ಮಹಾಕುಂಭನಗರ: ಕಳೆದ 2 ವಾರಗಳಲ್ಲಿ ದೇಶ- ವಿದೇಶಗಳ ಕೋಟ್ಯಂತರ ಭಕ್ತರನ್ನು ಆಕರ್ಷಿಸಿರುವ ಪ್ರಯಾಗ್‌ರಾಜ್‌ನ ಕುಂಭಮೇಳ, ಬುಧವಾರ ಹೊಸ ಇತಿಹಾಸವೊಂದನ್ನು ಸೃಷ್ಟಿಸುವ ಸಾಧ್ಯತೆ ಇದೆ. ಬುಧವಾರ ಮೌನಿ ಅಮವಾಸ್ಯೆ ಇರುವ ಹಿನ್ನೆಲೆಯಲ್ಲಿ 10 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರಸ್ನಾನ ಮಾಡುವ ಸಾಧ್ಯತೆ ಇದೆ.
==
ಸದ್ಯಕ್ಕೆ ರಾಮಮಂದಿರಕ್ಕೆ ಬರಬೇಡಿ: ಟ್ರಸ್ಟ್‌ಅಯೋಧ್ಯೆ: ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿರುವುದರಿಂದ ಅಯೋಧ್ಯೆಯ ರಾಮಮಂದಿರಕ್ಕೆ ಕೂಡಾ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಅವರಿಗೆ ಸುಲಭ ದರ್ಶನ ವ್ಯವಸ್ಥೆ ಕಲ್ಪಿಸಲು ಸ್ಥಳೀಯರಿಗೆ 15-20 ದಿನಗಳ ಕಾಲ ರಾಮಮಂದಿರಕ್ಕೆ ಭೇಟಿ ನೀಡುವುದನ್ನು ಮುಂದೂಡಿಕೆ ಮಾಡಿ ಎಂದು ರಾಮ ಜನ್ಮಭೂಮಿ ಟ್ರಸ್ಟ್ ಸಲಹೆ ನೀಡಿದೆ.ಜ.26ರಂದು ಗಣರಾಜ್ಯೋತ್ಸವದ ದಿನದಂದು 25 ಲಕ್ಷದಷ್ಟು ಭಾರೀ ಸಂಖ್ಯೆಯ ಭಕ್ತರು ಅಯೋಧ್ಯೆಯ ರಾಮಮಂದಿರಕ್ಕೆ ಆಗಮಿಸಿ ಬಾಲರಾಮನ ದರ್ಶನ ಪಡೆದಿದ್ದರು. ಸೋಮವಾರ ಕೂಡಾ 15 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಈ ಸಂಖ್ಯೆ ಹಾಗೆಯೇ ಮುಂದುವರೆದಿದ್ದು ಜ.29ರಂದು ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ಇರುವ ಕಾರಣ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸಲಿದ್ದು ಅವರೆಲ್ಲಾ ಆಯೋಧ್ಯೆಗೂ ಭೇಟಿ ನೀಡಲಿದ್ದಾರೆ. ಹೀಗಾಗಿ ಮುಂದಿನ 15-20 ದಿನಗಳ ಕಾಲ ಸ್ಥಳೀಯರು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡದೇ ಇರುವುದು ಒಳಿತು ಎಂದು ಟ್ರಸ್ಟ್ ಮನವಿ ಮಾಡಿದೆ. ಮೌನಿ ಅಮಾವಾಸ್ಯೆ ದಿನ ಕುಂಭಮೇಳದಲ್ಲಿ 10 ಕೋಟಿ ಜನರು ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ.