ಪ್ರಯಾಗರಾಜ್‌ : ಮಹಾ ಕುಂಭಮೇಳಕ್ಕೆ ಆಗಮಿಸಿರುವ ಐಐಟಿ ಬಾಬಾ ಅಭಯ್‌ ಸಿಂಗ್‌ ಅಖಾಡದಿಂದ ಹೊರಕ್ಕೆ

KannadaprabhaNewsNetwork |  
Published : Jan 20, 2025, 01:32 AM ISTUpdated : Jan 20, 2025, 04:25 AM IST
‘ಐಐಟಿ ಬಾಬಾ’ | Kannada Prabha

ಸಾರಾಂಶ

ಇಲ್ಲಿನ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಸಹಸ್ರಾರು ಸಾಧುಗಳ ಪೈಕಿ ‘ಐಐಟಿ ಬಾಬಾ’ ಎಂದೇ ವೈರಲ್‌ ಆಗುತ್ತಿರುವ ಅಭಯ್‌ ಸಿಂಗ್‌ರನ್ನು ಅವರ ಅಖಾಡದಿಂದ ಹೊರಹಾಕಲಾಗಿದೆ.

ಪ್ರಯಾಗರಾಜ್‌: ಇಲ್ಲಿನ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಸಹಸ್ರಾರು ಸಾಧುಗಳ ಪೈಕಿ ‘ಐಐಟಿ ಬಾಬಾ’ ಎಂದೇ ವೈರಲ್‌ ಆಗುತ್ತಿರುವ ಅಭಯ್‌ ಸಿಂಗ್‌ರನ್ನು ಅವರ ಅಖಾಡದಿಂದ ಹೊರಹಾಕಲಾಗಿದೆ.

ಜುನಾ ಅಖಾಡಕ್ಕೆ ಸೇರಿದ್ದ ಇವರು ಗುರು ಮಹಾಂತ ಸೋಮೇಶ್ವರ್‌ ಪುರಿಯವರನ್ನು ಮಾಧ್ಯಮಗಳ ಮುಂದೆ ನಿಂದನೆ ಮಾಡುತ್ತಿದ್ದ ಕಾರಣ ಅಖಾಡ ಹಾಗೂ ಅದರ ಸುತ್ತಮುತ್ತ ಸುಳಿಯುವುದರಿಂದ ನಿರ್ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದರೆ ಈ ಕುರಿತು ಮಾತನಾಡಿರುವ ಜುನಾ ಅಖಾಡದ ಸದಸ್ಯರೊಬ್ಬರು, ‘ಆತ ಸಾಧುವಲ್ಲ, ಅಲೆಮಾರಿ. ಟೀವಿ ಎದುರು ಏನೇನೋ ಹೇಳುತ್ತಿದ್ದ ಕಾರಣ ಅವರನ್ನು ಹೊರಹಾಕಲಾಗಿದೆ. ಆತ ಯಾರ ಶಿಷ್ಯನೂ ಆಗಿರಲಿಲ್ಲ’ ಎಂದು ತಿಳಿಸಿದ್ದಾರೆ.

ನನ್ನ ಜನಪ್ರಿಯತೆ ಸಹಿಸದೆ ಈ ಕ್ರಮ:

ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿರುವ ಐಐಟಿ ಬಾಬಾ, ‘ನಾನು ಜನಪ್ರಿಯನಾಗಿರುವ ಕಾರಣ ಅವರ ಬಗ್ಗೆ ಬಾಯ್ಬಿಡಬಹುದು ಎಂದು ಬೆದರಿ, ನಾನು ರಹಸ್ಯ ತಪಸ್ಸಿನಲ್ಲಿ ತೊಡಗಿರುವುದಾಗಿ ಹೇಳುತ್ತಿದ್ದಾರೆ’ ಎಂದಿದ್ದಾರೆ.

ಹರ್ಯಾಣದವರಾಗಿರುವ ಇವರು ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದು, ಇನ್ಸ್‌ಟಾಗ್ರಾಂನಲ್ಲಿ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.

ಕೋಟಾ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಲವ್ ಕೇಸ್ ಕಾರಣ:ಸಚಿವ

ಜೈಪುರ: ಉನ್ನತ ಪರೀಕ್ಷೆಗಳ ಕೋಚಿಂಗ್‌ಗೆ ದೇಶದಲ್ಲೇ ನಂ.1 ಹಬ್‌ ಆಗಿರುವ ರಾಜಸ್ಥಾನದ ಕೋಟಾ ವಿದ್ಯಾರ್ಥಿಗಳ ಸತತ ಆತ್ಮಹತ್ಯೆಗಳ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ರಾಜ್ಯ ಶಿಕ್ಷಣ ಸಚಿವ ಮದನ್‌ ದಿಲಾವರ್‌, ‘ಆತ್ಮಹತ್ಯೆಗೆ ಪ್ರೇಮ ಪ್ರಕರಣಗಳೇ ಕಾರಣ’ ಎಂದು ಆರೋಪಿಸಿದ್ದಾರೆ.ಭಾನುವಾರ ಮಾತನಾಡಿದ ಅವರು, ‘ಹಲವು ಸಂದರ್ಭಗಳಲ್ಲಿ, ಪ್ರೇಮ ಪ್ರಕರಣಗಳು ಇವೆ ಮತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಮ್ಮ ಮಕ್ಕಳ ಚಲನವಲನ ಮತ್ತು ದಿನಚರಿಯ ಬಗ್ಗೆ ಪಾಲಕರು ಗಮನಹರಿಸಬೇಕು ಮತ್ತು ತಮ್ಮ ಮಕ್ಕಳ ಮೇಲೆ ಓದುವಂತೆ ಒತ್ತಡ ಹೇರಬಾರದು’ ಎಂದರು.

ಈ ವರ್ಷದ ಮೊದಲ 3 ವಾರದಲ್ಲಿ 3 ವಿದ್ಯಾರ್ಥಿಗಳು ಕೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷವೂ ಅನೇಕ ಆತ್ಮಹತ್ಯೆಗಳು ನಡೆದಿದ್ದವು.

90 ತಾಸು ದುಡಿತ ಕಷ್ಟ, ಗುಣಮಟ್ಟ ಮುಖ್ಯ: ಭಾರತ್‌ಪೇ ಸಿಇಒ

ನವದೆಹಲಿ: ‘ವಾರಕ್ಕೆ 90 ತಾಸು ಕೆಲಸ ಮಾಡಬೇಕು. ಭಾನುವಾರದ ರಜೆಯನ್ನೂ ತ್ಯಜಿಸಿ ದುಡಿಯಬೇಕು’ ಎಂಬ ಎಲ್‌&ಟಿ ಸಂಸ್ಥೆ ಸಿಇಒ ಎಸ್‌.ಎನ್‌. ಸುಬ್ರಹ್ಮಣಿಯನ್‌ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ್‌ಪೇ ಸಿಇಒ ನಳಿನ್‌ ನೇಗಿ, ‘ಕೆಲಸದ ಗುಣಮಟ್ಟ ಮುಖ್ಯವೇ ಹೊರತು ಎಷ್ಟು ಗಂಟೆ ಕೆಲಸ ಮಾಡುತ್ತಾರೆ ಎಂಬುದಲ್ಲ’ ಎಂದಿದ್ದಾರೆ.ಭಾನುವಾರ ಅವರು ಮಾತನಾಡಿ, ‘90 ಗಂಟೆ ಸುದೀರ್ಘ ಅವಧಿ. ಅಷ್ಟು ಕೆಲಸ ಮಾಡುವುದು ಕಷ್ಟ. 6 ವರ್ಷದ ಭಾರತ್‌ ಪೇ, ತನ್ನ ಉದ್ಯೋಗಿಗಳಿಗೆ ಆರಾಮದಾಯಕ ಹಾಗೂ ಅವರು ತಮ್ಮ ಪೂರ್ಣ ಸಾಮರ್ಥ್ಯ ಬಳಸಿಕೊಳ್ಳುವಂತಹ ವಾತಾವರಣ ನಿರ್ಮಿಸಿದೆ’ ಎಂದರು.

‘ಉದ್ಯೋಗಿ ಸಂತೋಷವಾಗಿದ್ದರೆ ತಮ್ಮ ಸಾಮರ್ಥ್ಯಾನುಸಾರ ಕೆಲಸ ಮಾಡುತ್ತಾರೆ. ತುರ್ತು ಕೆಲಸವಿದ್ದರೂ ಮಾಡುತ್ತಾರೆ. ನಾವು ಹಿಂದೆ ಬಿದ್ದು ಮಾಡಿಸುವ ಅಗತ್ಯವಿರುವುದಿಲ್ಲ’ ಎಂದರು.ಈ ಮೊದಲು ಇನ್ಫೋಸಿಸ್‌ನ ಸಹಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಕಂಗನಾ ‘ಎಮರ್ಜೆನ್ಸಿ’ 2 ದಿನದಲ್ಲಿ ₹7.39 ಕೋಟಿ ಗಳಿಕೆ

ನವದೆಹಲಿ: ಕಂಗನಾ ರಾಣಾವತ್‌ ನಿರ್ದೇಶನ ಹಾಗೂ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಯಾದ ಎರಡು ದಿನಕ್ಕೆ ದೇಶಾದ್ಯಂತ 7.39 ಕೋಟಿ ರು. ಗಳಿಸಿದೆ.ಎಮರ್ಜೆನ್ಸಿ ಚಿತ್ರ ಮೊದಲ ದಿನ 3.11 ಕೋಟಿ ರು. ಹಾಗೂ 2ನೇ ದಿನ 4.28 ಕೋಟಿ ರು. ಗಳಿಸಿದೆ ಎಂದು ಕಂಗನಾರ ಮಣಿಕರ್ಣಿಕಾ ಫಿಲಂಸ್‌ ಹೇಳಿದೆ.

1975- 1977 ಅವಧಿಯಲ್ಲಿ ಹೇರಲಾಗಿದ್ದ 21 ತಿಂಗಳುಗಳ ತುರ್ತು ಸ್ಥಿತಿಯನ್ನಾಧರಿಸಿರುವ ಈ ಚಿತ್ರದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಸಿಖ್ ಸಮುದಾಯದ ತಪ್ಪಾದ ಪ್ರತಿನಿಧಿಸುವಿಕೆ, ಸೆನ್ಸಾರ್‌ ಪ್ರಮಾಣಪತ್ರದ ವಿವಾದ ಸೇರಿದಂತೆ ಹಲವು ಸಮಸ್ಯೆಗಳನ್ನೆದುರಿಸಿದ ಈ ಸಿನಿಮಾವನ್ನು, ಪಂಜಾಬ್‌ ಹೊರತುಪಡಿಸಿ ದೇಶಾದ್ಯಂತ ಶುಕ್ರವಾರ ಬಿಡುಗಡೆಗೊಳಿಸಲಾಗಿತ್ತು.


ಹಿಂಡನ್‌ಬರ್ಗ್‌ ವಿರುದ್ಧ ಇನ್ನೊಂದು ವಂಚನೆ ಆರೋಪ

ಟೊರಂಟೋ: ಭಾರತದ ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಹಗರಣಗಳ ಆರೋಪ ಹೊರಿಸಿದ್ದ ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆ ಮೇಲೆ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ. ‘ಕೆನಡಾದ ಆ್ಯನ್ಸನ್‌ ಹೆಜ್‌ ಫಂಡ್‌ನಿಂದ ಕೆಲವು ಮಾಹಿತಿಗಳನ್ನು ಪಡೆದು ವರದಿಗಳನ್ನು ಅದು ಸಿದ್ಧಪಡಿಸಿತ್ತು’ ಎಂದು ಕೆನಡಾ ಕೋರ್ಟಲ್ಲಿ ತನ್ನ ವಿರುದ್ಧ ನಡೆದಿರುವ ಮಾನಹಾನಿ ಮೊಕದ್ದಮೆ ವಿಚಾರಣೆ ವೇಳೆ, ಖುದ್ದು ಹೆಜ್‌ ಫಂಡ್‌ ಮಾಹಿತಿ ನೀಡಿದೆ. ಈ ರೀತಿ ರಹಸ್ಯವಾಗಿ ಮಾಹಿತಿ ಪಡೆಯುವುದ ಅಮೆರಿಕ ಕಾನೂನು ಪ್ರಕಾರ ಅಪರಾಧ. ಇತ್ತೀಚೆಗೆ ಹಿಂಡನ್‌ಬರ್ಗ್‌ ಸಂಸ್ಥೆಯನ್ನು ಮುಚ್ಚುತ್ತೇವೆ ಎಂದು ಅದರ ಮುಖ್ಯಸ್ಥ ನ್ಯಾಟೇ ಆ್ಯಂಡರ್ಸನ್‌ ಹೇಳಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!