ಖಲಿಸ್ತಾನಿ ಧ್ವಜ ಪ್ರದರ್ಶನಕ್ಕೆ ಹಾಡು ನಿಲ್ಲಿಸಿ ಗಾಯಕ ದಿಲ್ಜೀತ್‌ ಗರಂ

KannadaprabhaNewsNetwork |  
Published : May 04, 2026, 03:15 AM IST
Diljeeth

ಸಾರಾಂಶ

ಖ್ಯಾತ ಪಂಜಾಬಿ ಗಾಯಕ ದಿಲ್ಜೀತ್‌ ದೋಸಾಂಜ್‌ ಅವರು ಕೆನಡಾದ ಕ್ಯಾಲ್ಗರಿಯಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಖಲಿಸ್ತಾನಿ ಧ್ವಜ ಪ್ರದರ್ಶಿಸುತ್ತಿದ್ದವರ ಮೇಲೆ ಗರಂ ಆಗಿದ್ದು, ಸ್ಥಳದಿಂದ ಹೊರನಡೆಯುವಂತೆ ನೇರವಾಗಿ ಎಚ್ಚರಿಸಿದ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್‌ ಆಗಿದ್ದು, ಗಾಯಕನ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

 ಕ್ಯಾಲ್ಗರಿ (ಕೆನಡಾ): ಖ್ಯಾತ ಪಂಜಾಬಿ ಗಾಯಕ ದಿಲ್ಜೀತ್‌ ದೋಸಾಂಜ್‌ ಅವರು ಕೆನಡಾದ ಕ್ಯಾಲ್ಗರಿಯಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಖಲಿಸ್ತಾನಿ ಧ್ವಜ ಪ್ರದರ್ಶಿಸುತ್ತಿದ್ದವರ ಮೇಲೆ ಗರಂ ಆಗಿದ್ದು, ಸ್ಥಳದಿಂದ ಹೊರನಡೆಯುವಂತೆ ನೇರವಾಗಿ ಎಚ್ಚರಿಸಿದ ಘಟನೆ ನಡೆದಿದೆ. 

ವಿಡಿಯೋ ವೈರಲ್‌

 ಇದರ ವಿಡಿಯೋ ವೈರಲ್‌ ಆಗಿದ್ದು, ಗಾಯಕನ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸಾವಿರಾರು ಜನರ ಎದುರು ಕಾರ್ಯಕ್ರಮ

ದಿಲ್ಜೀತ್‌ ಸಾವಿರಾರು ಜನರ ಎದುರು ಕಾರ್ಯಕ್ರಮ ನೀಡುತ್ತಿದ್ದರು. ಈ ವೇಳೆ ಕೆಲವರು ಭಾರತದಲ್ಲಿ ನಿಷೇಧಿತ ಉಗ್ರ ಸಂಘಟನೆಯನ್ನು ಪ್ರತಿನಿಧಿಸುವ ಧ್ವಜಗಳನ್ನು ಹಾರಿಸುತ್ತಿರುವುದನ್ನು ಗಮನಿಸಿದರು. ಕೂಡಲೇ ಹಾಡು ನಿಲ್ಲಿಸಿ, ‘ನಿಮ್ಮ ಉಪದ್ರವವನ್ನು ಇಲ್ಲಿ ನಿಲ್ಲಿಸಿ, ಬೇರೆಲ್ಲಾದರೂ ಮಾಡಿ. ನನಗೇನೂ ಸಾವಿನ ಭಯವಿಲ್ಲ’ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.ಒಂದು ದಿನದ ಹಿಂದಷ್ಟೇ, ಕೆನಡಾದ ಗುಪ್ತಚರ ಇಲಾಖೆಯು ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಂದ ತಮ್ಮ ದೇಶಕ್ಕೆ ಬೆದರಿಕೆಯಿದೆ ಎಂದು ವರದಿ ನೀಡಿತ್ತು. ಅದರ ಬೆನ್ನಲ್ಲೇ ದಿಲ್ಜೀತ್‌ ಅವರ ನಡೆ ಗಮನ ಸೆಳೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಸ್ರೇಲ್‌ ಮೇಲೆ ಹಿಜ್ಬುಲ್ಲಾದಿಂದ ಜಾಮ್ ಮಾಡಲು ಅಸಾಧ್ಯವಾದ ಡ್ರೋನ್‌ ಬಳಕೆ!
ಕಪಿಲ್‌ ಶರ್ಮಾ ಕೆಫೆ ಬಳಿ ಮತ್ತೆ ಗುಂಡಿನ ದಾಳಿ