;Resize=(412,232))
ಹನೋಯ್: ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫು ಕ್ವಾಕ್ ದ್ವೀಪದ ಸಮೀಪ ಶನಿವಾರ ನಡೆದ ಬೋಟ್ ದುರಂತದಲ್ಲಿ 15 ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 21 ಜನರನ್ನು ರಕ್ಷಿಸಲಾಗಿದೆ. ಮೃತರಲ್ಲಿ 10 ಜನರು ತಮಿಳುನಾಡು ಮತ್ತು ಇಬ್ಬರು ತೆಲಂಗಾಣ ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ.
32 ಪ್ರವಾಸಿಗರು ಮತ್ತು 4 ಬೋಟ್ ಸಿಬ್ಬಂದಿಯಿದ್ದ ಸ್ಪೀಡ್‌ಬೋಟ್ ಹಾನ್ ಮೇ ರುಟ್ ಎನ್‌ಗೊಯಿ ದ್ವೀಪದಿಂದ ಸುಮಾರು 400 ಮೀ. ದೂರದಲ್ಲಿ ಸಂಚರಿಸುತ್ತಿತ್ತು. ಈ ವೇಳೆ ತೀವ್ರವಾದ ಅಲೆಗಳು ಮತ್ತು ಬಲವಾದ ಗಾಳಿಗೆ ಸಿಲುಕಿ ಮಗುಚಿದೆ. ಸುತ್ತಮುತ್ತಲಿದ್ದ ಇತರ ಪ್ರವಾಸಿ ಬೋಟ್‌ಗಳು ತಕ್ಷಣವೇ ಸಹಾಯಕ್ಕೆ ಧಾವಿಸಿವೆ. ನಂತರ ಗಡಿ ರಕ್ಷಣಾ ಪಡೆ, ನೌಕಾಪಡೆ, ಕರಾವಳಿ ಪಡೆ ಮತ್ತು ಇತರ ರಕ್ಷಣಾ ತಂಡಗಳು ಸಕ್ರಿಯವಾಗಿ ಕಾರ್ಯಾಚರಣೆ ನಡೆಸಿ 21 ಜನರನ್ನು ರಕ್ಷಿಸಿವೆ. ಆದರೆ ದುರದೃಷ್ಟವಶಾತ್ 21 ಜನ ಅಸುನೀಗಿದ್ದಾರೆ.
ಭಾರತೀಯ ದೂತಾವಾಸವು ಹನಾಯ್ ಮತ್ತು ಹೋ ಚಿ ಮಿನ್ ಸಿಟಿಯಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆದಿದೆ. ಸಹಾಯಕ್ಕಾಗಿ ಹೋ ಚಿ ಮಿನ್ ಸಿಟಿ:
ಮೋದಿ ಸಂತಾಪ: ಈ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ‘ಫು ಕ್ವಾಕ್ ಸಮೀಪ ನಡೆದ ಬೋಟ್ ಅಪಘಾತದಲ್ಲಿ ಭಾರತೀಯರು ಮೃತಪಟ್ಟ ಸುದ್ದಿ ತಿಳಿದು ಬಹಳ ದುಃಖವಾಗಿದೆ. ಭಾರತೀಯ ದೂತಾವಾಸ ಎಲ್ಲಾ ಸಹಾಯವನ್ನು ಒದಗಿಸುತ್ತಿದೆ. ವಿಯೆಟ್ನಾಂ ಅಧಿಕಾರಿಗಳೊಂದಿಗೆ ನಮ್ಮ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.