ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡಿದ್ರೆ ಎಲ್‌ಇಡಿಪರದೆ ಮೇಲೆ ಪ್ರದರ್ಶನ!

KannadaprabhaNewsNetwork |  
Published : Jul 13, 2026, 02:00 AM IST
Assam

ಸಾರಾಂಶ

ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಮೈಸೂರಿನಲ್ಲಿ ಕನ್ನಡಿ ಅಳವಡಿಸುವ ವಿನೂತನ ಪ್ರಯತ್ನ ಮಾಡಲಾಗಿತ್ತು. ಇದೀಗ ಅಸ್ಸಾಂನಲ್ಲೂ ಇಂಥದ್ದೇ ತಂತ್ರದ ಮೊರೆ ಹೋಗಲಾಗಿದೆ.

ಗುವಾಹಟಿ: ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಮೈಸೂರಿನಲ್ಲಿ ಕನ್ನಡಿ ಅಳವಡಿಸುವ ವಿನೂತನ ಪ್ರಯತ್ನ ಮಾಡಲಾಗಿತ್ತು. ಇದೀಗ ಅಸ್ಸಾಂನಲ್ಲೂ ಇಂಥದ್ದೇ ತಂತ್ರದ ಮೊರೆ ಹೋಗಲಾಗಿದೆ.

ಅಸ್ಸಾಂನ ಟಿನ್ಸುಕಿಯಾ ಪುರಸಭೆ

ಅಸ್ಸಾಂನ ಟಿನ್ಸುಕಿಯಾ ಪುರಸಭೆಯು ‘ಹಾಲ್‌ ಆಫ್‌ ಶೇಮ್‌’ ಎಂಬ ವಿಶಿಷ್ಟ ಅಭಿಯಾನವನ್ನು ಆರಂಭಿಸಿದೆ. ಇದರ ಮೂಲಕ, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟೀವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾರಾದರೂ ರಸ್ತೆ ಬದಿ ಅಥವಾ ಇತರ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ, ಕಸ ಚೆಲ್ಲಿದರೆ ಆ ದೃಶ್ಯಗಳನ್ನು ಸಿಸಿಟೀವಿ ಸೆರೆಹಿಡಿಯುತ್ತದೆ. 

ಬೃಹತ್‌ ಎಲ್‌ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ

 ನಂತರ ಅದನ್ನು ಬೀದಿಯಲ್ಲಿ ಅಳವಡಿಸಿದ ಬೃಹತ್‌ ಎಲ್‌ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಪರದೆ ಮೇಲೆ ಅನಾವರಣವಾಗುವ ಭಯಕ್ಕಾದರೂ ಜನ ಇಂಥ ಕೆಲಸಗಳನ್ನು ಬಿಡಬಹುದು ಎಂಬುದು ಆಡಳಿತದ ಚಿಂತನೆ.ಆದರೆ ಈ ಕ್ರಮಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕ ನಿಯಮಗಳನ್ನು ಉಲ್ಲಂಘಿಸುವವರಿಗೆ ಸೂಕ್ತ ಶಿಕ್ಷೆ ವಿಧಿಸುವ ಬದಲು ಈ ರೀತಿ ಮಾನ ಕಳೆಯುವುದು ಸರಿಯಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಹಿಳೆಯರು ಮನೆಯಿಂದ ಹೊರಬರಬಾರದು: ಇಸ್ಲಾಂ ಧರ್ಮಗುರು
ಸ್ಥಳೀಯ ಭಾಷೆ ಬಂದವರಿಗಷ್ಟೇ ಹುದ್ದೆ: ಕನ್ನಡಿಗರ ಹೋರಾಟಕ್ಕೆ ಬಿಒಬಿ ಮಣೆ