20 ವರ್ಷ ಹಿಂದೆ ವಿದೇಶಿಗನ ಮರಣ ಪತ್ರದಲ್ಲಿತ್ತು ಜ್ಞಾನೇಶ್‌ ಹೆಸರು

KannadaprabhaNewsNetwork |  
Published : Sep 27, 2026, 03:15 AM IST
CEC

ಸಾರಾಂಶ

ಅಂದು ಕೇರಳ ಕೇಡರ್‌ ಐಎಎಸ್‌ ಅಧಿಕಾರಿ ಆಗಿದ್ದ ಈಗಿನ ವಿವಾದಿತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ಹೆಸರನ್ನು ಮರಣಪತ್ರದಲ್ಲಿ ಉಲ್ಲೇಖಿಸಿ ಮಲೇಷ್ಯಾದ ವ್ಯಕ್ತಿಯೊಬ್ಬರು 20 ವರ್ಷದ ಹಿಂದೆ ಆತ್ಮ*ತ್ಯೆ ಮಾಡಿಕೊಂಡಿದ್ದರು ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ತಿರುವನಂತಪುರಂ: ಅಂದು ಕೇರಳ ಕೇಡರ್‌ ಐಎಎಸ್‌ ಅಧಿಕಾರಿ ಆಗಿದ್ದ ಈಗಿನ ವಿವಾದಿತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ಹೆಸರನ್ನು ಮರಣಪತ್ರದಲ್ಲಿ ಉಲ್ಲೇಖಿಸಿ ಮಲೇಷ್ಯಾದ ವ್ಯಕ್ತಿಯೊಬ್ಬರು 20 ವರ್ಷದ ಹಿಂದೆ ಆತ್ಮ*ತ್ಯೆ ಮಾಡಿಕೊಂಡಿದ್ದರು ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

2 ದಶಕದ ಹಿಂದಿನ ಘಟನೆ

2 ದಶಕದ ಹಿಂದಿನ ಘಟನೆಯನ್ನು ಕೇರಳದ ಮಾಜಿ ವಿತ್ತಸಚಿವರಾಗಿರುವ ಸಿಪಿಎಂ ನಾಯಕ ಟಿ.ಎಂ. ಥಾಮಸ್‌ ಐಸಾಕ್‌ ನೆನಪಿಸಿದ್ದಾರೆ. ‘

ರಸ್ತೆ ಯೋಜನೆಯೊಂದರ ಉಸ್ತುವಾರಿ ವಹಿಸಿಕೊಂಡಿದ್ದ ಮಲೇಷ್ಯಾದ ಅಧಿಕಾರಿ

‘ರಾಜ್ಯದಲ್ಲಿನ ರಸ್ತೆ ಯೋಜನೆಯೊಂದರ ಉಸ್ತುವಾರಿ ವಹಿಸಿಕೊಂಡಿದ್ದ ಮಲೇಷ್ಯಾದ ಅಧಿಕಾರಿ ಲೀ ಬೀನ್‌ ಸೀನ್‌ ಅವರು 2006ರ ನವೆಂಬರ್‌ನಲ್ಲಿ ಕೇರಳದಿಂದ ಕೌಲಾಲಂಪುರಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮರಣಪತ್ರದಲ್ಲಿ, ಅಂದು ಸಾರ್ವಜನಿಕ ನಿರ್ಮಾಣ ಇಲಾಖೆಯ (ಪಿಡಬ್ಲ್ಯುಡಿ) ಕಾರ್ಯದರ್ಶಿಯಾಗಿದ್ದ ಜ್ಞಾನೇಶ್ ಕುಮಾರ್ ಅವರ ಹೆಸರಿತ್ತು. ಜ್ಞಾನೇಶ್‌ ಸೇರಿದಂತೆ ಕೆಲ ಪಿಡಬ್ಲ್ಯುಡಿ ಅಧಿಕಾರಿಗಳ ಭ್ರಷ್ಟಾಚಾರ, ದುರಾಡಳಿತ ಮತ್ತು ಕಿರುಕುಳದಿಂದ ಬೇಸತ್ತಿದ್ದಾಗಿ ಅವರು ಬರೆದಿದ್ದರು’ ಎಂದು ಅವರು ಹೇಳಿದ್ದಾರೆ. ಮುಂದುವರಿದು, ‘ಇದರ ಬೆನ್ನಲ್ಲೇ ಜ್ಞಾನೇಶ್‌ ವಿರುದ್ಧ ವಿಜಿಲೆನ್ಸ್‌ ತನಿಖೆ ಶುರುವಾಯಿತು ಮತ್ತು 2006ರ ಅಂತ್ಯದ ವೇಳೆಗೆ ಅವರನ್ನು ರಕ್ಷಣಾ ಸಚಿವಾಲಯಕ್ಕೆ ವರ್ಗಾಯಿಸಲಾಯಿತು. ಕೇಂದ್ರದ ಮಟ್ಟಕ್ಕೆ ಹೋಗುತ್ತಿದ್ದಂತೆ ಅವರು ಬಿಜೆಪಿಯೊಂದಿಗೆ ಆಪ್ತರಾದರು’ ಎಂದು ಐಸಾಕ್‌ ಆರೋಪಿಸಿದ್ದಾರೆ. ಆದರೆ ಜ್ಞಾನೇಶ್‌ ವಿರುದ್ಧದ ತನಿಖೆಯು ಕಾರಣಾಂತರಗಳಿಂದ ಮುಂದುವರಿದಿರಲಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

*ನಗದು, ಚಿನ್ನ ಪ್ರದರ್ಶಿಸಿದ್ದ ಯೂಟ್ಯೂಬರ್‌ ಮನೆಗೆ ಕನ್ನ!
ಚು.ಆಯೋಗ ವಿವಾದ ಚರ್ಚೆಗೆ ಸೆ.30ಕ್ಕೆ ಇಂಡಿಯಾ ಕೂಟ ಸಭೆ