ಗ್ಯಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ 4 ವಾರ ಹೆಚ್ಚುವರಿ ಕಾಲಾವಕಾಶ

KannadaprabhaNewsNetwork |  
Published : Oct 06, 2023, 01:14 AM ISTUpdated : Oct 06, 2023, 10:11 AM IST
Gyanvapi Controversy

ಸಾರಾಂಶ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ನಡೆಸುತ್ತಿರುವ ಸಮೀಕ್ಷೆಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ವಾರಣಾಸಿ: ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ 4 ವಾರ ಹೆಚ್ಚುವರಿ ಕಾಲಾವಕಾಶ ನೀಡಿ ವಾರಣಾಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ನಡೆಸುತ್ತಿರುವ ಸಮೀಕ್ಷೆಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ನ.6ರೊಳಗೆ ಸಮೀಕ್ಷೆ ನಡೆಸಿ ನ್ಯಾಯಾಲಯದ ಮುಂದೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ನ್ಯಾಯಾಧೀಶ ಎ.ಕೆ ವಿಶ್ವೇಶ್‌ ನೇತೃತ್ವದ ಪೀಠ ಆದೇಶ ಹೊರಡಿಸಿದ್ದಾರೆ. ಗ್ಯಾನವಾಪಿ ಮಸೀದಿಯಲ್ಲಿ ಲಿಂಗ ರೂಪಿ ಆಕೃತಿ ಪತ್ತೆಯಾಗಿದ್ದರಿಂದ ಹಾಗೂ ಮಸೀದಿಯಲ್ಲಿ ಅನೇಕ ಹಿಂದೂ ದೇವರ ವಿಗ್ರಹಗಳು ಇರುವ ಕಾರಣ ಅದು ಪ್ರಾಚೀನ ಕಾಲದಲ್ಲಿ ಮಂದಿರವಾಗಿತ್ತೇ ಎಂಬುದರ ಕುರಿತಾಗಿ ಸಮೀಕ್ಷೆ ನಡೆಯುತ್ತಿದೆ.

PREV

Recommended Stories

ತಾಯ್ತನದ ಹಿರಿಮೆ ದೊಡ್ಡದು : ಜೋಗಿ
ಕೊಲ್ಹಾಪುರ ಜೈನಮಠದ ಆನೆ ಅಂಬಾನಿ ವನ್ಯಧಾಮಕ್ಕೆ ಹಸ್ತಾಂತರ: ವಿವಾದ