32 ಕರೂರು ಸಂತ್ರಸ್ತ ಕುಟುಂಬಗಳಿಗೆ ವಿಜಯ್‌ ಸರ್ಕಾರಿ ನೌಕರಿ

Published : Jul 11, 2026, 12:52 PM IST
CM Vijay

ಸಾರಾಂಶ

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕಳೆದ ವರ್ಷ ಕರೂರು ಕಾಲ್ತುಳಿತದಿಂದ ಸಂತ್ರಸ್ತರಾಗಿದ್ದ 32 ಕುಟುಂಬಗಳ ಸದಸ್ಯರಿಗೆ ಸರ್ಕಾರಿ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಿದರು. ಈ ವೇಳೆ ಅವರು ಭಾವುಕರಾಗಿ ಗದ್ಗದಿತರಾದರು.

ಕರೂರು: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕಳೆದ ವರ್ಷ ಕರೂರು ಕಾಲ್ತುಳಿತದಿಂದ ಸಂತ್ರಸ್ತರಾಗಿದ್ದ 32 ಕುಟುಂಬಗಳ ಸದಸ್ಯರಿಗೆ ಸರ್ಕಾರಿ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಿದರು. ಈ ವೇಳೆ ಅವರು ಭಾವುಕರಾಗಿ ಗದ್ಗದಿತರಾದರು.

ಕಾಲ್ತುಳಿತ ಸಂತ್ರಸ್ತರಿಗೆ ಸರ್ಕಾರಿ ನೌಕರಿ

ಕಾಲ್ತುಳಿತ ಸಂತ್ರಸ್ತರಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನು ವಿಜಯ್‌ ಚುನಾವಣೆಗೂ ಮುನ್ನ ನೀಡಿದ್ದರು. ಅದನ್ನು ಈಗ ಈಡೇರಿಸಲಾಗಿದೆ. ವಿಜಯ್ ರ್‍ಯಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ 41 ಜನ ಬಲಿಯಾಗಿದ್ದರು.

ಹೈಕೋರ್ಟ್‌ ಷರತ್ತಿನ ಅಸ್ತು:

ಇದಕ್ಕೂ ಮುನ್ನ, ನೇಮಕ ಆದೇಶ ಪ್ರಶ್ನಿಸಿ ನಾಮ್ ತಮಿಳರ್ ಕಚ್ಚಿ ನಾಯಕ ತೀರನ್ ತಿರುಮುರುಗನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್, ‘ನೇಮಕಾತಿ ಆದೇಶ ವಿತರಣೆಗೆ ನಾವು ತಡೆ ನೀಡಲ್ಲ. ಆದರೆ ಕಾಲ್ತುಳಿತ ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ. ಅಂತಿಮ ಆದೇಶ ಹೊರಬರುವವರೆಗೆ ಈ ನೌಕರಿಗಳು ತಾತ್ಕಾಲಿಕ ಆಗಿರುತ್ತವೆ. ಆದೇಶ ಆಧರಿಸಿ ನೌಕರಿಗಳ ಮುಂದಿನ ಹಣೆಬರಹ ನಿರ್ಧಾರ ಆಗುತ್ತದೆ’ ಎಮದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಥೆನಾಲ್‌ ಮಿಶ್ರಣ ಏಕೆ ಅಗತ್ಯ ? ಕೇಂದ್ರದಿಂದ 6 ಅಂಶಗಳ ಸ್ಪಷ್ಟನೆ
ಅಯೋಧ್ಯೆ ಹುಂಡಿ ಎಣಿಸುವ ಸಿಬ್ಬಂದಿಗೆ ಜೇಬಿಲ್ಲದ ಧಿರಿಸು!