ಉ.ಖಂಡ ಸಚಿವೆ ರೇಖಾ ಹತ್ಯೆ ಯತ್ನ ಕೇಸ್‌: 3 ವಾರ ಬಳಿಕ ಪತಿ ಸೆರೆ

KannadaprabhaNewsNetwork |  
Published : Nov 08, 2026, 01:45 AM IST
ರೇಖಾ  | Kannada Prabha

ಸಾರಾಂಶ

ತ್ತರಾಖಂಡ ಸಚಿವೆ ರೇಖಾ ಆರ್ಯ ಅವರ ದೂರಿನ ಮೇರೆಗೆ ಅ.15ರಂದು ದಾಖಲಾದ ಪ್ರಕರಣದಲ್ಲಿ, ಅವರ ಪತಿ ಗಿರಿಧಾರಿ ಲಾಲ್ ಸಾಹುರನ್ನು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಶುಕ್ರವಾರ ಬಂಧಿಸಲಾಗಿದೆ.

ಡೆಹ್ರಾಡೂನ್‌: ಉತ್ತರಾಖಂಡ ಸಚಿವೆ ರೇಖಾ ಆರ್ಯ ಅವರ ದೂರಿನ ಮೇರೆಗೆ ಅ.15ರಂದು ದಾಖಲಾದ ಪ್ರಕರಣದಲ್ಲಿ, ಅವರ ಪತಿ ಗಿರಿಧಾರಿ ಲಾಲ್ ಸಾಹುರನ್ನು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಶುಕ್ರವಾರ ಬಂಧಿಸಲಾಗಿದೆ.

ವಂಚನೆ, ಹಲ್ಲೆ, ಜಾತಿ ನಿಂದನೆ ಹಾಗೂ ಕೊಲೆ ಸಂಚು ಆರೋಪ ಎದುರಿಸುತ್ತಿದ್ದ ಅವರು 3 ವಾರಗಳಿಂದ ತಲೆಮರೆಸಿಕೊಂಡಿದ್ದರು. ‘2004ರಲ್ಲಿ ನನ್ನನ್ನು ಮದುವೆಯಾದ ಸಾಹು, ತಮ್ಮ ಮೊದಲ ಮದುವೆ ಹಾಗೂ ಮಕ್ಕಳ ಬಗ್ಗೆ ಹೇಳಿರಲಿಲ್ಲ. ನನ್ನ ಒಪ್ಪಿಗೆ ಇಲ್ಲದೆ 4 ಕಂಪನಿಗಳ ನಿರ್ದೇಶಕ ಸ್ಥಾನದಿಂದ ನನ್ನನ್ನು ತೆಗೆದುಹಾಕಲು ಸಂಚು ರೂಪಿಸಿದ್ದಲ್ಲದೆ, ಸಿಬ್ಬಂದಿಯ ಎದುರೇ ಜಾತಿ ನಿಂದನೆ ಮಾಡಿದ್ದರು. ನನ್ನ ಕೊಲೆಗೂ ಸಂಚು ರೂಪಿಸಿದ್ದರು’ ಎಂದು ಆರ್ಯ ಡೆಹ್ರಾಡೂನ್‌ನ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು ಹಾಗೂ ಸಾಹು ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು. ಇದೀಗ ಅವರ ಬಂಧನವಾಗಿದ್ದು, ಸಹಚರ ಸತೇಂದ್ರ ರಾಥೋರ್‌ನನ್ನು ಬರೇಲಿಯಲ್ಲಿ ಬಂಧಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅತ್ಯಗತ್ಯ: ಡಾ. ಟವಿಕುಮಾರ್
ಛಲವಾದಿ ನಾರಾಯಣಸ್ವಾಮಿಗೆ ಜೀವ ಬೆದರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ