==ದೇಶದ ಪರಮಾಣು ಯೋಜನೇಲಿ ಪ್ರಮುಖ ಪಾತ್ರ
---
1930ರಲ್ಲಿ ಬೆಂಗಳೂರಲ್ಲಿ ಜನಿಸಿ, ಮೈಸೂರಲ್ಲಿ ವ್ಯಾಸಂಗಬಳಿಕ ಅಣು ಶಕ್ತಿ ಆಯೋಗದಲ್ಲಿ ಹಲವು ಹುದ್ದೆ ನಿರ್ವಹಣೆ
ದೇಶದ ಮೊದಲ ಅಣು ರಿಯಾಕ್ಟರ್ ಅಪ್ಸರಾದಲ್ಲೂ ಕರ್ತವ್ಯ
==
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಸೇರಿದಂತೆ ದೇಶಾದ್ಯಂತ 18 ಅಣುಸ್ಥಾವರ ಸ್ಥಾಪನೆಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಹಿರಿಯ ಪರಮಾಣು ವಿಜ್ಞಾನಿ, ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ, ಕನ್ನಡಿಗ ಎಂ.ಆರ್. ಶ್ರೀನಿವಾಸನ್ (95) ಮಂಗಳವಾರ ನಿಧನರಾಗಿದ್ದಾರೆ.
1930ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಶ್ರೀನಿವಾಸನ್ ಬೆಂಗಳೂರು ಹಾಗೂ ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ್ದರು. ದೇಶದ ಪರಮಾಣು ಯೋಜನೆಗೆ ಸಂಬಂಧಿಸಿದ ಹಲವು ಪ್ರಾಜೆಕ್ಟ್‌ಗಳನ್ನು ಶ್ರೀನಿವಾಸನ್ ಪರಿಚಯಿಸಿದ್ದರು,
ಸಾಧಕ ಶ್ರೀನಿವಾಸನ್:
1967ರಲ್ಲಿ ಮದ್ರಾಸ್ ಪರಮಾಣು ವಿದ್ಯುತ್ ಸ್ಥಾವರದ ಯೋಜನಾ ಎಂಜಿನಿಯರ್, ಅಣು ಶಕ್ತಿ ಆಯೋಗದ ಎಂಜಿನಿಯರ್ ಹುದ್ದೆ, ಡಿಎಇಯ ವಿದ್ಯುತ್ ಯೋಜನೆಗಳ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕ, ಅಣು ವಿದ್ಯುತ್ ಮಂಡಳಿ ಅಧ್ಯಕ್ಷ, ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿ, ಪರಮಾಣು ವಿದ್ಯುತ್ ನಿಗಮ ಲಿಮಿಟೆಡ್ (ಎನ್‌ಪಿಸಿಐಎಲ್) ಸ್ಥಾಪಕ ಅಧ್ಯಕ್ಷರು ಸೇರಿದಂತೆ ಹಲವಾರು ಜವಾಬ್ದಾರಿ ನಿರ್ವಹಿಸಿದ್ದರು.
ಇನ್ನು ಅವರು ದೇಶದ ಪರಮಾಣು ಇಂಧನ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.