ಉತ್ತರ ಪ್ರದೇಶ : ಸಂಭಲ್‌ ಪ್ರದೇಶದಲ್ಲಿ ಉತ್ಕನನ ನಡೆಸುವ ವೇಳೆ ಪುರಾತನ ಕೊಳ ಮತ್ತು ಕಾಲುವೆ ಪತ್ತೆ

KannadaprabhaNewsNetwork |  
Published : Dec 23, 2024, 01:02 AM ISTUpdated : Dec 23, 2024, 04:40 AM IST
ಸಂಭಲ್‌  | Kannada Prabha

ಸಾರಾಂಶ

ಕೆಲ ದಿನಗಳ ಹಿಂದೆ ಮಂದಿರ ಮತ್ತು ಮಸೀದಿ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದ ಸಂಭಲ್‌ ಪ್ರದೇಶದಲ್ಲಿ ಉತ್ಕನನ ನಡೆಸುವ ವೇಳೆ ಪುರಾತನ ಕೊಳ ಮತ್ತು ಕಾಲುವೆ ಪತ್ತೆಯಾಗಿದೆ.

ಸಂಭಲ್‌ (ಉತ್ತರ ಪ್ರದೇಶ): ಕೆಲ ದಿನಗಳ ಹಿಂದೆ ಮಂದಿರ ಮತ್ತು ಮಸೀದಿ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದ ಸಂಭಲ್‌ ಪ್ರದೇಶದಲ್ಲಿ ಉತ್ಕನನ ನಡೆಸುವ ವೇಳೆ ಪುರಾತನ ಕೊಳ ಮತ್ತು ಕಾಲುವೆ ಪತ್ತೆಯಾಗಿದೆ.

 ಇಲ್ಲಿನ ಚಂದೌಸಿ ಪ್ರದೇಶದ ಲಕ್ಷ್ಮಣ್‌ ಗಂಜ್‌ ಎಂಬಲ್ಲಿ ಉತ್ಕನನ ನಡೆದಿದ್ದು, 400 ಚದರ ಮೀಟರ್‌ ವಿಸ್ತೀರ್ಣದ ಸುಮಾರು 125-150 ವರ್ಷ ಹಳೆಯ ಬಾವಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿ.13ರಂದು ಸ್ಥಳೀಯ ಪಾಲಿಕೆ ನಡೆಸಿದ ಒತ್ತುವರಿ ತೆರವು ವೇಳೆ ದೇಗುಲದ ಅವಶೇಷ ಪತ್ತೆಯಾಗಿತ್ತು. ಹೀಗಾಗಿ ಕೈಗೊಂಡಿದ್ದ ಉತ್ಕನನದ ವೇಳೆ ಕೊಳ, ಕಾಲುವೆ, ದೇಗುಲದ ಅವಶೇಷ, ಮುರಿದ ವಿಗ್ರಹಗಳು ಸಿಕ್ಕಿವೆ. ಇಲ್ಲಿ 46 ವರ್ಷಗಳ ಹಿಂದೆಯೇ ದೇಗುಲವಿತ್ತು. ಈ ದೇಗುಲವನ್ನು ಬಿಲಾರಿ ರಾಜನ ಅಜ್ಜ ಕಟ್ಟಿಸಿದ್ದಾರೆಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ದಾವೋಸ್‌ ಶೃಂಗಸಭೆಗೆ ಡಿಕೆಶಿ ಸೇರಿ ಹಲ ಗಣ್ಯರು

ನವದೆಹಲಿ: ಮುಂದಿನ ತಿಂಗಳು ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾಗವಹಿಸಲಿದ್ದಾರೆ. ಜೊತೆಗೆ ಭಾರತದ 100 ಕಂಪನಿಗಳ ಸಿಇಒಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಹೋಗಲಿದ್ದಾರೆ. 2025ರ ಜನವರಿಯಲ್ಲಿ ನಡೆಯಲಿರುವ 5 ದಿನಗಳ ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣದ ಸಿಎಂ ರೇವಂತ್‌ ರೆಡ್ಡಿ ಕೂಡ ಭಾಗವಹಿಸಲಿದ್ದಾರೆ. ಜತೆಗೆ, ಕೆಲ ಕೇಂದ್ರ ಸಚಿವರೂ ತೆರಳಲಿದ್ದು, ಅವರ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ
ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ