ವಿದೇಶಿಯರ ಪ್ರವೇಶವನ್ನು ನಿಯಂತ್ರಿಸುವ ಅಕ್ರಮ ವಲಸೆ ತಡೆ ಮಸೂದೆ ಅಂಗೀಕಾರ : ಏನಿದೆ?

KannadaprabhaNewsNetwork |  
Published : Mar 28, 2025, 12:31 AM ISTUpdated : Mar 28, 2025, 05:03 AM IST
Union Home Minister Amit Shah (Photo/X/@AmitShah)

ಸಾರಾಂಶ

ದೇಶದೊಳಗೆ ವಿದೇಶಿಯರ ಪ್ರವೇಶವನ್ನು ನಿಯಂತ್ರಿಸುವ ಮತ್ತು ಅಕ್ರಮ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ರೂಪಿಸಲಾದ ವಲಸೆ ಮತ್ತು ವಿದೇಶಿಯರ ಮಸೂದೆ, 2025ಅನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

ನವದೆಹಲಿ: ದೇಶದೊಳಗೆ ವಿದೇಶಿಯರ ಪ್ರವೇಶವನ್ನು ನಿಯಂತ್ರಿಸುವ ಮತ್ತು ಅಕ್ರಮ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ರೂಪಿಸಲಾದ ವಲಸೆ ಮತ್ತು ವಿದೇಶಿಯರ ಮಸೂದೆ, 2025ಅನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ವೀಸಾ ನೋಂದಣಿ, ಪಾಸ್‌ಪೋರ್ಟ್‌ಗಳಂತಹ ಪ್ರಯಾಣ ಸಂಬಂಧಿತ ದಾಖಲೆಗಳು ಸೇರಿದಂತೆ ವಿದೇಶಿಯರ ಭಾರತ ಪ್ರವೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಉದ್ದೇಶವಾಗಿದೆ.

ಈ ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ವಲಸೆ ಸಮಸ್ಯೆಯು ಹಲವು ದೇಶಗಳಿಗೆ ಸಂಬಂಧಿಸಿದ್ದಾಗಿದೆ. ದೇಶದ ಭದ್ರತಾ ದೃಷ್ಟಿಯಿಂದ ಗಡಿಯನ್ನು ಪ್ರವೇಶಿಸುವವರ ಮೇಲೆ, ಮುಖ್ಯವಾಗಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡುವವರ ಮೇಲೆ ಕಣ್ಣಿಡುವುದು ಅವಶ್ಯಕ’ ಎಂದರು. ಇದೇ ವೇಳೆ, ‘ಭಾರತ ಧರ್ಮಶಾಲೆಯಲ್ಲ’ ಎಂದು ಮಾರ್ಮಿಕವಾಗಿ ನುಡಿದರು. ==

ಮಸೂದೆಯಲ್ಲಿ ಏನಿದೆ?:

ವಲಸಿಗರು ಭಾರತಕ್ಕೆ ಪ್ರವೇಶಿಸುತ್ತಿದ್ದಂತೆ ಅದರ ನೋಂದಣಿ ಕಡ್ಡಾಯ

ಕೆಲ ಸ್ಥಳಗಳಿಗೆ ಪ್ರಯಾಣಿಸುವುದು, ಹೆಸರು ಬದಲು, ಸಂರಕ್ಷಿತ ಅಥವಾ ನಿರ್ಬಂಧಿತ ಪ್ರದೇಶಗಳಲ್ಲಿ ವಾಸದ ಮೇಲೆ ನಿರ್ಬಂಧ

ಮಾನ್ಯ ವೀಸಾ, ಪಾಸ್‌ಪೋರ್ಟ್ ಇಲ್ಲದ ವಿದೇಶಿಯರಿಗೆ 5 ವರ್ಷ ಜೈಲು ಶಿಕ್ಷೆ ಅಥವಾ 5 ಲಕ್ಷ ರು. ದಂಡ -ನಕಲಿ ದಾಖಲೆ ಬಳಸಿ ಪ್ರವೇಶ, ವಾಸ, ನಿರ್ಗಮನಕ್ಕೆ 2ರಿಂದ 7 ವರ್ಷ ಜೈಲು ಮತ್ತು 10 ಲಕ್ಷ ರು. ವರೆಗೆ ದಂಡ

ಅವಧಿ ಮೀರಿ ಭಾರತದಲ್ಲಿ ವಾಸ, ವೀಸಾ ನಿಯಮ ಉಲ್ಲಂಘಿಸಿದರೆ 3 ವರ್ಷ ಸೆರೆವಾಸ ಅಥವಾ 3 ಲಕ್ಷ ರು. ದಂಡ

ಶಿಕ್ಷಣ ಸಂಸ್ಥೆ, ವಿವಿ, ಆಸ್ಪತ್ರೆ, ನರ್ಸಿಂಗ್ ಹೋಂಗಳು ವಿದೇಶಿಯರ ಬಗ್ಗೆ ನೋಂದಣಿ ಕಚೇರಿಗೆ ವರದಿ ಮಾಡುವುದು ಕಡ್ಡಾಯ

ಮಾನ್ಯ ದಾಖಲೆಗಳಿಲ್ಲದವರ ಪ್ರಯಾಣಕ್ಕೆ ಸಹಕರಿಸಿದ ಸಾರಿಗೆ ಕಂಪನಿಗಳ ಮೇಲೆ 5 ಲಕ್ಷ ರು. ದಂಡ. ತಪ್ಪಿದಲ್ಲಿ ಪರವಾನಗಿ ಜಪ್ತಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ಟಾರ್‌ವಾರ್‌ ರೀತಿ ಲೇಸರ್‌ ಅಸ್ತ್ರ ರಾಜ್ಯದಲ್ಲಿ ಅಭಿವೃದ್ಧಿ!
ಗೌರಿ ಲಂಕೇಶ್‌ ಹತ್ಯೆ ಆರೋಪಿ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ