ಇರಾನ್‌ ಕಡೆಗೆ ಅಮೆರಿಕದ ಸ್ಟೆಲ್ತ್‌ ಬಿ-2 ಬಾಂಬರ್‌?

KannadaprabhaNewsNetwork |  
Published : Jun 22, 2025, 01:18 AM ISTUpdated : Jun 22, 2025, 05:28 AM IST
ಬಿ-2 | Kannada Prabha

ಸಾರಾಂಶ

ಅಣು ಸ್ಥಾವರದ ವಿಚಾರವಾಗಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಇಸ್ರೇಲ್‌ ಇರಾನ್‌ ಕದನ ಮತ್ತೊಂದು ಹಂತಕ್ಕೆ ತಿರುಗಿರುವಾಗಲೇ ಅತ್ತ ಅಮೆರಿಕ ತನ್ನ ಅತ್ಯಾಧುನಿಕ ಯುದ್ಧ ವಿಮಾನ ಬಿ-2 ಸ್ಟೆಲ್ತ್‌ ಬಾಂಬರ್‌ಗಳನ್ನು ಪಶ್ಚಿಮಾಭಿಮುಖವಾಗಿ ಹಾರಾಟ ಆರಂಭಿಸಿವೆ ಎಂದು ವರದಿಯೊಂದು ಹೇಳಿದೆ.

ವಾಷಿಂಗ್ಟನ್‌: ಅಣು ಸ್ಥಾವರದ ವಿಚಾರವಾಗಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಇಸ್ರೇಲ್‌ ಇರಾನ್‌ ಕದನ ಮತ್ತೊಂದು ಹಂತಕ್ಕೆ ತಿರುಗಿರುವಾಗಲೇ ಅತ್ತ ಅಮೆರಿಕ ತನ್ನ ಅತ್ಯಾಧುನಿಕ ಯುದ್ಧ ವಿಮಾನ ಬಿ-2 ಸ್ಟೆಲ್ತ್‌ ಬಾಂಬರ್‌ಗಳನ್ನು ಪಶ್ಚಿಮಾಭಿಮುಖವಾಗಿ ಹಾರಾಟ ಆರಂಭಿಸಿವೆ ಎಂದು ವರದಿಯೊಂದು ಹೇಳಿದೆ. ಇವುಗಳು ಹಿಂದೂ ಮಹಾಸಾಗರದಲ್ಲಿರುವ ‘ಬ್ರಿಟೀಷ್‌ ಇಂಡಿಯನ್‌ ಓಶಿಯನ್‌ ಟೆರಿಟೆರಿ’ಯ ಅಮೆರಿಕದ ನೌಕಾ ನೆಲೆಗೆ ಬರುತ್ತಿವೆ ಎಂದು ಅದು ತಿಳಿಸಿದೆ. ಈ ನೆಲೆಯು ಇರಾನ್‌ಗೆ ಸಮೀಪದಲ್ಲಿದೆ.

ವರದಿ ಪ್ರಕಾರ 5 ಬಿ-2 ಸ್ಟೆಲ್ತ್‌ ಯುದ್ಧ ವಿಮಾನಗಳನ್ನು ಅಮೆರಿಕದ ಮಿಸ್ಸೌರಿ ರಾಜ್ಯದ ವಾಯುನೆಲೆಯಿಂದ ಪಶ್ಚಿಮಾಭಿಮುಖವಾಗಿ ಹಾರಾಟ ಆರಂಭಿಸಿವೆ. ಇವುಗಳ ಜೊತೆಗೆ ಆಗಸದಲ್ಲಿಯೇ ಇಂಧನ ತುಂಬಿಸಲು 4 ಬೋಯಿಂಗ್‌ ಕೆಸಿ-46 ವಿಮಾನಗಳು ಸಹ ಸ್ಯಾನ್‌ ಫ್ರಾನ್ಸಿಸ್ಕೋ ಸಮೀಪದಿಂದ ಹೊರಟಿವೆ.

ಒಂದೊಂದು ವಿಮಾನ 75 ಕಿ.ಮೀ.ದೂರದಲ್ಲಿ ಹಾರಾಟ ನಡೆಸುತ್ತಿದ್ದು, ಈಗಾಗಲೇ 2 ಸ್ಟೆಲ್ತ್‌ ಜೆಟ್‌ಗಳಿಗೆ ಆಗಸದಲ್ಲಿಯೇ ರೀಫ್ಯೂಲಿಂಗ್‌ ನಡೆಸಲಾಗಿದೆ ಎಂದು ಅದು ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಲ್ಪಿಜಿ ದರ ಭಾರತದಲ್ಲೇ ಕಡಿಮೆ : ಕೇಂದ್ರ ಸರ್ಕಾರ
3,000 ಕೆಜಿ ಅವಲಕ್ಕಿ ತಯಾರಿಸಿ ವಿಶ್ವ ದಾಖಲೆ ಯತ್ನ!