ವಾಷಿಂಗ್ಟನ್: ‘ಬಾಂಗ್ಲಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿ ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಹಾಗೂ ಪಲಾಯನಕ್ಕೆ ಅಮೆರಿಕ ಕಾರಣ’ ಎಂಬ ಆರೋಪವನ್ನು ಜೋ ಬೈಡೆನ್ ಸರ್ಕಾರ ಸೋಮವಾರ ತಳ್ಳಿಹಾಕಿದೆ.
ಸೆಂಟ್ ಮಾರ್ಟಿನ್ ದ್ವೀಪವನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟಿದ್ದರೆ ತಾನು ಅಧಿಕಾರದಲ್ಲಿ ಮುಂದುವರೆಯಬಹುದಿತ್ತು ಎಂದು ಹಸೀನಾ ತಮ್ಮ ಪದತ್ಯಾಗ ಭಾಷಣದಲ್ಲಿ ಹೇಳಿದ್ದರು ಎಂದು ವರದಿಯಾಗಿತ್ತು. ಈ ಬಗ್ಗೆ ಅಮೆರಿಕ ಪ್ರತಿಕ್ರಿಯಿಸಿದೆ.
ಆದರೆ ಹಸೀನಾರ ಪುತ್ರ ಸಜೀಬ್ ವಾಜಿದ್, ‘ನನ್ನ ತಾಯಿ ಯಾವುದೇ ಪದತ್ಯಾಗ ಭಾಷಣ ಸಿದ್ಧಪಡಿಸಿರಲಿಲ್ಲ. ಇದು ಸುಳ್ಳು’ ಎಂದಿದ್ದರು.==
ಢಾಕಾ: ಅಧಿಕಾರ ಕಳೆದುಕೊಂಡು ಬಾಂಗ್ಲಾದೇಶ ಬಿಟ್ಟು ಭಾರತಕ್ಕೆ ಪರಾರಿ ಆಗಿರುವ ಬಾಂಗ್ಲಾದ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ಹಾಗೂ 6 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಕಳೆದ ತಿಂಗಳು ಬಾಂಗ್ಲಾದಲ್ಲಿ ನಡೆದ ಗಲಭೆಯಲ್ಲಿ ದಿನಸಿ ಅಂಗಡಿ ಮಾಲೀಕನೊಬ್ಬ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ.
==
ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಪದಚ್ಯುತಗೊಂಡ ನಂತರ ತಮ್ಮ ಮೊದಲ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಜುಲೈನಲ್ಲಿ ಹತ್ಯೆಗಳು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಗೆ ಒತ್ತಾಯಿಸಿದ್ದಾರೆ.ದಿಲ್ಲಿಯಲ್ಲಿರುವ ಹಸೀನಾ ಪರ ಪುತ್ರ ವಾಜಿದ್ ಹೇಳಿಕೆ ಬಿಡುಗಡೆ ಮಾಡಿ, ‘ಕಳೆದ ಜುಲೈನಿಂದ ವಿಧ್ವಂಸಕತೆ ಅನೇಕ ಜೀವಗಳು ಕಳೆದುಹೋಗಿವೆ. ಅವರಿಗೆ ನನ್ನ ಸಂತಾಪಗಳು. ಈ ನಿಮಿತ್ತ ಆ.15 ರಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಗೌರವಯುತವಾಗಿ ಮತ್ತು ಗಂಭೀರತೆಯಿಂದ ಆಚರಿಸಲು ನಾನು ನಿಮಗೆ ಮನವಿ ಮಾಡುತ್ತೇನೆ’ ಎಂದಿದ್ದಾರೆ.