ಅ.5ರಿಂದ ಆರಂಭವಾಗುವುದು ‘ವಿಶ್ವಕಪ್ ಕ್ರಿಕೆಟ್’ ಅಲ್ಲ ಬದಲಾಗಿ ‘ವಿಶ್ವ ಟೆರರ್ ಕಪ್’ (ವಿಶ್ವ ಭಯೋತ್ಪಾದನಾ ಕಪ್) ಎಂದು ನಿಷೇಧಿತ ‘ಸಿಖ್ ಫಾರ್ ಜಸ್ಟಿಸ್’ ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ.
- ಅ.5ರಿಂದ ಭಾರತದಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್‌ಗೆ ಧಮಕಿ: ಎಫ್‌ಐಆರ್ - ಅಹ್ಮದಾಬಾದ್ ಸ್ಟೇಡಿಯಂಗೆ ದಾಳಿ, ನಿಜ್ಜರ್ ಹತ್ಯೆಗೆ ಪ್ರತೀಕಾರದ ಎಚ್ಚರಿಕೆ ----- ಮೆತ್ತಗಾದ ಕೆನಡಾ ಪ್ರಧಾನಿ ಟ್ರೂಡೋ ‘ಹೊಸ ಆರ್ಥಿಕ ಶಕ್ತಿ ಭಾರತ’ ಟೊರೊಂಟೋ: ಖಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಅಬ್ಬರಿಸುತ್ತಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಕೊಂಚ ಮೆತ್ತಗಾಗಿದ್ದು, ‘ಭಾರತ ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಹೀಗಾಗಿ ಭಾರತದ ಜೊತೆ ನಿಕಟ ಸಂಬಂಧಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಹೇಳಿಕೆ ನೀಡಿದ್ದಾರೆ. ವಿವರ 7 ---- ಅಹಮದಾಬಾದ್: ಅ.5ರಿಂದ ಆರಂಭವಾಗುವುದು ‘ವಿಶ್ವಕಪ್ ಕ್ರಿಕೆಟ್’ ಅಲ್ಲ ಬದಲಾಗಿ ‘ವಿಶ್ವ ಟೆರರ್ ಕಪ್’ (ವಿಶ್ವ ಭಯೋತ್ಪಾದನಾ ಕಪ್) ಎಂದು ನಿಷೇಧಿತ ‘ಸಿಖ್ ಫಾರ್ ಜಸ್ಟಿಸ್’ ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಈತನ ವಿರುದ್ಧ ಗುಜರಾತ್‌ನ ಅಹಮದಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಹಲವು ಜನರ ಮೊಬೈಲ್‌ಗಳಿಗೆ ಪನ್ನುನ್ ಹೆಸರಿನಲ್ಲಿ ವಿದೇಶಿ ಸಂಖ್ಯೆಯಿಂದ ಧ್ವನಿಮುದ್ರಿತ ಸಂದೇಶವೊಂದು +447418343648 ಸಂಖ್ಯೆಯಿಂದ ರವಾನೆಯಾಗುತ್ತಿದೆ. ಅದರಲ್ಲಿ ‘ಅ.5ರಂದು ಅಹಮದಾಬಾದ್‌ನಲ್ಲಿ ಆರಂಭವಾಗುವುದು ವಿಶ್ವಕಪ್ ಕ್ರಿಕೆಟ್ ಅಲ್ಲ. ವಿಶ್ವ ಟೆರರ್ ಕಪ್. ಅಂದು ಸಿಖ್ ಫಾರ್ ಜಸ್ಟಿಸ್‌ನ ಕಾರ್ಯಕರ್ತರು ಅಹಮದಾಬಾದ್ ಸ್ಟೇಡಿಯಂಗೆ ಖಲಿಸ್ತಾನಿ ಧ್ವಜದೊಂದಿಗೆ ದಾಳಿ ಮಾಡಲಿದ್ದಾರೆ. ನಿಜ್ಜರ್ ಹತ್ಯೆಗೆ ನಾವು ಪ್ರತೀಕಾರ ತೆಗೆದುಕೊಳ್ಳಲಿದ್ದೇವೆ. ನಾವು ನಿಮ್ಮ ಬುಲೆಟ್ ಬದಲಾಗಿ ಬ್ಯಾಲೆಟ್ ಬಳಸಲಿದ್ದೇವೆ; ನಿಮ್ಮ ವಯಲೆನ್ಸ್‌ಗೆ (ಹಿಂಸೆಗೆ) ಪ್ರತಿಯಾಗಿ ವೋಟ್ (ಮತ) ಬಳಸಲಿದ್ದೇವೆ. ನೆನಪಿಡಿ ಅ.5 ವಿಶ್ವಕಪ್ ಕ್ರಿಕೆಟ್‌ನ ಆರಂಭ ಅಲ್ಲ, ವಿಶ್ವ ಟೆರರ್ ಕಪ್‌ನ ಆರಂಭ’ ಎಂದು ಎಚ್ಚರಿಸಲಾಗಿತ್ತು. ಈ ಸಂದೇಶದ ಹಿನ್ನೆಲೆಯಲ್ಲಿ ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಸ್ಥಳೀಯವಾಗಿ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪನ್ನುನ್‌ನನ್ನು ಭಾರತ ಈಗಾಗಲೇ ಘೋಷಿತ ಅಪರಾಧಿ ಎಂದು ಸಾರಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.