ಪೀಲಿಭೀತ್ (ಉ.ಪ್ರ): ಬಿಜೆಪಿ ಮುಖಂಡ ಹಾಗೂ ಪೀಲಿಭೀತ್ ಸಂಸದ ವರುಣ್ ಗಾಂಧಿ ಅವರು ಪಕ್ಷಕ್ಕೆ ಗುಡ್‌ಬೈ ಹೇಳಿ, ಈ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬ ದಟ್ಟ ಸುದ್ದಿ ಹರಡಿದೆ.
ಇತ್ತೀಚಿನ ವರ್ಷಗಳಲ್ಲಿ ಮೋದಿ ಸರ್ಕಾರವನ್ನು ಹೊಗಳದೆ, ವರುಣ್ ಬಿಜೆಪಿ ಟೀಕಾಕಾರರಾಗಿ ಹೆಚ್ಚು ಸುದ್ದಿ ಮಾಡಿದ್ದರು. ಇದರ ಬೆನ್ನಲ್ಲೇ ಅವರು ಬಿಜೆಪಿ ಬಿಡುವ ಹಾಗೂ ಎಸ್‌ಪಿ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಈ ವರ್ತಮಾನದ ಬೆನ್ನಲ್ಲೇ ಪೀಲಿಭೀತ್ ಕ್ಷೇತ್ರದಿಂದ ಸ್ಪರ್ಧಿಸಲು ಸುಮಾರು 30 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಇವರಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿಯಿಂದ ಸ್ಪರ್ಧಿಸಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಹೇಮರಾಜ್ ವರ್ಮಾ ಕೂಡ ಇದ್ದಾರೆ.
ವರ್ಮಾ ಕಳೆದ ಮೇನಲ್ಲಿ ಬಿಜೆಪಿ ಸೇರಿದ್ದರು.ವರುಣ್ 2009 ಹಾಗೂ 2019ರಲ್ಲಿ ಪೀಲಿಭೀತ್‌ನಿಂದ ಹಾಗೂ 2014ರಲ್ಲಿ ಸುಲ್ತಾನ್‌ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿಜಯಿಯಾಗಿದ್ದರು. ವರುಣ್‌ಗೂ ಮುನ್ನ ಅವರ ತಾಯಿ ಮನೇಕಾ ಗಾಂಧಿ ಪೀಲಿಭೀತ್ ಸಂಸದೆ ಆಗಿದ್ದರು.