಿ ಒಂದಕ್ಕಿಂತ ಹೆಚ್ಚು ಕ್ಯಾಂಪಸ್‌ಗಳನ್ನು ಸ್ಥಾಪಿಸಬಹುದು ಹಾಗೂ ಇತರ ಶಿಕ್ಷಣ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಬಹುದು. ಆದರೆ ಅವುಗಳಿಗೆ ಮತ್ತೆ ಪ್ರತ್ಯೇಕ ಅನುಮತಿ ಪಡೆಯಬೇಕಾಗುತ್ತದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !