ಇಲ್ಲಿನ ಬೋಂಡಿ ಬೀಚ್‌ನಲ್ಲಿ ನಡೆದ ಭೀಕರ ನರಮೇಧದ ಅನುಭವಗಳನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದಾರೆ. ಗನ್‌ಧಾರಿಗಳಿಗೆ ಬೆಚ್ಚಿ ದಿಕ್ಕಾಪಾಲಾದೆವು. ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲಾಯಿತು ಎಂದಿದ್ದಾರೆ. ಇವರಲ್ಲಿ, 2023ರ ಅ.7ರಂದು ಇಸ್ರೇಲ್‌ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ವೇಳೆ ಬದುಕುಳಿದಿದ್ದ ಆರ್ಸೆನ್‌ ಕೂಡ ಒಬ್ಬರು. ಅವರು ಇತ್ತೀಚೆಗಷ್ಟೇ ಇಸ್ರೇಲ್‌ ತೊರೆದು ಆಸ್ಟ್ರೇಲಿಯಾ ಸೇರಿದ್ದರು. ದುರದೃಷ್ಟವಶಾತ್‌ ಇಲ್ಲಿ ಉಗ್ರದಾಳಿಯಿಂದ ಗಾಯಗೊಂಡಿದ್ದಾರೆ. ಮುಖದ ತುಂಬಾ ರಕ್ತದ ಕಲೆಗಳಿಂದ ಕೂಡಿದ್ದ ಅವರು ತಮ್ಮ ಅನುಭವವನ್ನು ವಿವರಿಸಿದ್ದಾರೆ.

- ಗನ್‌ಧಾರಿಗಳ ಅಬ್ಬರಕ್ಕೆ ಜನರು ದಿಕ್ಕಾಪಾಲು

- ಹಮಾಸ್‌ ದಾಳೀಲಿ ಪಾರಾದವಗೆ ಸಿಡ್ನಿಯಲ್ಲಿ ಗಾಯ

- ಹತ್ಯಾಕಾಂಡದ ಭೀಕರತೆ ವಿವರಿಸಿದ ಗಾಯಾಳು

ಸಿಡ್ನಿ: ಇಲ್ಲಿನ ಬೋಂಡಿ ಬೀಚ್‌ನಲ್ಲಿ ನಡೆದ ಭೀಕರ ನರಮೇಧದ ಅನುಭವಗಳನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದಾರೆ. ಗನ್‌ಧಾರಿಗಳಿಗೆ ಬೆಚ್ಚಿ ದಿಕ್ಕಾಪಾಲಾದೆವು. ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲಾಯಿತು ಎಂದಿದ್ದಾರೆ. ಇವರಲ್ಲಿ, 2023ರ ಅ.7ರಂದು ಇಸ್ರೇಲ್‌ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ವೇಳೆ ಬದುಕುಳಿದಿದ್ದ ಆರ್ಸೆನ್‌ ಕೂಡ ಒಬ್ಬರು. ಅವರು ಇತ್ತೀಚೆಗಷ್ಟೇ ಇಸ್ರೇಲ್‌ ತೊರೆದು ಆಸ್ಟ್ರೇಲಿಯಾ ಸೇರಿದ್ದರು. ದುರದೃಷ್ಟವಶಾತ್‌ ಇಲ್ಲಿ ಉಗ್ರದಾಳಿಯಿಂದ ಗಾಯಗೊಂಡಿದ್ದಾರೆ. ಮುಖದ ತುಂಬಾ ರಕ್ತದ ಕಲೆಗಳಿಂದ ಕೂಡಿದ್ದ ಅವರು ತಮ್ಮ ಅನುಭವವನ್ನು ವಿವರಿಸಿದ್ದಾರೆ.

‘ನಾನು 13 ವರ್ಷ ಇಸ್ರೇಲ್‌ನಲ್ಲಿದ್ದೆ. ಅ.7ರ ಭೀಕರ ದಾಳಿಯಲ್ಲಿ ಬದುಕುಳಿದಿದ್ದೆ. ಇಲ್ಲಿನ ಯಹೂದಿ ಸಮುದಾಯದ ಜೊತೆ ಕೆಲಸ ಮಾಡುವ ಉದ್ದೇಶದಿಂದ 2 ವಾರಗಳ ಹಿಂದಷ್ಟೇ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡೆ. ಬೋಂಡಿ ಬೀಚ್‌ನಲ್ಲಿ ಕುಟುಂಬದ ಜೊತೆ ನಾವೆಲ್ಲ ಆನಂದದಿಂದ ಸಮಯ ಕಳೆಯುತ್ತಿದ್ದೆವು. ಮಕ್ಕಳೆಲ್ಲ ಆಟವಾಡುತ್ತಿದ್ದರು. ಈ ವೇಳೆ ಉಗ್ರರು ಎಲ್ಲ ದಿಕ್ಕುಗಳಿಂದ ಗುಂಡಿನ ದಾಳಿ ಆರಂಭಿಸಿದರು. ಇದ್ದಕ್ಕಿದ್ದಂತೆ ಸಂಪೂರ್ಣ ಅವ್ಯವಸ್ಥೆ ಉಂಟಾಯಿತು. ಏನು ನಡೆಯುತ್ತಿದೆ, ಗುಂಡಿನ ಚಕಮಕಿ ಎಲ್ಲಿಂದ ಬರುತ್ತಿದೆ ಎಂದು ನಮಗೆ ತಿಳಿಯಲಿಲ್ಲ. ಇದು ಹತ್ಯಾಕಾಂಡ. ಎಲ್ಲೆಲ್ಲೂ ರಕ್ತಸ್ನಾನವೇ ನಡೆಯಿತು’ ಎಂದು ದಾಳಿಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

==

ಅಮೆರಿಕದ ಬ್ರೌನ್‌ ವಿವಿ ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿ: ಇಬ್ಬರು ಸಾವು

ವಾಷಿಂಗ್ಟನ್‌: ಅಮೆರಿಕದ ಬ್ರೌನ್‌ ವಿವಿಯ ಆವರಣದಲ್ಲಿ ಭಾನುವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ವರದಿಯಾಗಿದೆ.ಈ ಹಿನ್ನೆಲೆ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸುತ್ತಮುತ್ತಲ ಪ್ರದೇಶದ ಜನಗಳಿಗೆ ಮುನ್ನೆಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ ಹಾಗೂ ದಾಳಿಕೋರರಿಗೆ ಶೋಧ ನಡೆದಿದೆ.ವಿವಿಯ ಎಂಜಿನಿಯರಿಂಗ್ ಮತ್ತು ಭೌತಶಾಸ್ತ್ರ ವಿಭಾಗವುಳ್ಳ 7 ಅಂತಸ್ತಿನ ಕಟ್ಟಡದ ಬಳಿ ಗುಂಡಿನ ದಾಳಿ ನಡೆದಿದೆ. ಕಟ್ಟಡವು 100ಕ್ಕೂ ಹೆಚ್ಚು ಪ್ರಯೋಗಾಲಯಗಳು, ಹತ್ತಾರು ತರಗತಿ ಕೊಠಡಿಗಳು ಮತ್ತು ಕಚೇರಿಗಳನ್ನು ಒಳಗೊಂಡಿದೆ. ದಾಳಿ ನಡೆಯುವ ವೇಳೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು ಎಂದು ತಿಳಿದುಬಂದಿದೆ.