ಮಸ್ಕ್‌ರ ಸ್ಟಾರ್‌ಲಿಂಕ್‌ ಉಪಗ್ರಹಗಳ ಧ್ವಂಸಕ್ಕೆ ರಷ್ಯಾ ಶಸ್ತ್ರ ತಯಾರಿ?

KannadaprabhaNewsNetwork |  
Published : Dec 23, 2025, 02:00 AM IST
ಮಸ್ಕ್ | Kannada Prabha

ಸಾರಾಂಶ

ಉಪಗ್ರಹಗಳ ಮೂಲಕ ಕುಗ್ರಾಮಗಳಿಗೂ ಅಂತರ್ಜಾಲ ತಲುಪಿಸುವ ಉದ್ದೇಶ ಹೊಂದಿರುವ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ರ ಸ್ಟಾರ್‌ಲಿಂಕ್‌ ಉಪಗ್ರಹಗಳ ಪುಂಜವನ್ನು ಧ್ವಂಸಗೊಳಿಸಲು ರಷ್ಯಾ ಹೊಸ ಆಯುಧವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ನ್ಯಾಟೋದ 2 ಸದಸ್ಯ ರಾಷ್ಟ್ರಗಳ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿವೆ.

ಪ್ಯಾರಿಸ್‌: ಉಪಗ್ರಹಗಳ ಮೂಲಕ ಕುಗ್ರಾಮಗಳಿಗೂ ಅಂತರ್ಜಾಲ ತಲುಪಿಸುವ ಉದ್ದೇಶ ಹೊಂದಿರುವ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ರ ಸ್ಟಾರ್‌ಲಿಂಕ್‌ ಉಪಗ್ರಹಗಳ ಪುಂಜವನ್ನು ಧ್ವಂಸಗೊಳಿಸಲು ರಷ್ಯಾ ಹೊಸ ಆಯುಧವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ನ್ಯಾಟೋದ 2 ಸದಸ್ಯ ರಾಷ್ಟ್ರಗಳ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿವೆ.  

ಮೋಡದಂತೆ ಹರಡುವ ತಂತ್ರ

ರಷ್ಯಾ ‘ಕ್ಲೌಡ್‌ ಆಫ್‌ ಶಾರ್ಪ್‌ನೆಲ್‌’ ಅಂದರೆ ಸಣ್ಣಸಣ್ಣ ಲೋಹದ ತುಂಡುಗಳ ಗುಂಪನ್ನು ಬಾಹ್ಯಾಕಾಶದಲ್ಲಿ ಮೋಡದಂತೆ ಹರಡುವ ತಂತ್ರವನ್ನು ಉಪಯೋಗಿಸಲು ಮುಂದಾಗಿದೆ. ಭೂಮಿಯ ಕೆಳಕಕ್ಷೆಯಲ್ಲಿ ವೇಗವಾಗಿ ಚಲಿಸುತ್ತಿರುವ ಸ್ಟಾರ್‌ಲಿಂಕ್‌ ಉಪಗ್ರಹಗಳು ಈ ಲೋಹಗಳಿಗೆ ಡಿಕ್ಕಿಯಾಗಿ ಹಾಳಾಗುವಂತೆ ಮಾಡುವುದು ಇದರ ಉದ್ದೇಶ ಎಂದು ವರದಿಯಾಗಿದೆ.

 ಸ್ಟಾರ್‌ಲಿಂಕ್‌ ಬಳಸಿಕೊಂಡು ಉಕ್ರೇನ್‌ನಲ್ಲಿ ಸಂವಹನ ಸೇವೆ ಒದಗಿಸಿದ್ದರು

ಯುದ್ಧ ವೇಳೆ ಉಕ್ರೇನ್‌ ಸಂಪರ್ಕ ವ್ಯವಸ್ಥೆಯನ್ನು ರಷ್ಯಾ ಧ್ವಂಸ ಮಾಡಿದ್ದ ವೇಳೆ ಮಸ್ಕ್‌, ತುರ್ತಾಗಿ ತಮ್ಮ ಸ್ಟಾರ್‌ಲಿಂಕ್‌ ಬಳಸಿಕೊಂಡು ಉಕ್ರೇನ್‌ನಲ್ಲಿ ಸಂವಹನ ಸೇವೆ ಒದಗಿಸಿದ್ದರು. ದಕ್ಕೆ ಪ್ರತೀಕಾರವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಈ ಸಾಹಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಇದು ನಿಜವೇ ಆದಲ್ಲಿ, ಅಮೆರಿಕದ ವಿರುದ್ಧ ರಷ್ಯಾ ನೇರ ಯುದ್ಧ ಸಾರಿದಂತಾಗಿ ಅಂತರಿಕ್ಷ ಸಮರ ಶುರುವಾಗುವ ಆತಂಕವನ್ನು ಅಲ್ಲಗಳೆಯಲಾಗದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ