ಆನ್‌ಲೈನ್‌ ಗೇಂನಲ್ಲಿ 13ರ ಮಗಳ ನಗ್ನ ಚಿತ್ರ ಕೇಳಿದ್ದರು : ನಟ ಅಕ್ಷಯ್‌

KannadaprabhaNewsNetwork |  
Published : Oct 04, 2025, 01:00 AM IST
ನಟ | Kannada Prabha

ಸಾರಾಂಶ

ಆನ್‌ಲೈನ್‌ನಲ್ಲಿ ಖಾಸಗಿತನಕ್ಕೆ ಧಕ್ಕೆ ತರುವಂತಹ, ಸೈಬರ್ ದಾಳಿಕೋರರ ಕೃತ್ಯಗಳು ಹೆಚ್ಚುತ್ತಿರುವ ನಡುವೆಯೇ ಖ್ಯಾತ ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌, ತಮ್ಮ ಮಗಳು ಕೂಡಾ ಇಂಥ ದಾಳಿಗೆ ತುತ್ತಾಗಿದ್ದ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

 ಮುಂಬೈ: ಆನ್‌ಲೈನ್‌ನಲ್ಲಿ ಖಾಸಗಿತನಕ್ಕೆ ಧಕ್ಕೆ ತರುವಂತಹ, ಸೈಬರ್ ದಾಳಿಕೋರರ ಕೃತ್ಯಗಳು ಹೆಚ್ಚುತ್ತಿರುವ ನಡುವೆಯೇ ಖ್ಯಾತ ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌, ತಮ್ಮ ಮಗಳು ಕೂಡಾ ಇಂಥ ದಾಳಿಗೆ ತುತ್ತಾಗಿದ್ದ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

‘ಕೆಲ ತಿಂಗಳ ಆನ್‌ಲೈನ್‌ನಲ್ಲಿ ಗೇಂ ಆಡುವ ವೇಳೆ ನನ್ನ 13 ವರ್ಷದ ಮಗಳು ನಿತಾರಾಳ ನಗ್ನಚಿತ್ರಕ್ಕಾಗಿ ಆಗಂತುಕನೊಬ್ಬ ಬೇಡಿಕೆ ಇಟ್ಟಿದ್ದ’ ಎಂದು, ರಾಜ್ಯದ ಪೊಲೀಸ್‌ ಪ್ರಧಾನಕಚೇರಿಯಲ್ಲಿ ನಡೆದ ಸೈಬರ್ ಜಾಗೃತಿ ತಿಂಗಳು 2025 ಕಾರ್ಯಕ್ರಮದಲ್ಲಿ ಅಕ್ಷಯ್‌ ಹೇಳಿದರು.

‘ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಆಟ ಆಡುವ ಅವಕಾಶವಿದೆ. ಅದನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ನನ್ನ ಮಗಳಿಗೆ ಸಂದೇಶ ಕಳಿಸತೊಡಗಿದ್ದ. ಮೊದಮೊದಲು ಆಟದ ಬಗ್ಗೆ ಸಭ್ಯವಾಗಿ ಹೊಗಳುತ್ತಿದ್ದವ, ತಾನು ಮಾತನಾಡುತ್ತಿರುವುದು ಹುಡುಯೊಬ್ಬಳೊಂದಿಗೆ ಎಂದು ತಿಳಿಯುತ್ತಿದ್ದಂತೆ ಆಕೆ ಫೋಟೋ ಕೇಳತೊಡಗಿದ. ನಗ್ನಚಿತ್ರ ಕಳಿಸುವಂತೆ ನನ್ನ ಮಗಳನ್ನು ಪೀಡಿಸತೊಡಗಿದ. ಕೂಡಲೇ ಆಕೆ ಅದನ್ನು ತನ್ನ ತಾಯಿಗೆ ತಿಳಿಸಿದ್ದರಿಂದ ಘಟನೆ ಬೆಳಕಿಗೆ ಬಂತು. ಇದೂ ಸೈಬರ್‌ ವಂಚನೆಯ ಭಾಗ’ ಎಂದು ವಿವರಿಸಿದ್ದಾರೆ.

ಇದೇ ವೇಳೆ, ಮಕ್ಕಳ ಆನ್‌ಲೈನ್‌ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆ ಹೆತ್ತವರಿಗೆ ಸೂಚಿಸಿರುವ ಅಕ್ಷಯ್‌, ‘7ರಿಂದ 10ನೇ ತರಗತಿ ಮಕ್ಕಳಿಗೆ ವಾರಕ್ಕೊಂದು ಸೈಬರ್‌ ಭದ್ರತೆ ಸಂಬಂಧಿತ ತರಗತಿ ಇರಬೇಕು’ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಡಿಜಿಟಲ್‌ ಸುರಕ್ಷತೆ ಬಗ್ಗೆ ಮಕ್ಕಳು, ಹದಿಹರೆಯದವರು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ಒಂದು ತಿಂಗಳ ಅಭಿಯಾನ ನಡೆಸಲಾಗುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ