ಏನಿದು ಏಕರೂಪ ನಾಗರಿಕ ಸಂಹಿತೆ?ಎಲ್ಲಾ ಧರ್ಮೀಯರಿಗೂ ವಿವಾಹ, ವಿಚ್ಛೇದನ, ಆಸ್ತಿ, ಭೂಮಿ ಮತ್ತು ಉತ್ತರಾಧಿಕಾರ ಕುರಿತು ವಿವಿಧ ಧರ್ಮಗಳಲ್ಲಿ ಪ್ರತ್ಯೇಕ ನಿಯಮಗಳಿವೆ. ಅದನ್ನೆಲ್ಲಾ ರದ್ದುಪಡಿಸಿ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.ಡೆಹ್ರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಕುರಿತು ಶಿಫಾರಸು ಮಾಡಲು ರಚಿಸಿದ್ದ ಉನ್ನತ ಮಟ್ಟದ ಸಮಿತಿ ಶುಕ್ರವಾರ ತನ್ನ 749 ಪುಟಗಳ ಕರಡು ವರದಿಯನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸಲ್ಲಿಸಿದೆ. ಬಹಪತ್ನಿತ್ವ ನಿಷೇಧ, ಎಲ್ಲ ರೀತಿಯ ವಿವಾಹ ನೋಂದಣಿ ಕಡ್ಡಾಯ, ವಿಚ್ಛೇದನ ಕೋರಲು ಪತಿ-ಪತ್ನಿ ಇಬ್ಬರಿಗೂ ಸಮಾನ ನಿಯಮ, ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಸಮಾನ ಪಾಲು ಸೇರಿ ವಿವಿಧ ಅಂಶಗಳು ಈ ವರದಿಯಲ್ಲಿವೆ.
ಸದ್ಯ ಗೋವಾದಲ್ಲಿ ಮಾತ್ರವೇ ಈ ನಿಯಮ ಜಾರಿಯಲ್ಲಿದೆ. ಆದರೆ ಅದು ಪೋರ್ಚುಗೀಸರ ಕಾಲದಿಂದಲೂ ಇದೆ. ಸ್ವಾತಂತ್ರ್ಯಾನಂತರದ ಗೋವಾ ಸರ್ಕಾರ ಯಾವುದೇ ಹೊಸ ಕಾಯ್ದೆ ರೂಪಿಸಿಲ್ಲ.
ಏಕರೂಪ ಸಂಹಿತೆ: ಏನು ಶಿಫಾರಸು?ಯುವತಿಯವರಿಗೆ ವಿವಾಹದ ವಯಸ್ಸು 18, ಯುವಕರಿಗೆ 21 ವರ್ಷಎಲ್ಲಾ ರೀತಿಯ ವಿವಾಹ ನೋಂದಣಿ ಮಾಡುವುದು ಕಡ್ಡಾಯ
ವಿಚ್ಛೇದನ ಕೋರಲು ಪತಿ, ಪತ್ನಿ ಇಬ್ಬರಿಗೂ ಸಮಾನ ನಿಯಮ ಅನ್ವಯಪತಿ/ಪತ್ನಿ- ಇಬ್ಬರೂ ಜೀವಂತ ಇರುವಾಗ 2ನೇ ಮದುವೆ ಸಾಧ್ಯವಿಲ್ಲ. ಅಂದರೆ ಬಹು ಪತ್ನಿತ್ವ, ಬಹುಪತಿತ್ವಕ್ಕೆ ಬ್ರೇಕ್
ನಿಖಾ ಹಲಾಲಾ, ತ್ರಿವಳಿ ತಲಾಖ್, ಇದ್ದತ್‌ನಂಥ ವಿಚ್ಛೇದನ ಪದ್ಧತಿ ನಿಷೇಧಆಸ್ತಿ, ಉತ್ತರದಾಯಿತ್ವದಲ್ಲಿ ಗಂಡು ಮಕ್ಕಳಷ್ಟೇ, ಹೆಣ್ಣು ಮಕ್ಕಳಿಗೂ ಸಮಾನ ಪಾಲು
ಲಿವ್ ಇನ್ ಸಂಬಂಧವನ್ನು ಸ್ವಯಂ ಘೋಷಣೆ ಮೂಲಕ ಪ್ರಕಟಿಸುವುದು ಅಗತ್ಯತಮ್ಮದೇ ಆದ ವಿಶಿಷ್ಟ ಸಂಸ್ಕೃತಿ ಹೊಂದಿರುವ ಆದಿವಾದಿಗಳು ಸಂಹಿತೆ ವ್ಯಾಪ್ತಿಗಿಲ್ಲ