;Resize=(412,232))
ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್ ಮಿಶ್ರಣಗೊಳಿಸುವ ಕೇಂದ್ರ ಸರ್ಕಾರದ ನೀತಿಯ ಕುರಿತಾಗಿ ಜನರಲ್ಲಿ ಕೆಲವು ಗೊಂದಲಗಳು ಮೂಡಿವೆ. ಈ ಕುರಿತು ಜೂ.23ರಂದೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟೀಕರಣ ನೀಡಿದರೂ ಜನರಲ್ಲಿ ಕಳವಳ ಮುಂದುವರಿದಿದೆ. ಹೀಗಾಗಿ ಈ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಗೊಂದಲ ಪರಿಹಾರಕ್ಕೆ ಸರ್ಕಾರ ಯತ್ನಿಸಿದೆ.
ಈ ಯೋಜನೆ ಮೋದಿ ಅವಧಿಯಲ್ಲಿ ಆರಂಭವಾಗಿದ್ದಲ್ಲ. 2001ರಲ್ಲೇ ಚಾಲನೆ ನೀಡಿ, 2004ರಲ್ಲಿ ಅಧಿಕೃತವಾಗಿ ಘೋಷಿಸಿ, 2006ರಲ್ಲಿ ಇ5 ಅನ್ನು ಹಲವಾರು ರಾಜ್ಯಗಳಲ್ಲಿ ಜಾರಿಗೊಳಿಸಲಾಯಿತು. 2013ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಯಿತು.
ಇ10 ಮತ್ತು ಇ20 ಪರಿಚಯಕ್ಕೂ ಮುನ್ನ ಆಟೋಮೊಬೈಲ್ ಕಂಪನಿಗಳೊಂದಿಗೆ ಪ್ರತಿ ಹಂತದಲ್ಲೂ ಸಮಾಲೋಚನೆ ನಡೆಸಲಾಗಿದೆ. ವಾಹನ ತಯಾರಕರು ಈ ಬಗ್ಗೆ ಸಂಪೂರ್ಣವಾಗಿ ತೃಪ್ತರಾಗಿರದಿದ್ದರೆ, ಅವರು ಎಥೆನಾಲ್ ಪರವಾಗಿ ನಿಲ್ಲುತ್ತಿರಲಿಲ್ಲ ಅಥವಾ ವಾಹನಗಳ ವಾರಂಟಿ ನೀಡುತ್ತಿರಲಿಲ್ಲ.
3. ಹಳೆಯ ವಾಹನಗಳ ಕಥೆಯೇನು?
ಮಾರುತಿ ಸುಜುಕಿ 2025-26ರಲ್ಲಿ 2.84 ಕೋಟಿ ವಾಹನಗಳಿಗೆ ಸರ್ವಿಸ್ ನೀಡಿದೆ. ಇದರಲ್ಲಿ 1.5 ಕೋಟಿ ಹಳೆಯ, ಇ20 ಪ್ರಮಾಣೀಕೃತವಲ್ಲದ ವಾಹನಗಳಿದ್ದವು. ಇ20ನಿಂದಾಗಿ ಕೊರೋಷನ್ ಅಥವಾ ಹಾನಿ ಆಗಿಲ್ಲ. ಹೀರೋ ಮೋಟೋಕಾರ್ಪ್‌ನಲ್ಲೂ ಇದೇ ಅನುಭವವಾಗಿದೆ.
4. ಇ20ಯಿಂದ ಮೈಲೇಜ್ ಕಡಿಮೆಯಾಗುತ್ತದೆಯೇ?
ಕೆಲವು ವಾಹನಗಳಲ್ಲಿ ಶೇ.3-5 ಮೈಲೇಜ್ ಕಡಿಮೆಯಾಗಬಹುದು. ಆದರೆ ಇ20 ಹೆಚ್ಚು ಆಕ್ಟೇನ್ ರೇಟಿಂಗ್, ಉತ್ತಮ ಪಿಕಪ್, ಸ್ಮೂತ್ ಆಕ್ಸೆಲರೇಷನ್, ಕಡಿಮೆ ಪಾರ್ಟಿಕ್ಯುಲೇಟ್ ಎಮಿಷನ್ ಮತ್ತು ಸುಮಾರು ಶೇ.40 ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡುತ್ತದೆ.
5. ಶುದ್ಧ ಪೆಟ್ರೋಲ್, ಇ10 ಮತ್ತು ಇ20 ಎಲ್ಲವನ್ನೂ ಏಕೆ ಒಟ್ಟಿಗೆ ಪೂರೈಕೆ ಮಾಡಬಾರದು?
ಪ್ರತ್ಯೇಕ ಸರಬರಾಜು ಮಾಡುವುದರಿಂದ ದೊಡ್ಡ ಲಾಜಿಸ್ಟಿಕ್ ಸವಾಲು ಎದುರಾಗುತ್ತದೆ. ನಿರ್ವಹಣೆ ಮತ್ತು ಕಾರ್ಯಾಚರಣೆಯ ವೆಚ್ಚವೂ ಹೆಚ್ಚುತ್ತದೆ.
6. ಇ20 ಮುಂದುವರಿಸುವುದು ಏಕೆ?
ಎಥನಾಲ್ ಉತ್ಪಾದನೆಗೆ ಸಾರ್ವಜನಿಕ ಬ್ಯಾಂಕ್‌ಗಳು ಸುಮಾರು 1 ಲಕ್ಷ ಕೋಟಿ ರು. ಹೂಡಿಕೆ ಮಾಡಿವೆ. ರೈತರು, ಸಹಕಾರ ಸಂಸ್ಥೆಗಳು, ಉದ್ಯಮಿಗಳು ಹೂಡಿಕೆ ಮಾಡಿದ್ದಾರೆ. ಈಗ ಹಿಂದಕ್ಕೆ ಹೋಗುವುದು ಸಾಧ್ಯವಿಲ್ಲ. ಇ20 ಶುದ್ಧವಾದ ಮತ್ತು ಕಡಿಮೆ ಹೊರಸೂಸುವಿಕೆ, ಕಡಿಮೆ ಕಚ್ಚಾತೈಲ ಆಮದು, ರೈತರ ಆದಾಯ ಹೆಚ್ಚಳ ಮತ್ತು ದೇಶದ ಇಂಧನ ಶಕ್ತಿ ಸುರಕ್ಷತೆಗೆ ಕಾರಣವಾಗುತ್ತದೆ.