ಅಮೆರಿಕದಲ್ಲಿ ಟ್ರಂಪ್‌ ಉದ್ಯೋಗ ಕಡಿತ ಪರ್ವ

Published : Jul 12, 2025, 05:35 AM IST
US President Donald Trump (Image Credit: Reuters)

ಸಾರಾಂಶ

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದೇಶದ ಸರ್ಕಾರಿ ವ್ಯವಸ್ಥೆಯಲ್ಲಿ ವೆಚ್ಚ ಕಡಿತ ಆಂದೋಲನ ಆರಂಭಿಸಿದ್ದಾರೆ. ಇದರ ಅಂಗವಾಗಿ 1,300ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ವಜಾಗೊಳಿಸಲು ವಿದೇಶಾಂಗ ಇಲಾಖೆ ಮುಂದಾಗಿದೆ.

ಕೌಲಾಲಂಪುರ್: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದೇಶದ ಸರ್ಕಾರಿ ವ್ಯವಸ್ಥೆಯಲ್ಲಿ ವೆಚ್ಚ ಕಡಿತ ಆಂದೋಲನ ಆರಂಭಿಸಿದ್ದಾರೆ. ಇದರ ಅಂಗವಾಗಿ 1,300ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ವಜಾಗೊಳಿಸಲು ವಿದೇಶಾಂಗ ಇಲಾಖೆ ಮುಂದಾಗಿದೆ. ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ 2145 ನೌಕರರಿಗೆ ಗೇಟ್‌ಪಾಸ್ ನೀಡಲಿದೆ ಎಂದು ಗೊತ್ತಾಗಿದೆ.

ವಿದೇಶಾಂಗ ಇಲಾಖೆಯು 1,107 ನಾಗರಿಕ ಸೇವೆ ಅಧಿಕಾರಿಗಳು ಮತ್ತು 246 ವಿದೇಶಿ ಸೇವಾ ಅಧಿಕಾರಿಗಳಿಗೆ ನೋಟಿಸ್‌ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜತೆಗೆ, ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿ, ಇಲಾಖೆಯನ್ನು ಸಮರ್ಥಗೊಳಿಸಲು ಇಂಥ ಕ್ರಮ ಕೈಗೊಂಡ ಟ್ರಂಪ್ ಆಡಳಿತವನ್ನು ಶ್ಲಾಘಿಸಿದ್ದಾರೆ.

ನಾಸಾದಿಂದ ಕೊಕ್‌:

ಟ್ರಂಪ್‌ ವೆಚ್ಚ ಕಡಿತ ನೀತಿಯನ್ವಯ ನಾಸಾ, 2,145 ನೌಕರಿ ಕಡಿತಕ್ಕೆ ಮುಂದಾಗಿದೆ. ನಾಸಾ ಸುಮಾರು 18 ಸಾವಿರ ನೌಕರರನ್ನು ಹೊಂದಿದೆ. ಇವರಲ್ಲಿ ಸಂಸ್ಥೆಯ ಸೂಚನೆಯಂತೆ ಸುಮಾರು 2415 ಅಧಿಕಾರಿಗಳು ರಾಜೀನಾಮೆ ನೀಡುವ ಸಾಧ್ಯತೆಯಿದೆ.

 

PREV
Read more Articles on

Recommended Stories

ಅಮೆಜಾನ್‌ನಲ್ಲಿ 30000 ಉದ್ಯೋಗಿಗಳಿಗೆ ಕೊಕ್‌
8ನೇ ವೇತನ ಆಯೋಗದ ಅಧ್ಯಕ್ಷರು, ಸದಸ್ಯರ ನೇಮಕ: ಸಂಪುಟ ಸಮ್ಮತಿ